Asianet Suvarna News Asianet Suvarna News

ಸರ್ಕಾರಿ ಯೋಜನೆಯಡಿ ಮನೆ ಪಡೆದಿದ್ದೀರಾ : ಗಮನಿಸಿ

ಸರ್ಕಾರಿ ಯೋಜನೆ ಅಡಿಯಲ್ಲಿ ಮನೆ ಪಡೆದಿದ್ದೀರಾ ..? ಇಲ್ಲೊಮ್ಮೆ ಗಮನಿಸಿ.. ಈ ಸೂಚನೆಯನ್ನು ಪಾಲಿಸಿ 

Slum Board Instructions For Who Gets House under Govt Scheme snr
Author
Bengaluru, First Published Sep 17, 2020, 11:51 AM IST

ಮೈಸೂರು (ಸೆ.17):  ಮನೆಪಡೆದವರು ಗುಡಿಸಲು ತೆರವುಗೊಳಿಸುವಂತೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಸೂಚಿಸಿದ್ದಾರೆ.

ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಹುಡ್ಕೋ, ವಾಂಬೆ, ನಗರಾಶ್ರಯ, ಎಸ್‌ಸಿಪಿ ಹಾಗೂ ಜೆನಮ್‌ರ್‍-ಬಿಎಸ್‌ಯುಪಿ ಯೋಜನೆಯಡಿ ಮನೆಗಳನ್ನು ಪಡೆದ ಫಲಾನುಭವಿಗಳು ಸರ್ಕಾರಿ, ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ, ಖಾಸಗಿ ಒಡೆತನದ ಪ್ರದೇಶದಲ್ಲಿ ನಿರ್ಮಿಸಿಕೊಂಡಿದ್ದ ತಮ್ಮ ಗುಡಿಸಲುಗಳನ್ನು ತೆರವುಗೊಳಿಸಬೇಕಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ನಶೆಯಲ್ಲಿದ್ರಾ ಸೆಲೆಬ್ರಿಟಿಗಳು; ಕರಣ್ ಮನೆಯ ಪಾರ್ಟಿ ವಿಡಿಯೋ ಸತ್ಯ!

ಆದರೆ ಮನೆಗಳನ್ನು ಪಡೆದ ಕೊಳಚೆ ಪ್ರದೇಶದ ಫಲಾನುಭವಿಗಳು ತಮ್ಮ ಗುಡಿಸಲುಗಳನ್ನು ತೆರವುಗೊಳಿಸದೇ ಗುಡಿಸಲುಗಳನ್ನು ಬೇರೆಯವರಿಗೆ ವಾಸಕ್ಕೆ ನೀಡಿರುವುದು, ಭೋಗ್ಯ, ಬಾಡಿಗೆಗೆ ನೀಡಿರುವುದು, ಕ್ರಯ ಮಾಡಿಕೊಂಡಿರುವುದು, ಅಥವಾ ತಮ್ಮ ಸಂಬಂಧಿಕರಿಗೆ ವಾಸಕ್ಕೆ ನೀಡಿರುವುದು ಮಂಡಳಿಯ ಗಮನಕ್ಕೆ ಬಂದಿದ್ದು, ಇದು ಕಾನೂನು ಬಾಹಿರವಾಗಿರುತ್ತದೆ. ಅಲ್ಲದೇ ಗುಡಿಸಲು ಮುಕ್ತಗೊಳಿಸಲು ಫಲಾನುಭವಿಗಳು ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ.

ಕೊಳಚೆ ಪ್ರದೇಶದ ನಿವಾಸಿಗಳಿಗೆ ವಾಸಿಸಲು ಯೋಗ್ಯ ಮನೆ ನಿರ್ಮಿಸುತ್ತಿದ್ದು, ಮನೆಗಳ ಹಂಚಿಕೆ ಪಡೆದ ಫಲಾನುಭವಿಗಳು ತಮ್ಮ ಗುಡಿಸಲುಗಳನ್ನು ಒಂದು ವಾರದೊಳಗೆ ಸ್ವಯಂ ಪ್ರೇರಿತರಾಗಿ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಮನೆಗಳನ್ನು ಹಂಚಿಕೆ ಪಡೆದಇಂತಹ ಫಲಾನುಭವಿಗಳ ಹಂಚಿಕಾತಿಯನ್ನು ರದ್ದುಪಡಿಸಲು ಕ್ರಮ ವಹಿಸಲಾಗುವುದು ಹಾಗೂ ಮನೆ ಹಂಚಿಕೆ ಪಡೆದ ಫಲಾನುಭವಿಗಳ ಗುಡಿಸಲುಗಳನ್ನು ಗುರುತಿಸಿ ಮಂಡಳಿ ವತಿಯಿಂದ ಇಂತಹ ಗುಡಿಸಲುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.

ಇದು ಮನೆಗಳ ಹಂಚಿಕೆ ಪಡೆದ ಫಲಾನುಭವಿಗಳ ಗುಡಿಸಲುಗಳಿಗೆ ಮಾತ್ರಅನ್ವಯವಾಗಿದೆ, ಇತರೆ ಗುಡಿಸಲು ವಾಸಿಗಳು ಯಾವುದೇ ಆತಂಕಕ್ಕೆ ಒಳಗಾಗಬಾರದೆಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios