ದುಬೈನಲ್ಲಿ ಸಿಲುಕಿದ್ದ 184 ಜನರು ಭಟ್ಕಳಕ್ಕೆ ಆಗಮನ
ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ದುಬೈನಲ್ಲಿ ಸಿಲುಕಿದ್ದ 184 ಜನರು ಚಾರ್ಟಡ್ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದು ಶನಿವಾರ ಬೆಳಗ್ಗೆ 4 ಖಾಸಗಿ ಬಸ್‌ನಲ್ಲಿ ಭಟ್ಕಳಕ್ಕೆ ಆಗಮಿಸಿದ್ದು, ಎಲ್ಲರನ್ನೂ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಭಟ್ಕಳ(ಜೂ.14): ಲಾಕ್‌ಡೌನ್‌ನಿಂದಾಗಿ ಕಳೆದ ಎರಡೂವರೆ ತಿಂಗಳಿನಿಂದ ದುಬೈನಲ್ಲಿ ಸಿಲುಕಿದ್ದ 184 ಜನರು ಚಾರ್ಟಡ್ ವಿಶೇಷ ವಿಮಾನದ ಮೂಲಕ ಮಂಗಳೂರಿಗೆ ಬಂದು ಶನಿವಾರ ಬೆಳಗ್ಗೆ 4 ಖಾಸಗಿ ಬಸ್‌ನಲ್ಲಿ ಭಟ್ಕಳಕ್ಕೆ ಆಗಮಿಸಿದ್ದು, ಎಲ್ಲರನ್ನೂ 7 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್‌ನ ಮಾಲೀಕ ಹಾಗೂ ಭಟ್ಕಳದ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ರಹ್ಮಾನ್ ಮುನಿರಿಯ ನೇತೃತ್ವದಲ್ಲಿ ದುಬೈಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರು ಕೊನೆಗೂ ಭಟ್ಕಳವನ್ನು ಸೇರಿ ನಿಟ್ಟುಸಿರು ಬಿಟ್ಟಿದ್ದಾರೆ.
ಬೀಜಿಂಗ್‌ನಲ್ಲಿ 3 ದಿನದಲ್ಲಿ 46 ಮಂದಿಗೆ ಸೋಂಕು: ಮಾರುಕಟ್ಟೆ, ವಸತಿ ಪ್ರದೇಶ ಬಂದ್!
ದುಬೈನಿಂದ ಬಂದ 184 ಜನರಲ್ಲಿ ಗರ್ಭೀಣಿಯರು, ಮಕ್ಕಳು, ವಯೋವೃದ್ಧರು ಇದ್ದಾರೆ. ಬಸ್ ನಿಲ್ದಾಣದ ಸನಿಹದ ಕೋಲಾ ಪ್ಯಾರೈಡೈನ್‌ನಲ್ಲಿ 68, ನಿಲಾವರ ಪ್ಯಾಲೇಸ್‌ನಲ್ಲಿ 67 ಹಾಗೂ ಅಂಜುಮನ್ ಹಾಸ್ಟೆಲ್‌ನಲ್ಲಿ 49 ಮಂದಿ ಸೇರಿ ಒಟ್ಟು 184 ಜನರನ್ನು ಬಸ್ಸಿನಿಂದ ಇಳಿದ ಬಳಿಕ ನೇರವಾಗಿ ಕ್ವಾರಂಟೈನ್ ಮಾಡಲಾಗಿದೆ. ಎಲ್ಲರ ಗಂಟಲು ದ್ರವವನ್ನು ಪರೀಕ್ಷೆ ಕಳುಹಿಸುವ ವ್ಯವಸ್ಥೆ ಮಾಡಲಾಗಿದ್ದು, ಕ್ವಾರಂಟೈನ್ ಕೇಂದ್ರದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್‌್ತ ಏರ್ಪಡಿಸಲಾಗಿದೆ.
ಕ್ವಾರಂಟೈನ್ ಕೇಂದ್ರಕ್ಕೆ ಸಂಬಂಧಿಕರಿಗೂ ಸೇರಿದಂತೆ ಯಾರಿಗೂ ಹೋಗಲು ಬಿಡುತ್ತಿಲ್ಲ. ಶನಿವಾರ ಬೆಳಗ್ಗೆ ದುಬೈನಿಂದ ಬಂದ ಪ್ರಯಾಣಿಕರ ಲಗೇಜುಗಳನ್ನು ಬೇರ್ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕು ಆಡಳಿತ ಮತ್ತು ತಂಝೀಮ್ ಸಂಸ್ಥೆಯ ಸ್ವಯಂ ಸೇವಕರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ತಂಝೀಮ್ ಮುಖಂಡರು ತಾಲೂಕು ಆಡಳಿತದೊಂದಿಗೆ ನಾವು ನಿಮ್ಮ ಎಲ್ಲ ಸಲಹೆ-ಸೂಚನೆಗಳನ್ನು ಪಾಲಿಸುತ್ತಿದ್ದೇವೆ. ಆದರೆ, ತಾವು ಮಾತ್ರ ನಮ್ಮ ಯಾವುದೇ ಸಲಹೆಯನ್ನು ಗಮನಕ್ಕೆ ತೆಗೆದುಕೊಳ್ಳುತ್ತಿಲ್ಲ. ನೀವು ನಿಮ್ಮ ಮನಸ್ಸಿಗೆ ಬಂದ ಹಾಗೆ ಮಾಡಿದರೆ ನಾವು ಈ ವಿಷಯದಲ್ಲಿ ತಟಸ್ಥರಾಗಬೇಕಾಗುತ್ತದೆ ಎಂದಾಗ ಕೊನೆಗೂ ಒಪ್ಪಿಕೊಂಡ ಅಧಿಕಾರಿಗಳು ಲಗೇಜು ವಿಷಯದಲ್ಲಿ ಗೊಂದಲಗಳನ್ನು ಬಗೆಹರಿಸಿದರು.
ಕುಂದಾಪುರ: ಅಮ್ಮ ಸತ್ತ ಒಂದೇ ಗಂಟೆಯೊಳಗೆ ಮಗ ಸಾವು
ತಂಝೀಂ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಕ್ವಾರಂಟೈನ್ ಕೇಂದ್ರದ ಹೊರಗೆ ಖುದ್ದಾಗಿ ಇದ್ದು, ಎಲ್ಲರೂ ಕ್ವಾರಂಟೈನ್‌ಗೆ ಹೋಗುವ ಹಾಗೆ ಮತ್ತು ಆ ಸ್ಥಳಕ್ಕೆ ಅವರ ಸಂಬಂಧಿಕರು ಸೇರಿದಂತೆ ಯಾವುದೇ ಜನರು ಬರದಂತೆ ನೋಡಿಕೊಂಡರು. ಮಂಗಳೂರಿನಿಂದ ಖಾಸಗಿ ಬಸ್ಸಿನಲ್ಲಿ ಕರೆತರುವಲ್ಲಿಯೂ ತಂಝೀಂ ಸಂಸ್ಥೆ ಮುತುವರ್ಜಿ ವಹಿಸಿತ್ತು.