ಕೋಲಾರ(ಡಿ.12): ಮಕ್ಕಳ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮೇಲಿನ ಒತ್ತಡ ನಿವಾರಣೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ನೇಹ ಆ್ಯಪ್ ಜಾರಿಗೊಳಿಸಲು ಮುಂದಾಗಿದೆ.

ರಾಜ್ಯದ ಎಲ್ಲ ಅಂಗನವಾಡಿ ಕೇಂದ್ರಗಳ ಸಮಗ್ರ ಮಾಹಿತಿ ಒಂದೆಡೆ ದೊರೆಯಬೇಕೆಂಬ ಉದ್ದೇಶದಿಂದ ಈ ತಂತ್ರಾಂಶ ರೂಪಿಸಲಾಗಿದೆ. ಇದರಿಂದಾಗಿ ಅಂಗನವಾಡಿಯಲ್ಲಿ ನೋಂದಣಿಯಾಗಿರುವ ಮಕ್ಕಳು, ಗರ್ಭಿಣಿ ಹಾಗೂ ಬಾಣಂತಿಯರ ನಿಖರ ಮಾಹಿತಿ ಲಭ್ಯವಾಗಲಿದೆ.

38 ಸೇವೆಗಳ ನಿರ್ವಹಣೆ:

ಸದ್ಯ ಅಂಗನವಾಡಿ ಕಾರ್ಯಕರ್ತೆಯರು 38 ಸೇವೆಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳನ್ನು ನಿರ್ವಹಣೆ ಮಾಡಬೇಕಾಗಿದೆ. ಇದರೊಂದಿಗೆ ಅಂಗನವಾಡಿಗೆ ಸಂಬಂಧಿಸಿದ ಮಾಸಿಕ ವರದಿಯನ್ನು ಪ್ರತಿ ತಿಂಗಳು ಸಲ್ಲಿಸಬೇಕು. ಆದರೆ, ಆ್ಯಪ್‌ನಿಂದಾಗಿ ಆಯಾ ದಿನ ಮಾಹಿತಿ ಆ್ಯಪ್‌ನಲ್ಲಿ ದಾಖಲಾಗುವುದರಿಂದ ವರದಿ ಸಲ್ಲಿಕೆ ತಪ್ಪಲಿದೆ.

ಶಾಲೆಗೆ ಪೇರೆಂಟ್ಸ್‌ನ ಕರ್ಕೊಂಡ್‌ ಬಾ ಎಂದಿದ್ದಕ್ಕೆ ಬಾಲಕ ಆತ್ಮಹತ್ಯೆ

ಆ್ಯಪ್‌ನಲ್ಲಿ ಅಂಗವಾಡಿ ಯಲ್ಲಿರುವ ಒಟ್ಟು ಮಕ್ಕಳ ಸಂಖ್ಯೆ, ಮಕ್ಕಳ ಹಾಜರಾತಿ, ಮಕ್ಕಳ ತೂಕ, ಉದ್ದ , ಮಕ್ಕಳ ಮತ್ತು ತಾಯಂದಿರ ಏಕರೂಪ ಮಾಹಿತಿ, ಗರ್ಭಿಣಿಯರ ಆರೈಕೆ ಹಾಗೂ ನೋಂದಾಣಿಗಳ ದಾಖಲಿಸುವಿಕೆ ಸೇರಿದಂತೆ ಇತರೆ ಮಾಹಿತಿಯನ್ನು ದಾಖಲಿಸಬೇಕಾಗುತ್ತದೆ. ಪ್ರಾಯೋಗಿಕವಾಗಿ ಈಗಾಗಲೇ ತುಮಕೂರಿನಲ್ಲಿ ಸ್ನೇಹ ಆ್ಯಪ್ ಬಳಕೆ ಮಾಡಲಾಗುತ್ತಿದ್ದು, ಇತರ ಜಿಲ್ಲೆಗಳಿಗೆ ವಿಸ್ತರಣೆಗೊಳ್ಳಲಿದೆ ಎಂದಿದ್ದಾರೆ.

ಸ್ನೇಹ ಆ್ಯಪ್‌ ಬಳಕೆಗೆ ಸ್ಮಾರ್ಟ್‌ ಫೋನ್ ಅಗತ್ಯವಿದ್ದು, ಎಲ್ಲ ಅಗಂನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್‌ ನೀಡಲು ಇಲಾಖೆ ಮುಂದಾಗಿದೆ. ಇದರಂತೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, ಈ ತಿಂಗಳ ಕೊನೆಗೆ ಸ್ಮಾರ್ಟ್‌ ಫೋನ್ ಕಾರ್ಯಕರ್ತೆಯರ ಕೈ ಸೇರುವ ಸಾಧ್ಯತೆ ಇದೆ.

ಬೌನ್ಸ್‌ನಲ್ಲಿ ಬರ್ತಾರೆ ಸರಗಳ್ಳರು..! ಬಾಡಿಗೆ ಬೈಕ್ ಪಡೆದು ಕೃತ್ಯ