Asianet Suvarna News Asianet Suvarna News

ಗಂಗಾವತಿ: ನ್ಯಾಯಾಧೀಶರ ಬುದ್ಧಿವಾದಕ್ಕೆ ಮತ್ತೆ ಒಂದಾದ ಆರು ಜೋಡಿಗಳು!

: ಕೌಟುಂಬಿಕ ಕಲಹದ, ಸಣ್ಣಪುಟ್ಟ ವೈಮನಸ್ಸಿನಿಂದ ದೂರವಾಗಿ ವಿಚ್ಛೇದನಕ್ಕೆ ಮುಂದಾಗಿದ್ದ ಆರು ಜೋಡಿಗಳು ಗಂಗಾವತಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ನಡೆಯಿತು.

six couples awaiting divorce reunite at Lok Adalat gangavati rav
Author
First Published Mar 17, 2024, 5:57 PM IST

ಕೊಪ್ಪಳ (ಮಾ.17): ಕೌಟುಂಬಿಕ ಕಲಹದ, ಸಣ್ಣಪುಟ್ಟ ವೈಮನಸ್ಸಿನಿಂದ ದೂರವಾಗಿ ವಿಚ್ಛೇದನಕ್ಕೆ ಮುಂದಾಗಿದ್ದ ಆರು ಜೋಡಿಗಳು ಗಂಗಾವತಿ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ನ್ಯಾಯಾಧೀಶರ ಸಮ್ಮುಖದಲ್ಲಿ ಮತ್ತೆ ಒಂದಾದ ಅಪರೂಪದ ಘಟನೆ ನಡೆಯಿತು.

ಕನಕಗಿರಿಯ ಅಂಬಿಕಾ ಭರಮಣ್ಣ, ಹೊಸಗುಡ್ಡದ ಶಿವಲಿಂಗಮ್ಮ ಮುತ್ತಣ್ಣ, ಜಂಗಮರಕಲ್ಹುಡಿಯ ಶಿವಮ್ಮ ಗೂಳ್ಳಪ್ಪ, ಸಿದ್ದಾಪುರದ ಎಂ ತ್ರೀವೇಣಿ ರಾಘವೇಂದ್ರ, ವಡ್ಡರಹಟ್ಟಿಯ ಜ್ಯೋತಿ ರಾಜೇಶ ಅಸಂಗಿ, ಚಿಕ್ಕಡಂಕನಕಲ್ಲಿ ಬಸವರಾಜ ಲಕ್ಷ್ಮಿ ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ್ದ ಜೊಡಿಗಳು.

 

ರಾಷ್ಟ್ರೀಯ ಲೋಕ ಅದಾಲತ್‌: ಕರ್ನಾಟಕದಲ್ಲಿ ಒಂದೇ ದಿನ 35 ಲಕ್ಷ ಕೇಸ್‌ ಇತ್ಯರ್ಥ

ನ್ಯಾಯಾಧೀಶರ ಬುದ್ಧಿವಾದ:

ನ್ಯಾಯಾಧೀಶರಾದ ಗೌರಮ್ಮ, ಶ್ರೀದೇವಿ, ರಮೇಶ ಗಾಣಿಗೇರ, ಸದಾನಂದ ನಾಯಕರ ಅವರು ದಂಪತಿಗಳ ಮಧ್ಯೆ ಸಮಾಲೋಚನೆ ನಡೆಸಿ ದಂಪತಿಗಳಿಗೆ ಬುದ್ಧಿವಾದ ಹೇಳಿದರು. ಬಳಿಕ ಪರಸ್ಪರ ರಾಜೀಸಂಧಾನ ಮಾಡಿಸಿದರು. ಒಂದುಗೂಡಿ ಜೀವನ ಮಾಡುವುದಕ್ಕೆ ಒಪ್ಪಿಕೊಂಡ ದಂಪತಿಗಳಿಗೆ ನ್ಯಾಯಾಲಯದಲ್ಲೇ ನ್ಯಾಯಾಧೀಶರ ಸಮ್ಮುಖದಲ್ಲಿ ಪರಸ್ಪರ ಸಿಹಿ ತಿನಿಸಿ ಹಾರ ಬದಲಾಯಿಸಿಕೊಂಡರು. ನ್ಯಾಯಾಧೀಶರು, ವಕೀಲರು ಚಪ್ಪಾಳೆ ತಟ್ಟಿದರು.

ಡೈವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದ 15 ಜೋಡಿಗಳನ್ನು ಮತ್ತೆ ಒಂದುಗೂಡಿಸಿದ ಲೋಕ ಅದಾಲತ್‌

Follow Us:
Download App:
  • android
  • ios