ಕೌಟುಂಬಿಕ ಕಲಹ ವಿಕೋಪಕ್ಕೇರಿ ಅಳಿಯನೇ ಮಾವನನ್ನು ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಮಾರಕಾಯುಧದಿಂದ ಕಡಿದು ಕೊಲೆಗೆ ಯತ್ನಿಸಿದ್ದಾರೆ.
ಮೂಡುಬಿದಿರೆ (ಫೆ.01): ಕೌಟುಂಬಿಕ ಕಲಹ ವಿಕೋಪಕ್ಕೇರಿ ಅಳಿಯ ತನ್ನ ಮಾವನ ಸ್ಕೂಟರಿಗೆ ಡಿಕ್ಕಿ ಹೊಡೆದು ಮಾರಕಾಯುಧದಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಮಹಾವೀರ ಕಾಲೇಜು ರಸ್ತೆ ಬಳಿ ನಡೆದಿದೆ.
ಘಟನೆಯಲ್ಲಿ ಇಸ್ಮಾಯಿಲ್ ಎಂಬವರ ಕಾಲಿಗೆ ತಲವಾರಿನಿಂದ ಕಡಿದ ಗಾಯವಾಗಿದೆ. ಅವರು ಮೂಡುಬಿದಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹಲ್ಲೆ ನಡೆಸಿದ ಆರೋಪಿ ಆತೂರ್ ನಸೀಬ್ ಹಾಗೂ ಆತನ ಜತೆಯಲ್ಲಿದ್ದ ಇತರ ಮೂವರ ವಿರುದ್ಧ ಮೂಡುಬಿದಿರೆ ಪೋಲೀಸ್ ಠಾಣೆಯಲ್ಲಿ ಕೊಲೆಯತ್ನ ದೂರು ದಾಖಲಾಗಿದೆ. ಇಸ್ಮಾಯಿಲ್ ಮಗಳ ಮದುವೆ ಆತೂರ್ ನಸೀಬ್ ಜತೆ ಹತ್ತು ವರ್ಷಗಳ ಹಿಂದೆ ನಡೆದಿದ್ದು, ಕೆಲವು ವರ್ಷಗಳಿಂದ ಈಚೆಗೆ ದಂಪತಿ ಮಧ್ಯೆ ವಿರಸ ಉಂಟಾಗಿತ್ತು.
ತಾಯಿ, ಮಗ, ಮಗಳು ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆಗೆ ಶರಣು ...
ಈ ವಿಚಾರದಲ್ಲಿ ಬುದ್ಧಿಮಾತು ಹೇಳಿದ್ದ ಹುಡ್ಕೋ ಕಾಲೊನಿಯಲ್ಲಿನ ತನ್ನ ಮಾವನ ಮನೆಗೆ ನುಗ್ಗಿದ ನಸೀಬ್ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ.
ಇತ್ತೀಚಿಗೆ ಇಸ್ಮಾಯಿಲ್ ಮನೆಯಿಂದ ತನ್ನ ಸ್ಕೂಟರಲ್ಲಿ ಮೂಡುಬಿದಿರೆಯತ್ತ ಬರುತ್ತಿದ್ದಾಗ ಅಳಿಯ ನಸೀಬ್ ಕಾರಿನಲ್ಲಿ ಬಂದು ಮಾವನ ಸ್ಕೂಟರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು, ರಸ್ತೆಗೆ ಬಿದ್ದ ಮಾವನ ಕಾಲಿಗೆ ಮಾರಕಾಯುಧದಿಂದ ಕಡಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ
