Asianet Suvarna News Asianet Suvarna News

ಮಗನ ಸಾವಿನ ದುಃಖದಲ್ಲೂ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದು ಹಲವು ಜನರ ಬದುಕಿಗೆ ಬೆಳಕಾದ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಧನ್ಯಕುಮಾರ್ ರ ಸಾವಿನ ದುಃಖದಲ್ಲೂ ಅಂಗಾಂಗ ದಾನ ಮಾಡಿರುವ ಪೋಷಕರು ಸಾರ್ಥಕತೆ ಮೆರೆದಿದ್ದಾರೆ..

Son death in an accident parents donate his body parts chaikkamagaluru rav
Author
First Published Dec 13, 2022, 1:34 AM IST

ವರದಿ: ಆಲ್ದೂರು ಕಿರಣ್ ಏಷ್ಯಾ‌ನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಡಿ.13) : ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಕುಟುಂಬಸ್ಥರು ಮಾನವೀಯತೆ ಮೆರೆದು ಹಲವು ಜನರ ಬದುಕಿಗೆ ಬೆಳಕಾದ ಘಟನೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಧನ್ಯಕುಮಾರ್ ರ ಸಾವಿನ ದುಃಖದಲ್ಲೂ ಅಂಗಾಂಗ ದಾನ ಮಾಡಿರುವ ಪೋಷಕರು ಸಾರ್ಥಕತೆ ಮೆರೆದಿದ್ದಾರೆ..

ಸಬ್ಬೇನಹಳ್ಳಿ ಬಳಿ ‌ನಡೆದ ರಸ್ತೆ ಅಪಘಾತ:

ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಧನ್ಯಕುಮಾರ್(37) ಎಂಬುವವರು ಇತ್ತೀಚೆಗೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟಾಗಿತ್ತು. ಬೈಕ್ ಮತ್ತು ಕ್ಯಾಂಟರ್ ಡಿಕ್ಕಿಯಿಂದ ಧನ್ಯಕುಮಾರ್  ಜೀವನ್ಮರಣ ಹೋರಾಟ ನಡೆಸುತ್ತಿದ್ದರು. ಅವರನ್ನು ಮಂಗಳೂರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಧನ್ಯಕುಮಾರ್ ಅವರ ಮೆದುಳು ನಿಷ್ಕ್ರಿಯಗೊಂಡಿದ್ದರಿಂದ ಅವರು ಬದುಕುಳಿಯುವ ಸಾಧ್ಯತೆ ಕಡಿಮೆ ಇರುವ ಬಗ್ಗೆ ವೈದ್ಯರು ಕುಟುಂಬಸ್ಥರಿಗೆ ಮನವರಿಗೆ ಮಾಡಿ ದೇಹದ ಅಂಗಾಂಗಗಳನ್ನು ದಾನ ಮಾಡಲು ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಿದ್ದರು. 

\Hubballi: ಅಂಗಾಂಗ ದಾನ ಮಾಡಿ ಸಾವಿನಲ್ಲೂ 'ಪ್ರಜ್ವಲಿಸಿದ ಪ್ರಭಾವತಿ'

ವೈದ್ಯರ ಸಲಹೆಯಂತೆ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಮುಂದಾಗಿದ್ದು, ಧನ್ಯಕುಮಾರ್ ಅವರ ಹೃದಯ, ಕಿಡ್ನಿ, ಲಿವರ್ ಎರಡು ಕಣ್ಣುಗಳು ಸೇರಿದಂತೆ ಬಹು ಅಂಗಾಂಗಗಳನ್ನು ದಾನ ಮಾಡಲಾಗಿದೆ. ಧನ್ಯ ಕುಮಾರ್ ಕುಟುಂಬಸ್ಥರ ಈ ನಿರ್ಧಾರಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೃತ ವ್ಯಕ್ತಿ 4ವರ್ಷದ ಮಗಳು, ಪತ್ನಿ, ತಂದೆ, ತಾಯಿಯನ್ನು ಅಗಲಿದ್ದಾರೆ. ಅಪಘಾತದಲ್ಲಿ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು, ಮೆದುಳು ನಿಷ್ಕ್ರೀಯಗೊಂಡಿತ್ತು. ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಧನ್ಯಕುಮಾರ್ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಧನ್ಯಕುಮಾರ್ ಮೆದುಳು ನಿಷ್ಕ್ರಿ  ಯಗೊಂಡಿದ್ದು, ಉಳಿದ ಅಂಗಾಂಗಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು. ಈ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಮುಂದಾಗಿದ್ದೇವೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಸ್ವಗ್ರಾಮದಲ್ಲಿ ನಡೆದ ಅಂತ್ಯಕ್ರಿಯೆ : 

ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಧನ್ಯಕುಮಾರ್ ರವರ ಅಂಗಾಂಗ ದಾನದ ಪ್ರಕ್ರಿಯೆ ಯಶ್ವಸಿಯಾಗಿ ನಡೆಸಿ ಹಲವು ರೋಗಿಗಳಿಗೆ ಧನ್ಯಕುಮಾರ್ ಜೀವದಾನ ಮಾಡಿದ್ದಾರೆ. ಅಂಗಾಂಗ ದಾನದ ಪ್ರಕ್ರಿಯೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು.

ಅಪ್ಪು ಹಾದಿಯಲ್ಲಿ ವಿಜಯ್ ದೇವರಕೊಂಡ: ಅಂಗಾಂಗ ದಾನ ಘೋಷಣೆ

 ಮಂಗಳೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಮೃತದೇಹವನ್ನು ರವಾನೆ ಮಾಡುವ ವೇಳೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು  ರಸ್ತೆ ಉದ್ದಕ್ಕೂ ಅಂತಿಮ ನಮನ ಸಲ್ಲಿಸಿದರು. ಅಲ್ಲದೆ ಕೊಟ್ಟಿಗೆಹಾರದಿಂದ  ಸ್ವಗ್ರಾಮ  ಹೊರಟ್ಟಿಗೆ ಪ್ರಾರ್ಥಿವಶರೀರದ ಮೆರವಣಿಗೆಯನ್ನು ನಡೆಸಲಾಯಿತು. ಬಳಿಕ ಹೊರಟ್ಟಿ ಗ್ರಾಮದಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯ ಕ್ರಿಯೆಯನ್ನು ನೆರವೇರಿಸಲಾಯಿತು.

Follow Us:
Download App:
  • android
  • ios