Asianet Suvarna News Asianet Suvarna News

ಹೆಬ್ಬಾರ್ ಗೆಲುವಿನ ಹಿಂದಿನ ಕಾರಣವಿದು

ಉತ್ತರ ಕನ್ನಡದ ಯಲ್ಲಾಪುರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಗೆಲುವು ಸಾಧಿಸಿದ್ದು, ಅವರ ಗೆಲುವಿಗೆ ಕಾರಣವೇ ಇದಾಗಿದೆ. ಆ ಕಾರಣ ಏನು? 

solidarity Is Main Reason Behind Shivaram Hebbar Victory in By Election
Author
Bengaluru, First Published Dec 25, 2019, 1:16 PM IST

ಯಲ್ಲಾಪುರ [ಡಿ.25]: ಪ್ರತಿಯೊಬ್ಬರೂ ತಮಗೊದಗುವ ಕಷ್ಟವನ್ನು ಸವಾಲಾಗಿ ಸ್ವೀಕರಿಸಿ, ಜಾಣತನದಿಂದ ಗೆಲುವು ಸಾಧಿಸಬೇಕು. ಈ ನಿಟ್ಟಿನಲ್ಲಿ ಶಿವರಾಮ ಹೆಬ್ಬಾರ ಸಾಧಿಸಿದ ಉನ್ನತಿಗಾಗಿ ತಪಸ್ಸಿನಂತೆ ಅವಿರತ ಶ್ರಮಿಸಿದ್ದಾರೆ. ಇಂತಹ ಪರಿಶ್ರಮದ ತಪಸ್ಸಿಗೆ ದೈವಕೃಪೆ ದೊರಕುತ್ತದೆ. ಇಂದು ಅವರು ಈ ಹಂತಕ್ಕೆ ತಲುಪಲು ಪರಿಶ್ರಮದ ಸಾಧನೆಯೇ ಕಾರಣವಾಗಿದೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ಡಿ. 24 ರಂದು ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಬಿಜೆಪಿ ತಾಲೂಕು ಘಟಕವು ಹಮ್ಮಿಕೊಂಡಿದ್ದ ಉಪಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸಿದ ಮತದಾರರು ಮತ್ತು ಕಾರ್ಯಕರ್ತರನ್ನು ಅಭಿನಂದಿಸುವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಮ್ಮ ಪ್ರಯತ್ನಕ್ಕೆ ನಿರೀಕ್ಷಿತ ಪ್ರತಿಫಲ ಲಭಿಸಿದೆ. ರಾಜ್ಯದ ವಿವಿಧೆಡೆ ಉಪಚುನಾವಣೆಯಲ್ಲಿ ಕಾರ್ಯಕರ್ತರು ತಾರತಮ್ಯವೆಸಗದೇ ಪರಸ್ಪರ ಹೊಂದಾಣಿಕೆಯಿಂದ ಪ್ರಚಾರ ಮಾಡಿದ್ದು, ಈ ಕಾರಣದಿಂದಲೇ ಯಲ್ಲಾಪುರ ಕ್ಷೇತ್ರದಲ್ಲಿಯೂ ಪಕ್ಷದ ಅಭ್ಯರ್ಥಿಗೆ ಅಧಿಕ ಬಹುಮತ ದೊರೆತಿದೆ. ಚುನಾವಣೆಯಲ್ಲಿ ದೊರೆತ ಗೆಲುವಿನ ಶ್ರೇಯಸ್ಸು ನಮ್ಮ ಕಾರ್ಯಕರ್ತರಿಗೆ ಸಲ್ಲಬೇಕಾಗಿದ್ದು, ಎಲ್ಲ ಕಾರ್ಯಕರ್ತರಿಗೂ ಮತ್ತು ಸಮಸ್ತ ಮತದಾರರಿಗೂ ಅಭಿನಂದನೆಗಳು ಎಂದರು.

ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ಸಂಘರ್ಷದ ಮೂಲಕ ಸುಭದ್ರ ಸರ್ಕಾರಕ್ಕೆ ನಾಂದಿ ಇಡಲಾಗಿದೆ. ಈ ಉಪಚುನಾವಣೆಯಲ್ಲಿ ಮಹಿಳೆಯರೂ ಸೇರಿದಂತೆ ಎಲ್ಲ ಕಾರ್ಯಕರ್ತರು ಹಗಲಿರುಳು ದುಡಿದು ಅಧಿಕ ಬಹುಮತ ದೊರೆಯಲು ಕಾರಣರಾಗಿದ್ದಾರೆ. ಈ ಚುನಾವಣೆಯ ಒತ್ತಡದ ಕಾರ್ಯಗಳ ಸಂದರ್ಭದಲ್ಲಿ ಯಾರ ಬಗೆಗಾದರೂ ಬೇಸರ ಅಥವಾ ಸಿಟ್ಟಿನಿಂದ ಆಡಬಾರದ ಮಾತನ್ನಾಡಿದ್ದರೆ ಕ್ಷಮೆ ಯಾಚಿಸುತ್ತೇನೆ. ಯಶಸ್ಸಿಗೆ ಕಾರಣರಾದ ಕಾರ್ಯಕರ್ತರನ್ನೂ, ಮತದಾರರನ್ನೂ ವಿನಮೃತೆಯಿಂದ ಅಭಿನಂದಿಸುತ್ತೇನೆ ಎಂದರು.

ವಾ.ಕ.ರ.ಸಾ. ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ್ ಮಾತನಾಡಿ, ಹೋರಾಟದಿಂದ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಭಿವೃದ್ಧಿ ಕಾರ್ಯ ಬಿಜೆಪಿಯಿಂದ ಮಾತ್ರವೇ ಸಾಧ್ಯ ಎಂದರು. 

Follow Us:
Download App:
  • android
  • ios