Asianet Suvarna News Asianet Suvarna News

ತುಮಕೂರು: ದೇವರ ಕೋಣೆಯಲ್ಲಿ ಅಡಗಿ ಕುಳಿತಿದ್ದ ಬೃಹತ್‌ ಗಾತ್ರದ ನಾಗರಹಾವು, ಬೆಚ್ಚಿಬಿದ್ದ ಜನ..!

ಉರಗ ಸಂರಕ್ಷಕ ದಿಲೀಪ್ ಅವರು ಬೃಹತ್‌ ಗಾತ್ರದ ನಾಗರಹಾವು ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. 

Snake Rescue by Dilip in Tumakuru grg
Author
First Published Oct 1, 2023, 10:15 AM IST

ತುಮಕೂರು(ಅ.01):  ದೇವರ ಕೋಣೆಯಲ್ಲಿ ಸೇರಿಕೊಂಡಿದ್ದ ಬೃಹತ್ ಗಾತ್ರದ ನಾಗರಹಾವು ನೋಡಿದ ಮಂದಿ ಬೆಚ್ಚಿಬಿದ್ದ ಘಟನೆ ತುಮಕೂರು ನಗರದ ಯಲ್ಲಾಪುರದ ವಿನಾಯಕ ನಗರದಲ್ಲಿ ನಡೆದಿದೆ.  ನಾಗರಹಾವು ಕಂಡು ಮನೆಯ ಮಂದಿ ಹೌಹಾರಿದ್ದಾರೆ. 

ಸಿದ್ದರಾಜು ಎಂಬುವವರ ಮನೆಯ ದೇವರ ಕೋಣೆಯಲ್ಲಿದ್ದ ನಾಗರಹಾವು ಸೇರಿಕೊಂಡಿತ್ತು.  ಕೂಡಲೇ ವಾರಂಗಲ್ ಫೌಂಡೇಶನ್ ವನ್ಯಜೀವಿ ಹಾಗೂ ಉರಗ ರಕ್ಷಣಾ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು.  

ಹಾವಿನೊಂದಿಗೆ ಸರಸವಾಡುವ ಶಿರಸಿಯ ಆರು ವರ್ಷದ ಬಾಲಕ: ವೀಡಿಯೋ ವೈರಲ್

ಸ್ಥಳಕ್ಕೆ ಭೇಟಿ ಕೊಟ್ಟ ಉರಗ ಸಂರಕ್ಷಕ ದಿಲೀಪ್ ಅವರು ಬೃಹತ್‌ ಗಾತ್ರದ ನಾಗರಹಾವು ರಕ್ಷಣೆ ಮಾಡಿ ದೇವರಾಯನದುರ್ಗ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟಿದ್ದಾರೆ. 

Follow Us:
Download App:
  • android
  • ios