ಬೆಳಗಾವಿ(ಸೆ.13):ಸೈನಿಕನೊಬ್ಬನ ಬಳಿ ಎಕೆ-47 ಗನ್‌ಗೆ ಬಳಸುವ ಒಂದು ಜೀವಂತ ಗುಂಡು ಪತ್ತೆಯಾದ ಘಟನೆ ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಇಂದು(ಭಾನುವಾರ) ನಡೆದಿದೆ. KSISF ಅಧಿಕಾರಿಗಳು ತಪಾಸಣೆ ವೇಳೆ ಸೈನಿಕನ ಬಳಿ ಒಂದು ಜೀವಂತ ಗುಂಡು ಜೊತೆಗೆ  ಇನ್ಸಾಸ್ ಫೈರ್ಡ್ ಎಂಪ್ಟಿ ಕೇಸ್ ಸಹ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಹೀಗಾಗಿ ಸೈನಿಕನನ್ನು (MLIRC)ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಂ ಮೇಲಿನ ಕೇಸ್ ರದ್ದುಗೊಳಿಸಿದ ಹೈಕೋರ್ಟ್, ಯಡಿಯೂರಪ್ಪಗೆ ಬಿಗ್ ರಿಲೀಫ್..!

ನಿನ್ನೆ(ಶನಿವಾರ) ಸೈನಿಕ ಬೆಂಗಳೂರಿಂದ ಬೆಳಗಾವಿಗೆ ಬಂದಿದ್ದನು. ಸೈನಿಕನ ಬಳಿ ಜೀವಂತ ಗುಂಡು, ಎಂಪ್ಟಿ ಕೇಸ್ ಪತ್ತೆಯಾದ ಹಿನ್ನೆಲೆಯಲ್ಲಿ KSISF ಅಧಿಕಾರಿಗಳು ಮಿಲಿಟರಿ ಅಧಿಕಾರಿಗಳಿಗೆ ಪತ್ರ ಬರೆದು ಮರಾಠಾ ಲೈಟ್ ಇನ್ಫೆಂಟ್ರಿ ಅಧಿಕಾರಿಗಳಿಗೆ ಸೈನಿಕನನ್ನ ಹಸ್ತಾಂತರಿಸಿದ್ದಾರೆ.