ಹೋಟೆಲ್ಲಲ್ಲಿ ಟೀ ಕುಡಿದು ಮನವಿ ಪಡೆದ ಜ್ಞಾನೇಂದ್ರ

  • ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಹೋಟೆಲ್‌ವೊಂದರಲ್ಲಿ ಕುಳಿತು ಟೀ ಕುಡಿದು, ಜನರ ಸಮಸ್ಯೆ ಆಲಿಸಿದರು
  •  ಟೀ ಕುಡಿದು, ಜನರ ಸಮಸ್ಯೆ ಆಲಿಸುವ ಮೂಲಕ ಸರಳತೆ ಮೆರೆದರು
Simplicity Of Minister araga Jnanendra snr

ಶಿವಮೊಗ್ಗ (ಸೆ.19): ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೀರ್ಥಹಳ್ಳಿಯ ಹೋಟೆಲ್‌ವೊಂದರಲ್ಲಿ ಕುಳಿತು ಟೀ ಕುಡಿದು, ಜನರ ಸಮಸ್ಯೆ ಆಲಿಸುವ ಮೂಲಕ ಸರಳತೆ ಮೆರೆದ ಘಟನೆ ಶನಿವಾರ ನಡೆಯಿತು. 

ಅವರು ತೀರ್ಥಹಳ್ಳಿಯ ಬಿಜೆಪಿ ಕಚೇರಿಗೆ ಆಗಮಿಸಿದಾಗ ಪಕ್ಕದಲ್ಲಿರುವ ಕಲ್ಪವೃಕ್ಷ ಹೋಟೆಲ್‌ನ ಟೀ ಕುಡಿಯುವುದು ಹಿಂದಿನಿಂದಲೂ ವಾಡಿಕೆ. ಅದೇ ರೀತಿ ಶನಿವಾರ ಬಿಜೆಪಿ ಕಚೇರಿಯಿಂದ ಜ್ಞಾನೇಂದ್ರ ಹೊರಬಂದಾಗ ಹೋಟೆಲ್‌ನ ಕಿಶೋರ್‌ ಟೀ ಕೊಡಲಾ ಎಂದರು.

‘ಕನ್ನಡಪ್ರಭ’ ವರದಿ ಪರಿಷತ್‌ನಲ್ಲಿ ಪ್ರತಿಧ್ವನಿ: 'ಅಕ್ರಮ ಬಾಂಗ್ಲನ್ನರ ಪತ್ತೆಗೆ ವಿಶೇಷ ಕಾರ್ಯಪಡೆ, ಜ್ಞಾನೇಂದ್ರ

 ‘ಆಯ್ತು ಮಾರಾಯಾ’ ಎಂದು ಜ್ಞಾನೇಂದ್ರ ಹೋಟೆಲ್‌ಗೆ ಹೋಗಿ ಕುಳಿತರು. ಅಷ್ಟರಲ್ಲಿ ಹಲವರು ಅಲ್ಲಿಗೆ ಬಂದು ಮನವಿ ಪತ್ರಗಳನ್ನು ಕೊಡಲಾರಂಭಿಸಿದರು. ಅದನ್ನು ಸ್ವೀಕರಿಸಿ ಅವರ ಅಹವಾಲು ಆಲಿಸಿ ಪರಿಹಾರ ಸೂಚಿಸಿದರು.

Latest Videos
Follow Us:
Download App:
  • android
  • ios