Asianet Suvarna News Asianet Suvarna News

ಮುಕ್ತವಾಗಿ ಮಾತನಾಡಿದರೆ ಬಲಪಂಥೀಯ ಎನ್ನುತ್ತಾರೆ

 ಡಾ. ಶಿವರಾಮ ಕಾರಂತ ಟ್ರಸ್ಟ್‌, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನವು ಆಯೋಜಿಸಿದ್ದ ಡಾ. ಶಿವರಾಮ ಕಾರಂತ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಸಾಹಿತಿ ಎಸ್‌ ಎಲ್ ಭೈರಪ್ಪ ಸ್ವೀಕರಿಸಿದ್ದಾರೆ

SL Bhyrappa receives Shivaram Karanth award snr
Author
Bengaluru, First Published Oct 11, 2020, 4:02 PM IST

  ಮೈಸೂರು (ಅ.11):  ಮುಕ್ತವಾಗಿ ಹೇಳುವವರನ್ನು, ಮಾತನಾಡುವವರನ್ನುಬಲಪಂಥೀಯರೆಂದು ಸಿದ್ಧಾಂತವಾದಿಗಳು ಕರೆಯುತ್ತಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಎಸ್‌.ಎಲ್‌. ಭೈರಪ್ಪ ಅಭಿಪ್ರಾಯಪಟ್ಟರು.

ಕುವೆಂಪುನಗರದ ಪ್ರಮತಿ ಹಿಲ್‌ ವ್ಯೂ ಅಕಾಡೆಮಿಯಲ್ಲಿ ಕೋಟತಟ್ಟು ಗ್ರಾಪಂ, ಡಾ. ಶಿವರಾಮ ಕಾರಂತ ಟ್ರಸ್ಟ್‌, ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನವು ಆಯೋಜಿಸಿದ್ದ ಡಾ. ಶಿವರಾಮ ಕಾರಂತ ಅವರ ಜನ್ಮ ದಿನಾಚರಣೆ ಸಮಾರಂಭದಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಮುಕ್ತವಾದ ಬರವಣಿಗೆ ಇದೆ. ಲೇಖಕನಿಗೆ ಮುಕ್ತ ಮನಸ್ಸು, ಅತ್ಯಂತ ಅಗತ್ಯ. ಕಾರಂತರು ಬಹಳ ದೊಡ್ಡ ಲೇಖಕರು ಹಾಗೂ ಕಾದಂಬರಿಕಾರರು. ಅವರು ಕಾದಂಬರಿ ಪ್ರಕಾರ ಆರಂಭಿಸಿದ ಮೇಲೆ ಕನ್ನಡ ಕಾದಂಬರಿ ಲೋಕ ಹೇಗೆ ಬೆಳವಣಿಗೆ ಆಯಿತು ಎಂಬುದು ಮುಖ್ಯ ಎಂದರು.

ಡಾ. ಎಸ್‌. ಎಲ್ ಭೈರಪ್ಪಗೆ ಮತ್ತೊಂದು ಗೌರವ ..

ಎಡಪಂಥ, ಬಲಪಂಥ ಎಂಬ ಸಿದ್ಧಾಂತವೇ ಇಲ್ಲ. ಅದನ್ನು ಹುಟ್ಟುಹಾಕಿದ್ದೇ ಸಿದ್ಧಾಂತವಾದಿಗಳು. ವಾಸ್ತವ ವಿಚಾರಗಳನ್ನು ಹೇಳುವ, ಮುಕ್ತವಾಗಿ ಮಾತನಾಡುವ ಹಾಗೂ ಬರೆಯುವವರನ್ನು ಬಲಪಂಥಿಯರೆಂದು ಸಿದ್ಧಾಂತವಾದಿಗಳು ಕರೆಯುತ್ತಿದ್ದಾರೆ. ಈ ಆಪಾದನೆಯಿಂದ ಕೋಟ ಶಿವರಾಮ ಕಾರಂತರೂ ಕೂಡ ಮುಕ್ತವಾಗಿರಲಿಲ್ಲ. ಕಾರಂತರು ವಾಸ್ತವ ಅಂಶವನ್ನೇ ಹೆಚ್ಚಾಗಿ ಕಾದಂಬರಿಯಲ್ಲಿ ಪ್ರಸ್ತಾಪಿಸುತ್ತಿದ್ದರು. ಓರ್ವ ಲೇಖಕನಿಗೆ ಮುಕ್ತ ಮನಸ್ಸು ಅತ್ಯಂತ ಅಗತ್ಯ. ಅವರು ಯಾವುದೇ ಸಿದ್ಧಾಂತಕ್ಕೆ ಕಟ್ಟು ಬೀಳದಿದ್ದರೂ ಈ ಕಾರಣಕ್ಕೆ ಅವರನ್ನು ಬಲಪಂಥೀಯ ಲೇಖಕ ಎಂದು ಕರೆಯಲಾಯಿತು ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಡಾ.ಎಸ್‌.ಎಲ…. ಭೈರಪ್ಪ ನಾಡುಕಂಡ ದೊಡ್ಡ ಸಾಹಿತಿ. ಅವರಿಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಮಾಡಿರುವುದು ಸಂತೋಷದ ಸಂಗತಿ. ಇವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌, ಸಂಸದ ಪ್ರತಾಪ್‌ ಸಿಂಹ, ಶಾಸಕ ಎಲ…. ನಾಗೇಂದ್ರ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಎಂಡಿಎ ಅಧ್ಯಕ್ಷ ಎಚ್‌.ವಿ. ರಾಜೀವ, ಸಾಹಿತಿ ಪ್ರಧಾನ ಗುರುದತ್ತ, ಕೋಟತಟ್ಟು ಗ್ರಾಪಂ ಆಡಳಿತಾಧಿಕಾರಿ ಅರುಣ್‌ಕುಮಾರ್‌ ಶೆಟ್ಟಿ, ಡಾ. ಶಿವರಾಮ ಕಾರಂತ ಟ್ರಸ್ವ್‌ನ ಗೌರವ ಕಾರ್ಯದರ್ಶಿ ಸುಬ್ರಾಯ ಆಚಾರ್‌, ಎಸ್‌.ಎಲ…. ಭೈರಪ್ಪ ಸಾಹಿತ್ಯ ಪ್ರತಿಷ್ಠಾನದ ಗೌರವ ಕಾರ್ಯದರ್ಶಿ ಡಾ. ಶೇಖರ್‌ ಇದ್ದರು.

Follow Us:
Download App:
  • android
  • ios