Asianet Suvarna News Asianet Suvarna News

Hubballi: ಅಂಗಾಂಗ ದಾನ ಮಾಡಿ ಸಾವಿನಲ್ಲೂ 'ಪ್ರಜ್ವಲಿಸಿದ ಪ್ರಭಾವತಿ'

ಅನಾರೋಗ್ಯಕ್ಕೆ ತುತ್ತಾಗಿ, ಬ್ರೇನ್ ಡೆಡ್ ಆಗಿದ್ದ ಮುನವಳ್ಳಿ ಪುರಸಭೆ ಮಾಜಿ ಸದಸ್ಯೆ ಪ್ರಭಾವತಿ ಮಲಗೌಡ್ರು (54) ವಿಧಿವಶರಾಗಿದ್ದು, ಅಂಗಾಂಗ ದಾನ ಮಾಡಿ ಸಾವಿನಲ್ಲೂ ಪ್ರಜ್ವಲಿಸಿದ್ದಾರೆ. 

brain dysfunctional women donated organs at hubballi gvd
Author
First Published Dec 11, 2022, 10:59 AM IST

ಹುಬ್ಬಳ್ಳಿ (ಡಿ.11): ಅನಾರೋಗ್ಯಕ್ಕೆ ತುತ್ತಾಗಿ, ಬ್ರೇನ್ ಡೆಡ್ ಆಗಿದ್ದ ಮುನವಳ್ಳಿ ಪುರಸಭೆ ಮಾಜಿ ಸದಸ್ಯೆ ಪ್ರಭಾವತಿ ಮಲಗೌಡ್ರು (54) ವಿಧಿವಶರಾಗಿದ್ದು, ಅಂಗಾಂಗ ದಾನ ಮಾಡಿ ಸಾವಿನಲ್ಲೂ ಪ್ರಜ್ವಲಿಸಿದ್ದಾರೆ. ಹುಟ್ಟು ಅನಿರೀಕ್ಷಿತ-ಸಾವು ಖಚಿತ. ಆದ್ರೇ ಸಾವು ಸಮಿಪಿಸುತ್ತಿದೆ ಎಂದು ಗೊತ್ತಾದಾಗ ಮನುಷ್ಯ ವಿಚಲಿತನಾಗ್ತಾನೆ. ಆದ್ರೇ ಇಲ್ಲೊಬ್ಬ ತಾಯಿ ಮತ್ತು ಆಕೆಯ ಕುಟುಂಬದವರು ಸಾವಿನಲ್ಲೂ ಸಾರ್ಥಕತೆ ತೋರಿದ್ದಾರೆ. ಅವರು ತೋರಿದ ಅನುಕಂಪ ಅನುಕರಣಿಯ.‌  ಈ ಪೋಟೋದಲ್ಲಿ ಕಾಣಿಸುತ್ತಿರುವ ಇವರು ಹೆಸರು ಪ್ರಭಾವತಿ ಮಲ್ಲಗೌಡ್ರು.

ಸವದತ್ತಿ ತಾಲೂಕಿನ ಮುನವಳ್ಳಿಯವರು. ಮಾಜಿ ಪುರಸಭೆ ಸದಸ್ಯರಾಗಿದ್ದ. ಪ್ರಭಾವತಿ ಅವರು ಇತ್ತಿಚೆಗೆ ಅನಾರೋಗ್ಯದಿಂದ‌ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದರು. ಧಾರವಾಡ ಎಸ್.ಡಿಎಮ್ ಆಸ್ಪತ್ರೆಯ ವೈದ್ಯರು ಪ್ರಭಾವತಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು. ಆದ್ರೇ ಅವರು ಬ್ರೇನ್ ನಿಷ್ಕ್ರಿಯಗೊಂಡಿತ್ರು. ಇದರಿಂದಾಗಿ ಪ್ರಭಾವತಿ ಬದುಕುಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರಂತೆ.  ಈ ಹಿನ್ನೆಲೆಯಲ್ಲಿ ಪ್ರಭಾವತಿ ಅವರ ಅಂಗಾಂಗಗಳನ್ನು ದಾನ ಮಾಡಲು ಕುಟುಂಬದ ತೀರ್ಮಾನ ತೆಗೆದುಕೊಂಡು.  ಇಂದು ದಾನ ಮಾಡಿದ್ದಾರೆ.

ಕಲಬುರಗಿಯಲ್ಲಿ ಕಾಂಗ್ರೆಸ್‌ ಭಾರಿ ಶಕ್ತಿ ಪ್ರದರ್ಶನ: ಖರ್ಗೆ ಸ್ವಾಗತಕ್ಕೆ ‘ಕಲ್ಯಾಣ ಕ್ರಾಂತಿ’ ಸಮಾವೇಶ

ಜೀವಗಳಿಗೆ ನೇರವಾದ ಪ್ರಭಾವತಿ: ಅನಾರೋಗ್ಯ ತುತ್ತಾಗಿ, ಬ್ರೇನ್ ಡೆಡ್ ಆಗಿದ್ದ ಪ್ರಭಾವತಿ ಮಲಗೌಡ್ರು (54) ಅವರ  ಎರಡು ಮೂತ್ರಪಿಂಡ ಎರಣು ಕಣ್ಣುಗಳು ಹಾಗೂ ಲಿವರ್ ದಾನ ಮಾಡಿದ್ದಾರೆ. ಇಂದು‌ ಬೆಳಗ್ಗೆ SDM ಆಸ್ಪತ್ರೆಯಲ್ಲಿ ವೈದ್ಯರು ಪ್ರಭಾವತಿ ಅವರ ಅಂಗಾಂಗಗಳ ದೇಹದಿಂದ ಬೇರ್ಪಡಿಸಿ ಅವುಗಳನ್ನು ಬೇರೆ ಬೇರೆ ಆಸ್ಪತ್ರೆಗಳಿಗೆ ದಾನ ಮಾಡಿದ್ದಾರೆ. 

ಬೆಂಗಳೂರು ಹೆಬ್ಬಾಳದ ಅಸ್ಟರ್ ಆಸ್ಪತ್ರೆಯಲ್ಲಿದ್ದ ರೋಗಿಗೆ ಲೀವರ್ ಹಾಗೂ ಎಸ್‌ಡಿಎಮ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ರೋಗಿಗೆ ಕಿಡ್ನಿ‌ ಹಾಗೂ  ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ ಬೆಂಗಳೂರಿನಿಂದ ಆಗಮಿಸಿದ ವೈದ್ಯರು ತಂಡ ಪ್ರಭಾವತಿ ಅವರ ಲಿವರ ಗಳನ್ನು ಸಂಗ್ರಹಿಸಿ, ವಿಮಾನದ  ಮೂಲಕ  ಬೆಂಗಳೂರು ತೆಗೆದುಕೊಂಡು ಹೋಗಿದ್ದು. ಇಂದೇ ರೋಗಿಯೋಬ್ಬರಿಗೆ ಕಸಿ ಮಾಡಲಿದ್ದಾರೆ.

ಅಂಗಾಂಗ ದಾನ ಮಾಡಿದ ಮಿಲಿಟರಿ ನೌಕರ: ಅಪಘಾತದಲ್ಲಿ ಮೃತಪಟ್ಟ, ಬೆಳಗಾವಿಯಲ್ಲಿ ಮಿಲಿಟರಿ ಸೇವೆಯಲ್ಲಿದ್ದ ಚಿದಾನಂದ ಪತ್ತಾರ (57) ಎಂಬುವರ ಕುಟುಂಬದವರು ದುಃಖದಲ್ಲೂ ಉದಾತ್ತ ಮನೋಭಾವ ತೋರಿದ್ದಾರೆ. ಅಪಘಾತದಿಂದ ಮೆದುಳು ನಿಷ್ಕಿ್ರಯಗೊಂಡಿದ್ದ ಚಿದಾನಂದ ಪತ್ತಾರ ನ. 8ರಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅವರ ಕುಟುಂಬದವರು ಅಂಗಾಂಗಳ ದಾನ ಮಾಡುವ ಧೈರ್ಯ ತೋರಿದರು. 

ಕುಕ್ಕರ್‌ ಬಾಂಬ್‌ ಕೇಸ್‌: ಕೊಚ್ಚಿಯಲ್ಲಿ ಶಾರೀಕ್‌ ಸಂಪರ್ಕದಲ್ಲಿದ್ದವರ ಪತ್ತೆ?

ಚಿದಾನಂದ ಅವರ ಹೃದಯ, ಲಿವರ್‌, ಎರಡು ಕಿಡ್ನಿ ಮತ್ತು ಕಣ್ಣುಗಳನ್ನು ಎಸ್‌ಡಿಎಂ ಮೂಲಕ ದಾನ ಮಾಡಲಾಯಿತು. ಎರಡೂ ಕಿಡ್ನಿಗಳನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ರೋಗಿಗಳಿಗೆ ನೀಡಲಾಯಿತು. ಬೆಳಗಾವಿಯಿಂದ ಧಾರವಾಡ ವರೆಗೂ ಗ್ರೀನ್‌ ಕಾರಿಡಾರ್‌ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ಎಸ್‌ಡಿಎಂ ಉಪಕುಲಪತಿ ಡಾ. ನಿರಂಜನ ಕುಮಾರ ತಿಳಿಸಿದ್ದಾರೆ.

Follow Us:
Download App:
  • android
  • ios