ಮುಳಗುಂದ [ಜ.07]: ಗದಗ ಜಿಲ್ಲೆ ಮುಳಗುಂದ ಪಟ್ಟಣದ ಯೋಧ ಬಸವರಾಜ ಶಂಕ್ರಯ್ಯ ಹಿರೇಮಠ (37) ಅವರು ಮಹಾರಾಷ್ಟ್ರದ ಪುಣೆ ರೈಲು ನಿಲ್ದಾಣದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ರೈಲಿನಡಿ ಸಿಲುಕಿ ಮೃತರಾಗಿದ್ದು, ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತಂದು ಅಂತ್ಯ ಸಂಸ್ಕಾರ ಮಾಡಲಾಗಿದೆ. 

ಯೋಧ ಬಸವರಾಜ ಅವರ ಸ್ವಗ್ರಾಮವಾದ ಗದಗ ಜಿಲ್ಲೆ‌ ಮುಳಗುಂದ ಪಟ್ಟಣಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.

ಶಂಕ್ರಯ್ಯ ಅವರು ರಜೆಗೆಂದು ಕಳೆದ ವಾರವಷ್ಟೇ ಊರಿಗೆ ಬಂದಿದ್ದರು. ಭಾನುವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಲು ತೆರಳಿದ್ದರು. ಸೋಮವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮಹಾರಾಷ್ಟ್ರದ ಪುಣೆಯ ರೈಲು ನಿಲ್ದಾಣದಲ್ಲಿ ಇಳಿಯುವಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದರು.

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ: ಗದಗ ಮೂಲದ ಯೋಧ ಹುತಾತ್ಮ...

ಸೇನೆಯಲ್ಲಿ 16 ವರ್ಷಗಳಿಂದ ದೇಶಸೇವೆ ಸಲ್ಲಿಸುತ್ತಿರುವ ಶಂಕ್ರಪ್ಪ ಅವರ ಸೇವಾವಧಿ ಇನ್ನು 9 ತಿಂಗಳು ಮಾತ್ರ ಬಾಕಿ ಉಳಿದಿತ್ತು. ಮೃತರಿಗೆ ತಾಯಿ, ಪತ್ನಿ, 3 ವರ್ಷದ ಪುತ್ರ, ಇಬ್ಬರು ಸಹೋದರಿಯರು, ಒಬ್ಬ ಸಹೋದರ ಇದ್ದಾರೆ. 

ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ: ಗದಗ ಮೂಲದ ಯೋಧ ಹುತಾತ್ಮ...

2005 ರಲ್ಲಿ ಭಾರತೀಯ ಸೇನೆಗೆ ಆಯ್ಕೆಯಾಗಿದ್ದು, ಕಳೆದ 14 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಭಾರತೀಯ ಸೇನಾ ಪುಣೆ ಸಿಗ್ನಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.