ಚಿಕ್ಕನಾಯಕನಹಳ್ಳಿ(ಜೂ.14): ಮದುವೆ ಮಾಡಲಿಲ್ಲವೆಂಬ ಕೋಪದಿಂದ ಕುಡಿದು ಬಂದು ಜನ್ಮಕೊಟ್ಟತಂದೆಯನ್ನೇ ಮಗನೊಬ್ಬ ಕೊಂದ ಘಟನೆ ಪಟ್ಟಣದ ಮಾರುತಿ ನಗರದಲ್ಲಿ ನಡೆದಿದೆ.

ಪಟ್ಟಣದ ಮಾರುತಿ ನಗರ ವಾರ್ಡ್‌ನಲ್ಲಿ ವಾಸಿಯಾದ ಸಣ್ಣಪ್ಪ (65)ಎಂಬಾತನೇ ಮಗನಿಂದ ಕೊಲೆಗೀಡಾದ ದುರ್ದೈವಿ. ಈತನ ಮಗ ವೆಂಕಟೇಶ್‌ (30) ಪ್ರತಿನಿತ್ಯ ಕುಡಿದು ಮನೆಗೆ ಬಂದು ತನ್ನ ತಂದೆಯ ಜೊತೆ ಮದುವೆ ಮಾಡುವಂತೆ ಜಗಳ ಕಾಯುತ್ತಿದ್ದ ಎನ್ನಲಾಗಿದೆ.

ದುಬೈನಲ್ಲಿ ಸಿಲುಕಿದ್ದ 184 ಜನರು ಭಟ್ಕಳಕ್ಕೆ ಆಗಮನ

ತನ್ನ ತಾಯಿ ಮತ್ತೊಬ್ಬ ಮಗನ ಮನೆಯಲ್ಲಿ ಶುಕ್ರವಾರ ರಾತ್ರಿ ತಂಗಲು ಹೋಗಿದ್ದಾಗ ಕುಡಿದು ಬಂದು ತಂದೆಯನ್ನು ಕೊಲೆ ಮಾಡಿದ್ದಾನೆ. ತಂದೆಯನ್ನು ಕೊಂದ ಆರೋಪಿಯನ್ನು ಬಂಧಿಸಲಾಗಿದೆ.