ನವದೆಹಲಿ[ಡಿ.18]: ಪಾಕಿಸ್ತಾನದ ಗಡಿ ಕಾವಲು ಪಡೆ- ಬ್ಯಾಟ್ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯ ಸುಂದೇರ್‌ಬನಿ ಯಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ನಡೆಸಿದ್ದು, ಯೋಧನೊಬ್ಬ ಸಾವಿಗೀಡಾಗಿದ್ದಾನೆ. ಸಾವಿಗೀಡಾದ ಯೋಧನನ್ನು ಸುಖವಿಂದರ್ ಸಿಂಗ್ (21) ಎಂದು ಗುರುತಿಸಲಾಗಿದೆ.

ಆದರೆ, ಮೂಲಗಳ ಪ್ರಕಾರ ಬ್ಯಾಟ್ ಪಡೆ ಭಾರತೀಯ ಯೋಧನನ್ನು ಶಿರಚ್ಛೇದಗೈದು ಹತ್ಯೆ ಮಾಡಿದೆ ಎಂದು ಹೇಳಲಾಗಿದೆ. ಇದೇ ವೇಳೆ ಭಾರತೀಯ ಪಡೆಗಳು ಬ್ಯಾಟ್ ಪಡೆಯ ದಾಳಿಯನ್ನು ಯಶಸ್ಸಿಯಾಗಿ ಹಿಮ್ಮೆಟ್ಟಿಸಿವೆ.

ಸೋಮವಾರ ಸಂಜೆ ಪೂಂಛ್ ಸೆಕ್ಟರ್‌ನಲ್ಲಿ ನಡೆದ ದಾಳಿಯಲ್ಲಿ ಇಬ್ಬರು ಪಾಕ್ ಕಮಾಂಡೊಗಳನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ.

ಹೇಮರಾಜ್ ಶಿರಚ್ಛೇದ ನೆನಪಿಸಿದ ಘಟನೆ:

ಈ ಹಿಂದೆ 2013ರಲ್ಲಿ ಪಾಕ್ ಬ್ಯಾಟ್ ಪಡೆ ಲಾನ್ಸ್ ನಾಯಕ್ ಹೇಮರಾಜ್ ಮತ್ತು ಲಾನ್ಸ್ ನಾಯಕ್ ಸುಧಾಕರ್ ಸಿಂಗ್ ಅವರನ್ನು ಶಿರಚ್ಛೇದ ಮಾಡಿ ಹತ್ಯೆ ಮಾಡಿತ್ತು. ಆ ಬಳಿಕ ಬ್ಯಾಟ್ ಪಡೆಯ ಕರಾಳ ಮುಖ ಪರಿಚಯವಾಗಿತ್ತು.