ವೈದ್ಯಲೋಕಕ್ಕೆ ಸವಾಲು; ಅಪರೂಪದ ಮಗು ಜನನ
-ವೈದ್ಯ ಲೋಕಕ್ಕೆ ಸವಾಲಾದ ಮಗು
-ಗದಗದಲ್ಲಿ ಅಪರೂಪದ ಮಗು ಜನನ
- ಹುಟ್ಟಿದ ಎರಡು ಗಂಟೆಯೊಳಗೆ ಸಾವು
ಗದಗ (ಆ. 14): ಪ್ರಪಂಚದಲ್ಲೇ ತೀರಾ ಅಪರೂಪ ಎನ್ನಿಸುವ ಮಗುವೊಂದು ಇಲ್ಲಿನ ಬೆಳವಣಿಕಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನನವಾಗಿದೆ.
ಈ ರೀತಿಯ ಮಗುಗೆ ವೈಜ್ಞಾನಿಕವಾಗಿ ಸಿರೆನೊಮೆಲಿಯಾ ಎಂದು ಹೇಳಲಾಗುತ್ತದೆ. ಈ ರೀತಿಯ ಮಕ್ಕಳು ಪ್ರಪಂಚದಲ್ಲಿ ತೀರಾ ಅಪರೂಪವಾಗಿ ಜನಿಸುತ್ತಾರೆ ಎನ್ನಲಾಗಿದೆ. ವೈದ್ಯಲೋಕಕ್ಕೆ ಇದು ಸವಾಲಾಗಿದೆ.
ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕಿ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಿಶುವಿನ ಜನನವಾಗಿದೆ. ಮಜಿನಾ ಹಾಗೂ ಇಸ್ಮಾಯಿಲ್ ಮುಲ್ಲಾ ಎಂಬುವವರಿಗೆ ಜನಿಸಿದ ಮಗು ಇದಾಗಿದೆ. ಜನಿಸಿದ ಎರೆಡು ಗಂಟೆಯೊಳಗೆ ಮಗು ಮರಣವನ್ನಪ್ಪಿದೆ.
ಏನಿದು ಸಿರೆನೊಮೋನಿಯಾ?
ಇದನ್ನು ಮೆರಮೆಡ್ ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಇದು ಪ್ರಪಂಚದಲ್ಲಿ ತೀರಾ ಅಪರೂಪವಾಗಿ ಕಾಣಿಸಿಕೊಳ್ಳುವ ಸಿಂಡ್ರೋಮ್. ಈ ಸಿಂಡ್ರೋಮ್ ಗೆ ಒಳಗಾದ ಮಗು ಎರಡೂ ಕಾಲುಗಳ ಸ್ವಾಧೀನ ಕಳೆದುಕೊಳ್ಳಬಹುದು. ಅಥವಾ ಒಂದು ಕಾಲು ಮಾತ್ರ ಇರಬಹುದು.
ಇತ್ತೀಚಿಗೆ ಇಂತಹದ್ದೊಂದು ಪ್ರಕರಣ ಮಹಾರಾಷ್ಟ್ರದಲ್ಲಿ ನಡೆದಿತ್ತು. ಈಗ ಗದಗದಲ್ಲಿಯೂ ನಡೆದಿದೆ.