ಬಾಗಲಕೋಟೆ: ಪಂಚಮಿ ದಿನದಂದೇ ನಾಗರ ಹಾವು ಪ್ರತ್ಯಕ್ಷ..!

ಪಂಚಮಿ ದಿನದಂದೇ ಕಾಣಿಸಿಕೊಂಡು ನಾಗರ ಹಾವು| ಬಾಗಲಕೋಟೆ ಜಿಲ್ಲೆಯ ಖಾಜಿಬೂದಿಹಾಳ ಗ್ರಾಮದಲ್ಲಿ ನಡೆದಿದ ಘಟನೆ| ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಣಿಸಿಕೊಂಡ ನಾಗರ ಹಾವು|  ನಾಗರಹಾವನ್ನು ಸೆರೆಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟ ಉರಗ ರಕ್ಷಕ ಡ್ಯಾನಿಯಲ್‌ ನ್ಯೂಟನ್‌|

Snake Came to Village During Nagara Panchami in Bagalkot District

ಬಾಗಲಕೋಟೆ(ಜು.26): ನಾಗರ ಪಂಚಮಿ ದಿನದಂದೇ ನಾಗರ ಹಾವೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಒಂದೆಡೆ ಸಂತಸ ಮತ್ತೊಂದೆಡೆ ಆತಂಕಕ್ಕೆ ಕಾರಣವಾದ ಘಟನೆ ಬಾಗಲಕೋಟೆ ಜಿಲ್ಲೆಯ ಖಾಜಿಬೂದಿಹಾಳ ಗ್ರಾಮದಲ್ಲಿ ನಡೆದಿದೆ. 

"

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾಣಿಸಿಕೊಂಡ ನಾಗರ ಹಾವನ್ನ ಕಂಡ ಗ್ರಾಮಸ್ಥರು ಉರಗ ರಕ್ಷಕ ಡ್ಯಾನಿಯಲ್‌ ನ್ಯೂಟನ್‌ನ್ನು ಗ್ರಾಮಕ್ಕೆ ಕರೆಸಿಕೊಂಡಿದ್ದಾರೆ. 

ಹಾವು ಕಚ್ಚಿಸಿಕೊಂಡು ಸಾವು ಗೆದ್ದು ಬಂದ ಡ್ಯಾನಿಯಿಂದ ಮತ್ತೇ ಶುರುವಾಯ್ತು ಉರಗ ರಕ್ಷಣೆ‌

ಶಾಲೆಯ ಶೌಚಾಲಯದಲ್ಲಿ ಅವಿತಿದ್ದ ನಾಗರ ಹಾವಿನ ಕಣ್ಣು ಮತ್ತು ಮೈಮೇಲೆ ಅಂಟಿದ ಮಣ್ಣನ್ನು ನಿರು ಹಾಕಿ ಸ್ವಚ್ಚಗೊಳಿಸಿದ ಡ್ಯಾನಿಯಲ್‌ ನ್ಯೂಟನ್‌ ನಂತರ ನಾಗರಹಾವನ್ನು ಸೆರೆಹಿಡಿದು ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ. 
 

Latest Videos
Follow Us:
Download App:
  • android
  • ios