Sirsi-Hubballi ರಾಜ್ಯ ಹೆದ್ದಾರಿ ಶೀಘ್ರ ಮೇಲ್ದರ್ಜೆಗೆ: ಸಚಿವ ಹೆಬ್ಬಾರ

*  ಮುಂಡಗೋಡ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಹೆಬ್ಬಾರ
*  ಶಿರಸಿಯಲ್ಲಿ ಹಾಲು ಶೇಖರಣಾ ಘಟಕ
*  ಚಿಕ್ಕನೀರಾವರಿ ಇಲಾಖೆಯಡಿ 14.65 ಕೋಟಿ ವೆಚ್ಚದಲ್ಲಿ 14 ಕಾಮಗಾರಿ 

Sirsi Hubballi State Highway Soon Upgrade Says Minister Shivaram Hebbar grg

ಮುಂಡಗೋಡ(ಮಾ.19):  ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯನ್ನು(Sirsi-Hubballi State Highway) ಶೀಘ್ರದಲ್ಲೇ ಮೇಲ್ದರ್ಜೆಗೇರಿಸಲಾಗುವುದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ(Shivaram Hebbar) ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿರಸಿ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯನ್ನು ಏಳು ಮೀಟರ್‌ ಅಗಲ ಮಾಡಿ ರಸ್ತೆ ನಿರ್ಮಾಣ ಮಾಡಲು ಸರ್ಕಾರದ(Government of Karnataka) ಹಂತದಲ್ಲಿ ಪ್ರಸ್ತಾವನೆ ಇದೆ. ಶೀಘ್ರದಲ್ಲಿ ಈ ಕಾಮಗಾರಿಗೆ ಅನುದಾನ(Grants)ಮಂಜೂರಾಗಲಿದೆ ಎಂದು ಸಚಿವರು ತಿಳಿಸಿದರು.

ಕಾಮಗಾರಿಗಳನ್ನು ನಡೆಸುವ ಮೊದಲೇ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅಗತ್ಯ ಇರುವ ಕಡೆಗಳಲ್ಲಿ ಮಾತ್ರವೇ ಕಾಮಗಾರಿ ನಡೆಸಬೇಕು. ಸಾರ್ವಜನಿಕರಿಗೆ ಅಗತ್ಯವಿರುವ ಕೆಲಸಗಳನ್ನು ಕೈಗೊಂಡು ಸರ್ಕಾರದ ಹಣ ಸದುಪಯೋಗಪಡಿಸಬೇಕು. ವಿನಾಕಾರಣ ಹಣ ಪೋಲಾಗದಂತೆ ನೋಡಿಕೊಳ್ಳಬೇಕು ಎಂದರು.

Uttara Kannada: ಕೆರೆ ಮೀನುಗಾರಿಕೆ: ಹೊರ ಜಿಲ್ಲೆಯವರಿಗೆ ಅವಕಾಶವಿಲ್ಲ: ಸಚಿವ ಹೆಬ್ಬಾರ

ಗಂಗಾ ಕಲ್ಯಾಣ ಯೋಜನೆಯನ್ನು ಮಾರ್ಚ್‌ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಹೆಸ್ಕಾಂ(HESCOM) ಅಧಿಕಾರಿಗಳಿಗೆ ಸೂಚಿಸಲಾಯಿತು. ತಾಲೂಕಿನಲ್ಲಿ ಯೋಜನೆಯಡಿ ಮಂಜೂರಾದ 54ರ ಪೈಕಿ 49 ಪೂರ್ಣಗೊಂಡಿವೆ. ಇನ್ನುಳಿದ 5 ಕೂಡ ಶೀಘ್ರದಲ್ಲಿ ಪೂರ್ಣಗೊಳ್ಳಲಿವೆ ಎಂದು ಹೆಸ್ಕಾಂ ಅಧಿಕಾರಿ ವಿನಾಯಕ ಪೇಟಕರ ತಿಳಿಸಿದರು.

ವಿದ್ಯುಚ್ಛಕ್ತಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಕಾಮಗಾರಿಯಲ್ಲಿ ಸಂಪೂರ್ಣ ಕಳಪೆ ಗುಣಮಟ್ಟದ ಸಲಕರಣೆಗಳನ್ನು ಉಪಯೋಗಿಸಲಾಗುತ್ತಿದೆ ಎಂದು ಆರೋಪಿಸಿದ ಮಾರ್ಕೆಟಿಂಗ್‌ ಸೊಸೈಟಿ ಅಧ್ಯಕ್ಷ ರವಿಗೌಡ ಪಾಟೀಲ, ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಪಟ್ಟಣ ವ್ಯಾಪ್ಯಿಯಲ್ಲಿರುವ ಕೆರೆಗಳು ನಿರ್ವಹಣೆ ಇಲ್ಲದೆ ಅಧೋಗತಿಗೆ ತಲುಪಿವೆ. ಹಾಗಾಗಿ ಮುಂಡಗೋಡ ಹಾಗೂ ಯಲ್ಲಾಪುರ ಪಟ್ಟಣ ವ್ಯಾಪ್ತಿಯಲ್ಲಿರುವ ಕೆರೆಗಳನ್ನು ಚಿಕ್ಕ ನೀರಾವರಿ ಇಲಾಖೆಗೆ ಹಸ್ತಾಂತರಿಸುವಂತೆ ಸಚಿವ ಹೆಬ್ಬಾರ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠಗೆ ಸೂಚಿಸಿದರು.

ಅಲ್ಲದೇ ಪಟ್ಟಣದಲ್ಲಿ ನಿರ್ಮಾಣ ಮಾಡಲಾಗುವ ಜಿ+2 ಅಪಾರ್ಟ್‌ಮೆಂಟ್‌ನಲ್ಲಿ ನಿವೇಶನ ಪಡೆಯಲು ಬಡವರಿಗೆ ಒಳ್ಳೆಯ ಅವಕಾಶವಿದೆ. ಫಲಾನುಭವಿಗಳಿಗೆ(Beneficiaries) ಸರ್ಕಾರ ನಿಗದಿಪಡಿಸಿದ .1 ಲಕ್ಷ ತುಂಬಲು ಮನವೊಲಿಸುವಂತೆ ಹೇಳಿದರು.

ತಾಲೂಕಿನಲ್ಲಿ ಪಶು ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಇದ್ದು, ಕಾರ್ಯನಿರ್ವಹಿಸುವುದು ಕಷ್ಟವಾಗುತ್ತಿದೆ. ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಬೇಕೆಂದು ಪಶು ಸಂಗೋಪನಾ ಇಲಾಖೆ ಅಧಿಕಾರಿ ಮನವಿ ಮಾಡಿದರು.
ಚಿಕ್ಕನೀರಾವರಿ ಇಲಾಖೆಯಡಿ 14.65 ಕೋಟಿ ವೆಚ್ಚದಲ್ಲಿ 14 ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಚಿಕ್ಕ ನೀರಾವರಿ ಇಲಾಖೆ ಅಧಿಕಾರಿ ಆರ್‌.ಎನ್‌ ನಾಯ್ಕ ತಿಳಿಸಿದರು.

ತಾಪಂ ಇಒ ಪ್ರವೀಣ ಕಟ್ಟಿ, ತಹಸೀಲ್ದಾರ ಶ್ರೀಧರ ಮುಂದಲಮನಿ, ಮಾಜಿ ಜಿಪಂ ಉಪಾಧ್ಯಕ್ಷ ಎಲ್‌.ಟಿ. ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ನಾಗಭೂಷಣ ಹಾವಣಗಿ, ಪಟ್ಟಣದ ಎಲ್‌.ಎಸ್‌.ಎಂ.ಪಿ ಬ್ಯಾಂಕ್‌ ಅಧ್ಯಕ್ಷ ಉಮೇಶ ಬಿಜಾಪುರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಕಟ್ಟಡ ಕಾರ್ಮಿಕರಿಗಾಗಿ Mobile Clinic : 3 ಜಿಲ್ಲೆಗಳಲ್ಲಿ ‘ಶ್ರಮಿಕ ಸಂಜೀವಿನಿ’ ಜಾರಿ

ಶಿರಸಿಯಲ್ಲಿ ಹಾಲು ಶೇಖರಣಾ ಘಟಕ:

ಮುಂಡಗೋಡದಲ್ಲಿ(Mundgod) ಹಾಲಿನ ಉತ್ಪಾದನೆ ಹೆಚ್ಚಿಸಬೇಕಿದೆ. ಜಿಲ್ಲೆಯಲ್ಲಿ 44 ಸಾವಿರ ಲೀಟರ್‌ ಹಾಲು ಉತ್ಪಾದನೆಯಾದರೆ, ಖರ್ಚಾಗುವ ಹಾಲಿನ ಪ್ರಮಾಣ ಕೂಡ ಅಷ್ಟೇ ಇದೆ. ಹಾಗಾಗಿ ಟ್ರಾನ್ಸ್‌ಪೋರ್ಟ್‌ ವೆಚ್ಚ ವ್ಯಯ ಮಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ಶಿರಸಿಯಲ್ಲಿ ಹಾಲು ಶೇಖರಣೆ ಘಟಕ ತೆರೆಯಲಾಗುತ್ತಿದೆ. ರೈತರಿಗೆ ಹೈನುಗಾರಿಕೆ ಬಗ್ಗೆ ಉತ್ತೇಜಿಸಬೇಕೆಂದು ಸಚಿವ ಶಿವರಾಮ ಹೆಬ್ಬಾರ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

5,400 ಕೋಟಿ ವೆಚ್ಚದಲ್ಲಿ ಜಮೀನಿಗೆ ನೀರು:

ರೈತರ(Farmers) ಜಮೀನುಗಳಿಗೆ ನಿರೋದಗಿಸುವ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಿಗೆ . 5400 ಕೋಟಿ ಅನುದಾನ ನೀಡಲು ಸಚಿವ ಸಂಪುಟ(Cabinet) ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಪಶ್ಚಿಮಕ್ಕೆ ಹರಿಯುವ ನದಿಗಳಿಗೆ ಆಣೆಕಟ್ಟು ನಿರ್ಮಿಸಿ 74000 ಎಕರೆ ಪ್ರದೇಶದ ಜಮೀನುಗಳಿಗೆ(Land) ನೀರೊದಗಿಸುವ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
 

Latest Videos
Follow Us:
Download App:
  • android
  • ios