ರೋಡ್ ಬ್ರೇಕ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ವಾಹ‌ನ ಪಲ್ಟಿಯಾಗಿದೆ.  ಬಸ್‌ನಲ್ಲಿ ಸುಮಾರು 25 ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು ಹೊರಟ್ಟಿದ್ದರು. ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಮೂಲಕ ಭಾರೀ ಅನಾಹುತವೊಂದು ತಪ್ಪಿದೆ.  

ಗದಗ(ಡಿ.24): ರೋಡ್ ಬ್ರೇಕ್ ತಪ್ಪಿಸಲು ಹೋಗಿ ಖಾಸಗಿ ಬಸ್‌ವೊಂದು ಪಲ್ಟಿಯಾದ ಪರಿಣಾಮ ಹಲವು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಗದಗ ನಗರದ ಮಲ್ಲಸಮುದ್ರದ ಬಳಿ ನಿನ್ನೆ(ಶನಿವಾರ) ರಾತ್ರಿ ನಡೆದಿದೆ. 

ಖಾಸಗಿ ಶಾಲಾ ಮಕ್ಕಳನ್ನ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದ ವಾಹನ ಪಲ್ಟಿಯಾಗಿದೆ. ಗದಗ ತಾಲೂಕಿನ ಜಂತ್ಲಿಶಿರೂರು ಗ್ರಾಮದ ಖಾಸಗಿ ಶಾಲೆ ಮಕ್ಕಳು ಹಾವೇರಿಯ ಗೋಟಗೋಡಿಗೆ ಪ್ರವಾಸಕ್ಕೆ ಹೋಗಿದರು. 

ಪ್ರತ್ಯೇಕ ಘಟನೆ; ನಡುರಸ್ತೆಯಲ್ಲೇ ಹೊತ್ತಿಉರಿದ ಓಮಿನಿ, ಕಾರು!

ರೋಡ್ ಬ್ರೇಕ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ವಾಹ‌ನ ಪಲ್ಟಿಯಾಗಿದೆ. ಬಸ್‌ನಲ್ಲಿ ಸುಮಾರು 25 ಕ್ಕೂ ಹೆಚ್ಚು ಶಾಲಾ ಮಕ್ಕಳು, ಶಿಕ್ಷಕರು ಹೊರಟ್ಟಿದ್ದರು. ಅದೃಷ್ಟವಷಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ಮೂಲಕ ಭಾರೀ ಅನಾಹುತವೊಂದು ತಪ್ಪಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.