Asianet Suvarna News Asianet Suvarna News

ಪ್ರತ್ಯೇಕ ಧರ್ಮದ ಹೆಸರಲ್ಲಿ ಸಮಾಜ ಒಡೆಯಬಾರದು: ಜಗದೀಶ ಶೆಟ್ಟರ್

ವೀರಶೈವ ಮತ್ತು ಲಿಂಗಾಯತ ಎರಡು ಬೇರೆ- ಬೇರೆ ಎಂಬ ಅರ್ಥದಲ್ಲಿ ಬಿಂಬಿಸಲಾಗುತ್ತಿತ್ತು. ಎಲ್ಲರೂ ಸೇರಿ ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಿ ಅಂತಾ ನಾನು ಹೇಳಿದ್ದೇ. ವೀರಶೈವ ಮಹಾಸಭಾ ಲೀಡ್‌ ತೆಗೆದುಕೊಳ್ಳಬೇಕು. ಸಮಾಜದಲ್ಲಿ ಒಡಕು ಉಂಟಾಗುವುದು ಬೇಡ ಎಂಬುದು ನನ್ನ ಅಭಿಪ್ರಾಯವಾಗಿದೆ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್

Society should not be Divide in the name of Separate Religion Says Jagadish Shettar grg
Author
First Published Dec 26, 2023, 11:45 AM IST

ಹುಬ್ಬಳ್ಳಿ(ಡಿ.26):  ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುವಂತಹ ಕೆಲಸವನ್ನು ಯಾರೂ ಮಾಡಬಾರದು. ಈ ಹಿಂದೆಯೂ ನಾನು ಇದನ್ನೇ ಹೇಳಿದ್ದೇನೆ, ಈಗಲೂ ಅದನ್ನೇ ಹೇಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಸ್ಪಷ್ಟಪಡಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮಾಜವು ಒಂದು ಮನೆ ಇದ್ದಂತೆ. ಅದನ್ನು ಒಡೆಯುವ ಕೆಲಸ ಯಾರೂ ಮಾಡಬಾರದು. ಸಮಾಜವನ್ನು ಒಟ್ಟಾಗಿಸಿಕೊಂಡು ಹೋಗಬೇಕು ಎಂದರು.

ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ, ಹೈಕಮಾಂಡ್‌ ಭೇಟಿ ಆಗಿಲ್ಲ: ಜಗದೀಶ್‌ ಶೆಟ್ಟರ್‌

ವೀರಶೈವ ಮತ್ತು ಲಿಂಗಾಯತ ಎರಡು ಬೇರೆ- ಬೇರೆ ಎಂಬ ಅರ್ಥದಲ್ಲಿ ಬಿಂಬಿಸಲಾಗುತ್ತಿತ್ತು. ಎಲ್ಲರೂ ಸೇರಿ ಸ್ವತಂತ್ರ ಧರ್ಮದ ಬಗ್ಗೆ ಹೋರಾಟ ಮಾಡಿ ಅಂತಾ ನಾನು ಹೇಳಿದ್ದೇ. ವೀರಶೈವ ಮಹಾಸಭಾ ಲೀಡ್‌ ತೆಗೆದುಕೊಳ್ಳಬೇಕು. ಸಮಾಜದಲ್ಲಿ ಒಡಕು ಉಂಟಾಗುವುದು ಬೇಡ ಎಂಬುದು ನನ್ನ ಅಭಿಪ್ರಾಯವಾಗಿದೆ ಎಂದರು.

ದಾವಣಗೆರೆ ಸಮಾವೇಶದಲ್ಲಿ ಕೆಲ ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಅದರಂತೆ ವೀರಶೈವ ಲಿಂಗಾಯತರ ಬೇಡಿಕೆಗಳಿಗಾಗಿ ಒಗ್ಗಟ್ಟು ಪ್ರದರ್ಶಿಸಲಾಗಿದೆ ಎಂದರು.

Follow Us:
Download App:
  • android
  • ios