ಅಪಘಾತಕ್ಕೆ ಅಪರಿಚಿತ ವಾಹನದ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಬಳಿಕ ಚಾಲಕ ವಾಹನ ಸಹಿತ ಪರಾರಿಯಾಗಿದ್ದು, ಪತ್ತೆಗೆ ಕ್ರಮ ಕೈಗೊಳ್ಳ ಲಾಗಿದೆ. 

ಬೆಂಗಳೂರು(ಜ.24): ನಗರದ ದೊಡ್ಡಕನ್ನಲ್ಲಿ ಎಇಟಿ ಕಾಲೇಜು ಮುಖ್ಯರಸ್ತೆ ಸಂಸ್ಕೃತಿ ಹೊಯ್ಸಳ ಅಪಾರ್ಚ್‌ಮೆಂಟ್‌ ಬಳಿ ನಡೆದ ಹಿಟ್‌ ಆ್ಯಂಡ್‌ ರನ್‌ ಘಟನೆಯಲ್ಲಿ ಪಾದಾಚಾರಿ ಸಾಫ್ಟ್‌ವೇರ್‌ ಎಂಜಿನಿಯರ್‌ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೊಡ್ಡಕನ್ನಲ್ಲಿ ವಾಜಿಪಲ್ಲಿ ಹೌಸ್‌ ನಿವಾಸಿ ವಿಶ್ವನಾಥಗೌಡ (42) ಮೃತ ದುರ್ದೈವಿ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿರುವ ವಿಶ್ವನಾಥಗೌಡ ಸೋಮವಾರ ಮಧ್ಯರಾತ್ರಿ 1.15ರ ಸುಮಾರಿಗೆ ದೊಡ್ಡಕನ್ನಲ್ಲಿ ಎಇಟಿ ಕಾಲೇಜು ಕಡೆಯಿಂದ ದೊಡ್ಡಕನ್ನಲ್ಲಿ ಕಡೆಗೆ ನಡೆದುಕೊಂಡು ಹೋಗುವಾಗ ದೊಡ್ಡಕನ್ನಲ್ಲಿ ಕಡೆಯಿಂದ ವೇಗವಾಗಿ ಬಂದ ಅಪರಿಚಿತ ವಾಹನ ಪಾದಚಾರಿ ವಿಶ್ವನಾಥಗೌಡಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದ ವಿಶ್ವನಾಥಗೌಡ ಮೇಲೆಯೇ ವಾಹನದ ಚಕ್ರ ಹರಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬೆಂಗಳೂರಲ್ಲೊಂದು ಹಿಟ್‌ ಅಂಡ್‌ ರನ್: ವೃದ್ಧನನ್ನು ದರದರನೆ ಎಳೆದೊಯ್ದ ಬೈಕ್‌

ಅಪಘಾತಕ್ಕೆ ಅಪರಿಚಿತ ವಾಹನದ ಅತಿಯಾದ ವೇಗ ಹಾಗೂ ಅಜಾಗರೂಕ ಚಾಲನೆಯೇ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಘಟನೆ ಬಳಿಕ ಚಾಲಕ ವಾಹನ ಸಹಿತ ಪರಾರಿಯಾಗಿದ್ದು, ಪತ್ತೆಗೆ ಕ್ರಮ ಕೈಗೊಳ್ಳ ಲಾಗಿದೆ. ಈ ಸಂಬಂಧ ಎಚ್‌ಎಸ್‌ಆರ್‌ ಲೇಔಟ್‌ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.