ನಮಗೆ ಸಿಗಬೇಕಾದ ನೀರಿನ ಪ್ರಮಾಣ ಪಡೆಯಲು ಹೋರಾಟ ಮಾಡಬೇಕು. ಕಾವೇರಿ ನದಿ ನೀರು ಪ್ರಾಧಿಕಾರ, ಸುಪ್ರೀಂಕೋರ್ಟಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಪರಿಣಾಮಕಾರಿ ಜನಾಂದೋಲನ ನಡೆಯಬೇಕು: ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌ 

ಮೈಸೂರು(ಆ.23):  ಕಾವೇರಿ ಸಮಸ್ಯೆ ಪರಿಹಾರಕ್ಕೆ ರಾಷ್ಟ್ರೀಯ ಜಲನೀತಿ ರೂಪಿಸುವುದೇ ಪರಿಹಾರ ಎಂದು ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌ ಹೇಳಿದ್ದಾರೆ.

ನಮಗೆ ಸಿಗಬೇಕಾದ ನೀರಿನ ಪ್ರಮಾಣ ಪಡೆಯಲು ಹೋರಾಟ ಮಾಡಬೇಕು. ಕಾವೇರಿ ನದಿ ನೀರು ಪ್ರಾಧಿಕಾರ, ಸುಪ್ರೀಂಕೋರ್ಟಿಗೆ ಈ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಇದಕ್ಕಾಗಿ ಪರಿಣಾಮಕಾರಿ ಜನಾಂದೋಲನ ನಡೆಯಬೇಕು ಎಂದು ಅವರು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಎಂದರೆ ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದರ್ಥ: ಕೆ.ಎಸ್. ಭಗವಾನ್‌ ಟೀಕೆ

ಕಾವೇರಿ ನೀರನ್ನು ನ್ಯಾಯಬದ್ಧವಾಗಿ ಪಡೆಯುವುದರ ಮೇಲೆ ರಾಜ್ಯದ ಅಭಿವೃದ್ಧಿ ಅವಲಂಬಿತವಾಗಿದೆ. ಒಂದು ಹನಿ ನೀರು ಕೊಡುವುದಿಲ್ಲ ಅಥವಾ ಬಿಡುವುದಿಲ್ಲ ಎಂಬ ಮಾತಿಗೆ ಬದಲಾಗಿ ನಮಗೆ ನ್ಯಾಯಬದ್ಧವಾಗಿ ಬರಬೇಕಾದ ನೀರನ್ನು ಪಡೆಯಲು ಹೋರಾಟ ಮಾಡಬೇಕು ಎಂದು ಅವರು ಸಲಹೆ ಮಾಡಿದ್ದಾರೆ.