ರಾಮಮೂರ್ತಿ ನವಲಿ

ಗಂಗಾವತಿ(ಏ.01):  ಸಮೀಪದ ನವಲಿ ಗ್ರಾಮದ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಶೇಷದೇವರು ಪ್ರತ್ಯಕ್ಷವಾಗಿದೆ. ಹೌದು, ದೇವಸ್ಥಾನದ ಆವರಣದ ಹಿಂಭಾಗದಲ್ಲಿ 7 ಅಡಿಯ ನಾಗರಹಾವು ಪ್ರತ್ಯಕ್ಷವಾಗಿದೆ. ಐತಿಹಾಸಿಕವಾಗಿ ಪ್ರಸಿದ್ಧವಾಗಿರುವ ಈ ದೇವಸ್ಥಾನದಲ್ಲಿ ಏ.19 ರಂದು ಜಾತ್ರೆ ನಡೆಯುತ್ತಿದ್ದು, ಹೊಸ ತೇರು ನಿರ್ಮಾಣ ಮಾಡುತ್ತಿರುವ ಕಲಾವಿದರ ಕಣ್ಣಿಗೆ ಹಾವು ಬಿದ್ದಿದೆ. ಎರಡು ಗಂಟೆಗಳ ಕಾಲ ಆವರಣದಲ್ಲಿದ್ದ ನಾಗರಹಾವು ನಂತರ ದೇವಸ್ಥಾನದಿಂದ ನಿರ್ಗಮಿಸಿದೆ ಎಂದು ತಿಳಿದು ಬಂದಿದೆ.

ಈ ದೇವಸ್ಥಾನದಲ್ಲಿ ಮೊದಲಿನಿಂದಲೂ ನಾಗರಹಾವು ಇದೆ ಎಂಬದು ಸ್ಥಳೀಯರ ಮಾತು. ಈ ದೇವಸ್ಥಾನ ಐತಿಹಾಸಿಕವಾಗಿದ್ದು, ಈ ದೇವಸ್ಥಾನದಲ್ಲಿ  ಮಡಿವಂತಿಕೆ ಇದೆ. ದೇವಸ್ಥಾನದಲ್ಲಿ ಭಕ್ತರು ತಪ್ಪು ಮಾಡಿದರೆ ಹಾವು ಪ್ರತ್ಯಕ್ಷವಾಗಿರುವ ಉದಾಹರಣೆಗಳಿವೆ ಎಂಬ ಪ್ರತೀತಿ ಇದೆ.

ಗಡಿ ಭದ್ರತಾ ಸೇವೆಗೆ ಕೊಪ್ಪಳದ ರೇಷ್ಮಾ ಮಹೇಶ, ವೀಣಾದೇವಿ

ಭೋಗಾಪುರೇಶ ಎಂದರೆ ಆಂಜನೇಯಸ್ವಾಮಿ. ಈ ಸ್ವಾಮಿಗೆ ಪುರಷರೇ ಸಿದ್ದಪಡಿಸಿದ ನೈವೇದ್ಯ ಮಾಡುವುದು ವಿಶೇಷವಾಗಿದೆ. ಅಲ್ಲದೇ ದೇವಸ್ಥಾನದ ಒಳಗೆ ತುಪ್ಪದ ದೀಪ ಹಚ್ಚುತ್ತಾರೆ. ಇಲ್ಲಿ ಎಣ್ಣೆಯ ದೀಪ ನಿಷೇಧವಾಗಿದೆ. ಬೖಹತ್ ಗಾತ್ರದ ಹಾವು ಬಂದಿದ್ದರಿಂದ ನಾಗರಹಾವಿಗೆ ಶೇಷದೇವರು ಎಂದು ಕರೆಯುತ್ತಿದ್ದಾರೆ. ಆವರಣದ ಒಳಗೆ ಬಂದ ನಾಗರಹಾವಿಗೆ ಅಲ್ಲಿಯ ಭಕ್ತರು ಕೈ ಮುಗಿದು ಭಕ್ತಿ ಸಮರ್ಪಿಸಿದ್ದಾರೆ.