ಕೊಪ್ಪಳ (ಏ.01): ಕುಷ್ಟಗಿ ತಾಲೂಕಿನ ಬಿಳೇಕಲ್‌ ಗ್ರಾಮದ ರೇಷ್ಮಾ ಮಹೇಶ ಗೌಡ್ರ ಹಾಗೂ ವೀಣಾದೇವಿ ದೇವಪ್ಪ ಗೌಡ್ರ ಬಿಎಸ್‌ಎಫ್‌(ಗಡಿ ಭದ್ರತಾ ಪಡೆ)ಗೆ ಆಯ್ಕೆ ಆಗಿದ್ದು, ಇಂದು ತರಬೇತಿಗಾಗಿ ಮಧ್ಯಪ್ರದೇಶದ ಗ್ವಾಲಿಯರ್‌ಗೆ ತೆರಳುತ್ತಿದ್ದಾರೆ. 

ಅಲ್ಲಿ ತರಬೇತಿ ಪೂರ್ಣಗೊಳ್ಳುತ್ತಿದ್ದಂತೆ ದೇಶದ ಗಡಿ ಕಾಯಲು ತೆರಳಲಿದ್ದಾರೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಗ್ರಾಮಸ್ಥರೆಲ್ಲರ ಒಗ್ಗೂಡಿ ಇಬ್ಬರಿಗೂ ಆರತಿ ಎತ್ತಿ, ಗ್ರಾಮಕ್ಕೆ ಕೀರ್ತಿ ತನ್ನಿ ಎಂದು ದೇಶ ಸೇವೆಗೆ ಬೀಳ್ಕೊಟ್ಟಿದ್ದಾರೆ.

ದಕ್ಷಿಣ ಕನ್ನಡದ ಇಬ್ಬರು ಯುವತಿಯರು ಭಾರತೀಯ ಸೇನೆಗೆ ಆಯ್ಕೆ

 ಯುವತಿಯರಿಬ್ಬರು ಪದವೀಧರರಾಗಿದ್ದು, ಅವರ ಸಹೋದರರು ಸೇನೆಗೆ ಸೇರಲು ಅಭ್ಯಾಸ ನಡೆಸುತ್ತಿರುವುದನ್ನು ಕಂಡು ಸ್ಫೂರ್ತಿ ಪಡೆದಿದ್ದಾರೆ. 

ಬಳಿಕ ಅವರೊಟ್ಟಿಗೆ ಸೇರಿ ತಾವು ಅಭ್ಯಾಸ ನಡೆಸಿದ್ದಾರೆ. ಒಂದು ದಿನವೂ ತಪ್ಪಿಸದೇ ದೈಹಿಕ ಕಸರತ್ತು, ವ್ಯಾಯಾಮ, ಓಟದ ಅಭ್ಯಾಸ ಮಾಡಿದ್ದು ಬಿಎಸ್‌ಎಫ್‌ಗೆ ಆಯ್ಕೆಯಾಗಿದ್ದಾರೆ.