ಕಚ್ಚಾತೈಲ ಸಂಗ್ರಹಾಗಾರ ಸಮೀಪ ವಿಚಿತ್ರ ವಾಸನೆ: ಅನಿಲ ಸೋರಿಕೆ ಭೀತಿ

ಕಾಪುವಿನ ಪಾದೂರು ಗ್ರಾಮದ ಕೇಂದ್ರ ಸರ್ಕಾರ ಸ್ವಾಮ್ಯದ ಕಚ್ಚಾತೈಲ ಸಂಗ್ರಹಾಗಾರ ಐಎಸ್‌ಪಿಆರ್‌ಎಲ್‌ ಪರಿಸರದಲ್ಲಿ ಸೋಮವಾರ ಮಧ್ಯಾಹ್ನ ವಿಚಿತ್ರ ವಾಸನೆಯೊಂದು ಕಂಡು ಬಂದಿದ್ದು, ಸ್ಥಳೀಯರು ಅನಿಲ ಸೋರಿಕೆಯ ಭೀತಿ ವ್ಯಕ್ತಪಡಿಸಿದ್ದಾರೆ.

Smell near Crude oil collector in Udupi

ಉಡುಪಿ(ಜೂ.30): ಕಾಪುವಿನ ಪಾದೂರು ಗ್ರಾಮದ ಕೇಂದ್ರ ಸರ್ಕಾರ ಸ್ವಾಮ್ಯದ ಕಚ್ಛಾತೈಲ ಸಂಗ್ರಹಾಗಾರ ಐಎಸ್‌ಪಿಆರ್‌ಎಲ್‌ ಪರಿಸರದಲ್ಲಿ ಸೋಮವಾರ ಮಧ್ಯಾಹ್ನ ವಿಚಿತ್ರ ವಾಸನೆಯೊಂದು ಕಂಡು ಬಂದಿದ್ದು, ಸ್ಥಳೀಯರು ಅನಿಲ ಸೋರಿಕೆಯ ಭೀತಿ ವ್ಯಕ್ತಪಡಿಸಿದ್ದಾರೆ. ಈ ವಾಸನೆಯನ್ನು ಗ್ರಹಿಸಿದ ಕೆಲವು ಮಕ್ಕಳು ಮತ್ತು ಹಿರಿಯರಲ್ಲಿ ತಲೆಸುತ್ತು ವಾಂತಿಯ ಅನುಭವವಾಗಿದೆ.

ಈ ಬಗ್ಗೆ ಸ್ಥಳೀಯ ಮಂಜೂರು ಪಂಚಾಯತ್‌ ಮತ್ತು ಜನಜಾಗೃತಿ ಸಮಿತಿಯ ವತಿಯಿಂದ ಐಎಸ್‌ಪಿಆರ್‌ಎಲ್‌ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸಂಜೆಯ ನಂತರ ವಾಸನೆ ಕಡಿಮೆಯಾಗಿದೆ. ಆದರೆ ವಾಸನೆಯ ಮೂಲ ಯಾವುದು ಎಂಬುದು ಪತ್ತೆಯಾಗಿಲ್ಲ.

ಕಣ್ಣೂರು ಏರ್ಪೋರ್ಟ್‌ನಿಂದ ತಪ್ಪಿಸಿಕೊಂಡ್ರಾ‌ 30ಕ್ಕೂ ಅಧಿಕ ಕನ್ನಡಿಗರು..?

ಸ್ಥಳಕ್ಕೆ ಕಾಪು ತಹಶೀಲ್ದಾರ್‌ ಐಸಾಕ್‌ ಮಹಮ್ಮದ್‌, ಪೊಲೀಸ್‌ ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌, ಮಾಲಿನ್ಯ ನಿಯಂತ್ರ ಅಧಿಕಾರಿ ವಿಜಯ ಹೆಗ್ಡೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜಿ.ಪಂ. ಸದಸ್ಯೆ ಶಿಲ್ಪ ಜಿ.ಸುವರ್ಣ, ಪಂಚಾಯತ್‌ ಅಧ್ಯಕ್ಷ ಸಂದೀಪ್‌ ರಾವ್‌, ಜನಜಾಗೃತಿ ಸಮಿತಿಯ ಸಂಚಾಲಕ ಅರುಣ್‌ ಶೆಟ್ಟಿಪಾದೂರು ಮುಂತಾದವರು ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

Latest Videos
Follow Us:
Download App:
  • android
  • ios