ಸಾ.ರಾ.ಮಹೇಶ್‌ ಇತರ ರಾಜಕಾರಣಿಗಳಿಗೆ ಮಾದರಿ : ಎಂ.ಆರ್‌. ನಾಗೇಶ್‌

ಕಳೆದ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ಮಾಜಿ ಸಚಿವ ಸಾ.ರಾ. ಮಹೇಶ್‌ ದೇಶದ ಇತರ ರಾಜಕಾರಣಿಗಳಿಗೆ ಮಾದರಿ ಎಂದು ಮಿರ್ಲೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಎಂ.ಆರ್‌. ನಾಗೇಶ್‌ ಹೇಳಿದರು. ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಮುಖ್ಯವೃತ್ತದಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಸಾ.ರಾ. ಮಹೇಶ್‌ ಅವರ 57ನೇ ವರ್ಷದ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Sir Mahesh is a role model for other politicians: MR. Nagesh snr

  ಕೆ.ಆರ್‌. ನಗರ :  ಕಳೆದ 20 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿರುವ ಮಾಜಿ ಸಚಿವ ಸಾ.ರಾ. ಮಹೇಶ್‌ ದೇಶದ ಇತರ ರಾಜಕಾರಣಿಗಳಿಗೆ ಮಾದರಿ ಎಂದು ಮಿರ್ಲೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕ ಎಂ.ಆರ್‌. ನಾಗೇಶ್‌ ಹೇಳಿದರು. ಸಾಲಿಗ್ರಾಮ ತಾಲೂಕಿನ ಮಿರ್ಲೆ ಗ್ರಾಮದ ಮುಖ್ಯವೃತ್ತದಲ್ಲಿ ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ನಡೆದ ಸಾ.ರಾ. ಮಹೇಶ್‌ ಅವರ 57ನೇ ವರ್ಷದ ಜನ್ಮದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾಯಿತ ಸದಸ್ಯರು ಜನರ ಋುಣ ತೀರಿಸುವ ಬಗೆಯನ್ನು ತೋರಿಸಿಕೊಟ್ಟನಮ್ಮ ನಾಯಕ ಜನ ಮಾನಸದಲ್ಲಿ ಸದಾ ಇರುತ್ತಾರೆ ಎಂದರು

ಕ್ಷೇತ್ರದ ಜನರು ತನಗೆ ನೀಡಿದ ಅಧಿಕಾರವನ್ನು ಅವರ ಸೇವೆಗೆ ಸದ್ಬಳಕೆ ಮಾಡಿಕೊಂಡ ಅವರು, 15 ವರ್ಷಗಳ ಅವಧಿಯಲ್ಲಿ ಸರ್ಕಾರದ ಸವಲತ್ತುಗಳನ್ನು ಬಡವರು ಮತ್ತು ಅರ್ಹರ ಮನೆ ಬಾಗಿಲಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದು, ಇಂತಹವರು ಪ್ರಜಾಪ್ರಭುತ್ವಕ್ಕೆ ಮೆರುಗು ತರುವ ಕೆಲಸ ಮಾಡುತ್ತಾರೆಂದು ಬಣ್ಣಿಸಿದರು.

ಮುಂದಿನ ದಿನಗಳಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿಗೆ ದೀರ್ಘಾಯುಷ್ಯ ಮತ್ತು ನಿರಂತರ ರಾಜಕೀಯ ಅಧಿಕಾರ ನೀಡಲಿ ಎಂದು ಹಾರೈಸಿದ ಅವರು, ಸಾ.ರಾ. ಮಹೇಶ್‌ ಅವರ ಬದುಕು ಮತ್ತು ಸೇವಾ ಮನೋಭಾವನೆ ನಮಗೆ ಆದರ್ಶ ಪ್ರಾಯವೆಂದರು.

ಇದಕ್ಕೂ ಮೊದಲು ಗ್ರಾಮದ ಅಮೃತೇಶ್ವರ ದೇವಾಲಯದಲ್ಲಿ ಸಾ.ರಾ. ಮಹೇಶ್‌ ಬೆಂಬಲಿಗರು ಮತ್ತು ಅಭಿಮಾನಿಗಳು ವಿಶೇಷ ಪೂಜೆ ನೆರವೇರಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಿಸಿದರು.

ಮಿರ್ಲೆ ಗ್ರಾಪಂ ಅಧ್ಯಕ್ಷ ಬಾಲು, ಸದಸ್ಯರಾದ ಮಂಜುಳ, ರೂಪ, ಎಂ.ಕೆ. ನಾಗೇಶ್‌, ಮುಖಂಡರಾದ ರಘು, ಜೆ. ಮಂಜು, ರಂಗಸ್ವಾಮಿ, ಅರ್ಜುನ್‌, ಕೆಂಪೇಗೌಡ, ಎಂ.ವಿ. ವೆಂಕಟೇಶ್‌, ಪ್ರಕಾಶ್‌, ಪಿ. ನಾಗೇಶ್‌, ಮೋಹನ್‌, ವಾಸು, ಕುನ್ನೇಗೌಡ, ಜಯ ರಾಮೇಗೌಡ, ನಾಗೇಶ್‌ ಇದ್ದರು.

ಬದುಕು ಕಟ್ಟಿಕೊಳ್ಳಲು ರಾಜಕೀಯಕ್ಕೆ ಬಂದಿಲ್ಲ

 ಸಾಲಿಗ್ರಾಮ/ಕೆ.ಆರ್‌. ನಗರ :  ನಮ್ಮ ರಾಜಕೀಯ ಜೀವನ ಉದ್ಯೋಗವಲ್ಲ ಅದು ಸೇವೆ. ಇನ್ನೊಬ್ಬರ ಬದುಕು ಕಟ್ಟಿಕೊಡಲು ರಾಜಕಾರಣ ಮಾಡಬೇಕೆ ಹೊರತು ನಮ್ಮ ಬದುಕು ಕಟ್ಟಿಕೊಳ್ಳಲು ಅಲ್ಲ ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಹೇಳಿರುವ ಮಾತು ನನ್ನ ರಾಜಕೀಯ ಬದುಕಿಗೆ ಸ್ಫೂರ್ತಿ ಆದರ್ಶವಾಗಿದೆ ಎಂದು ಶಾಸಕ ಸಾ.ರಾ. ಮಹೇಶ್‌ ಹೇಳಿದರು.

ಚುಂಚನಕಟ್ಟೆಸಮೀಪದ ಮಾಯಿಗೌಡನಹಳ್ಳಿ ಗ್ರಾಮದಲ್ಲಿ ನಡೆದ ಜೆಡಿಎಸ್‌ ಕಾರ್ಯಕರ್ತರ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನನ್ನ 15 ವರ್ಷ ಶಾಸಕ, 12 ತಿಂಗಳು ಮಂತ್ರಿ ಮಾಡಿದ ನನ್ನ ಮತ ಕ್ಷೇತ್ರದ ಅಭಿವೃದ್ಧಿಗೆ ಸುಮಾರು . 924 ಕೋಟಿಗೂ ಅಧಿಕ ಅನುದಾನ ಅಭಿವೃದ್ಧಿಯ ಜತೆಗೆ ಯಾವುದೇ ಜಾತಿ, ಪಕ್ಷ ಭೇದ ಮಾಡದೆ ತಾಲೂಕಿನ ರೈತರ ಸುಮಾರು . 100 ಕೋಟಿ ಸಾಲವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮನ್ನಾ ಮಾಡಿದ್ದಾರೆ ಎಂದು ಹೇಳಿದರು.

ಹಂತ ಹಂತವಾಗಿ ಹೋರಾಟ ಮಾಡಿದ ಫಲವಾಗಿ ಭಾನುವಾರ ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭವಾಗಿದೆ. ಅಲ್ಲಿ ಒಂದೇ ಜಾತಿ, ಪಕ್ಷದವರು ಕೆಲಸ ಮಾಡುತ್ತಿಲ್ಲ. ಎಲ್ಲಾ ವರ್ಗದವರು ಕೆಲಸ ಮಾಡುತ್ತಿದ್ದು ನಾನು ಯಾವುದೇ ಜಾತಿಗೆ ಸೀಮಿತವಾಗಿ ಕೆಲಸಗಳನ್ನಾಗಲಿ ಅಭಿವೃದ್ಧಿಯನ್ನಾಗಲಿ ತಾಲೂಕಿನಲ್ಲಿ ಮಾಡಿದವನಲ್ಲ ಎಂದರು. ಈ ತಾಲೂಕಿನಲ್ಲಿ 2 ಬಾರಿ ಜಿಪಂ ಸದಸ್ಯರಾಗಿ ಆಯ್ಕೆಯಾದಾಗ ನಿಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಎಷ್ಟುಅನುದಾನ ತಂದು ಕ್ಷೇತ್ರ ಉದ್ದಾರ ಮಾಡಿದ್ದೀರಿ ಜನರಿಗೆ ಹೇಳಿ ನಂತರ ಮತ ಕೇಳಿ ಎಂದರು.

Latest Videos
Follow Us:
Download App:
  • android
  • ios