Asianet Suvarna News Asianet Suvarna News

ಕುಬ್ಜಗಿಡಗಳೂ ಸಾರುತ್ತಿವೆ ಬಸವಣ್ಣನವರ ಸಂದೇಶ..!

ಕುಬ್ಜಗಿಡಗಳು ಮೌನವಾಗಿದ್ದುಕೊಂಡು ಬಸವಣ್ಣನವರ ಸಂದೇಶವನ್ನು ಜನ ಸಮುದಾಯಕ್ಕೆ ಸಾರಲಿ ಎಂಬ ಭಾವನೆಯಿಂದ ಕುಬ್ಜಗಿಡಗಳನ್ನು ಬೆಳೆಸುವ ಹವ್ಯಾಸವನ್ನು ದೊಡ್ಡಮನಿ ಅವರು ಕಳೆದ 30 ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ.

small plants spreds basavanna teaching
Author
Bangalore, First Published Oct 7, 2019, 10:56 AM IST
  • Facebook
  • Twitter
  • Whatsapp

ಮೈಸೂರು(ಅ.07): ಇಲ್ಲಿ ಕುಬ್ಜಗಿಡಗಳು ಸಾರುತ್ತಿದೆ ಬಸವಣ್ಣನವರ ಸಂದೇಶ..! ಹೌದು.. ಕುಬ್ಜ ಗಿಡಗಳನ್ನು ಬೆಳೆಸಿ ಅದನ್ನು ಪ್ರದರ್ಶಿಸಿ, ಈ ಮಾರ್ಗದಿಂದಲೂ ಬಸವಣ್ಣನವರ ಸಂದೇಶಗಳನ್ನು ಜನರಿಗೆ ಸಾರಬಹುದು ಎಂದು ವ್ಯಕ್ತಿಯೊಬ್ಬರು ತೋರಿಸಿಕೊಟ್ಟಿದ್ದಾರೆ.

ಸುಮಾರು 700 ರಿಂದ 800 ಕುಬ್ಜ ಗಿಡಗಳನ್ನು ಸಂಗ್ರಹಿಸಿ, ಅದನ್ನು ಪ್ರದರ್ಶಿಸಿ ಬಸವಣ್ಣನವರ ಸಂದೇಶ ಸಾರಲು ಹೊರಟಿದ್ದಾರೆ ರಾಮಕೃಷ್ಣನಗರದ ಇ ಅಂಡ್‌ ಎಫ್‌ ಬ್ಲಾಕ್‌ನ ನಿವಾಸಿ ಬಿ.ಎನ್‌. ದೊಡ್ಡಮನಿ ಅವರು.

ಮೈಸೂರು: ಐಸ್‌ಕ್ರಿಂ ತಿನ್ನೋ ಸ್ಪರ್ಧೆ, ಮಕ್ಕಳದ್ದೇ ಕಾರುಬಾರು

ಕುಬ್ಜಗಿಡಗಳು ಮೌನವಾಗಿದ್ದುಕೊಂಡು ಬಸವಣ್ಣನವರ ಸಂದೇಶವನ್ನು ಜನ ಸಮುದಾಯಕ್ಕೆ ಸಾರಲಿ ಎಂಬ ಭಾವನೆಯಿಂದ ಕುಬ್ಜಗಿಡಗಳನ್ನು ಬೆಳೆಸುವ ಹವ್ಯಾಸವನ್ನು ದೊಡ್ಡಮನಿ ಅವರು ಕಳೆದ 30 ವರ್ಷಗಳಿಂದ ರೂಢಿಸಿಕೊಂಡು ಬಂದಿದ್ದಾರೆ.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಇದರ ಪ್ರಯೋಜನವಾಗಲಿ ಎಂಬ ಉದ್ದೇಶದಿಂದ ಅ. 8ರವರೆಗೆ ಕುಬ್ಜಗಿಡಗಳನ್ನು ವೀಕ್ಷಿಸಲು ಮುಕ್ತ ಅವಕಾಶ ಕಲ್ಪಿಸಲು ಕುಬ್ಜಗಿಡಗಳ ಪ್ರದರ್ಶನ ಅವಕಾಶ ಕಲ್ಪಿಸಿದ್ದಾರೆ.

ಜಂಬೂಸವಾರಿಯಲ್ಲಿ ಆನೆಗಳಿಗೆ ಕುಸುರೆ ಆಹಾರ

ಬೋಗಾದಿ-ಗದ್ದಿಗೆ ರಸ್ತೆಯಲ್ಲಿ ಚಿಕ್ಕರೆಗೇಟ್‌ನಿಂದ ಕಮರಳ್ಳಿಗೆ ಹೋಗುವ ರಸ್ತೆಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಕುಬ್ಜಗಿಡಗಳನ್ನು ಬೆಳೆಸಿ ಸಂಗ್ರಹಿಸಿದ್ದಾರೆ. ಇದುವರೆಗೂ ಸುಮಾರು 800 ಕುಬ್ಜಗಿಡಗಳನ್ನು ಸಂಗ್ರಹಿಸಿದ್ದು, ನೂರಾರು ಜಾತಿ, ವಿವಿಧ ವಯೋಮಾನ ಹಾಗೂ ವಿವಿಧ ಗಾತ್ರದ ಗಿಡಗಳನ್ನು ಬೆಳೆಸಿದ್ದು, ನಾವೆಲ್ಲಾ ಒಂದೇ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತವೆ. ಇದರ ಹಿಂದೆ ಅವ್ಯಕ್ತವಾಗಿ ಬಸವಣ್ಣನವರ ಸಂದೇಶವನ್ನು ನೋಡುಗರಿಗೆ ಸಾರುತ್ತಿವೆ ಎಂದು ಬಿಂಬಿಸುತ್ತವೆ.

-ಎಲ್‌.ಎಸ್‌. ಶ್ರೀಕಾಂತ್‌

Follow Us:
Download App:
  • android
  • ios