Asianet Suvarna News Asianet Suvarna News

ರಜೆಗೆ ಊರಿಗೆ ಬಂದಿದ್ದ ಯೋಧ ಉಸಿರಾಟದ ತೊಂದರೆಯಿಂದ ಸಾವು

ರಜೆಗೆಂದು ಊರಿಗೆ ಬಂದಿದ್ದ ಯೋಧನೋರ್ವ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನ ಶ್ಯಾಗೋಟಿ ಗ್ರಾಮದ ಯೋಧ ವೀರಪ್ಪ ತಹಶೀಲ್ದಾರ (34) ಇತ್ತೀಚೆಗಷ್ಟೇ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿ ತಿಂಗಳುಗಳೇ ಗತಿಸಿತ್ತು.

Soldier who came home on leave dies due to Pneumonia
Author
Bangalore, First Published Apr 24, 2020, 9:53 AM IST

ಗದಗ(ಏ.24): ರಜೆಗೆಂದು ಊರಿಗೆ ಬಂದಿದ್ದ ಯೋಧನೋರ್ವ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ನಗರದಲ್ಲಿ ನಡೆದಿದೆ. ತಾಲೂಕಿನ ಶ್ಯಾಗೋಟಿ ಗ್ರಾಮದ ಯೋಧ ವೀರಪ್ಪ ತಹಶೀಲ್ದಾರ (34) ಇತ್ತೀಚೆಗಷ್ಟೇ ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿ ತಿಂಗಳುಗಳೇ ಗತಿಸಿತ್ತು.

ಆದರೆ, ನ್ಯುಮೋನಿಯಾ ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯೋಧನನ್ನು ಚಿಕಿತ್ಸೆಗಾಗಿ ಗದಗ ಜಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಇನ್ನೂ ಎರಡು ತಿಂಗಳು ಮದ್ಯ ಸಿಕ್ಕಿಲ್ಲಾಂದ್ರೆ ಕುಡಿತ ಬಿಡ್ತಾರಂತೆ ಶೇ.50ರಷ್ಟು ಜನ

2006ರಿಂದ ದೇಶ ಸೇವೆಯಲ್ಲಿದ್ದ ವೀರಪ್ಪ ತಹಶೀಲ್ದಾರ ಸದ್ಯ 158ನೇ ಬಟಾಲಿಯನ್‌ ಬಿಎಸ್‌ಎಫ್‌ ವೆಸ್ವ್‌ ಬೆಂಗಾಲ…ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆಗಾಗಿ ಊರಿಗೆ ಬಂದಿದ್ದು ಏ. 15ಕ್ಕೆ ರಜೆ ಮುಗಿದಿತ್ತು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಶ್ಯಾಗೋಟಿ ಗ್ರಾಮದಲ್ಲೇ ಉಳಿದಿದ್ದರು. ಆದರೆ, ಅನಾರೋಗ್ಯದಿಂದ ಮರಣ ಹೊಂದಿದ್ದಾರೆ. ಮೃತರಿಗೆ ತಂದೆ, ತಾಯಿ, ಪತ್ನಿ ಇಬ್ಬರು ಮಕ್ಕಳು ಇದ್ದಾರೆ. ಗದಗ ಜಿಲ್ಲಾಡಳಿತದಿಂದ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಕೋವಿಡ್‌ ಟೆಸ್ಟ್‌ ನೆಗೆಟಿವ್‌:

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಯೋಧನ ಗಂಟಲ ದ್ರವದ ಮಾದರಿಯನ್ನು ಕೋವಿಡ್‌- 19 ಪರೀಕ್ಷೆಗೆ ಕಳಿಸಲಾಗಿತ್ತು. ವರದಿ ನೆಗೆಟಿವ್‌ ಎಂದು ಬಂದಿದೆ. ಹೀಗಾಗಿ ಗುರುವಾರ ಅಂತ್ಯ ಸಂಸ್ಕಾರ ಮಾಡಲು ಕುಟುಂಬದವರಿಗೆ ಅನುಮತಿ ನೀಡಿದ್ದು, ಕೆಲವೇ ಜನ ಕುಟುಂಬಸ್ಥರ ಸಮ್ಮುಖದಲ್ಲಿ ಗ್ರಾಮದಲ್ಲಿ ಯೋಧನ ಅಂತ್ಯಕ್ರಿಯೆ ನಡೆಯಲಾಯಿತು.

24 ಗಂಟೆ ಸೂಪರ್‌ ಮಾರ್ಕೆಟ್‌ ತೆರೆಯಲು ಹೈಕೋರ್ಟ್‌ ಅಸ್ತು

Follow Us:
Download App:
  • android
  • ios