'ರೈತ ಸಮುದಾಯ ಮರೆತು ಯಡಿಯೂರಪ್ಪ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ'
ರಾಜ್ಯ ಸರ್ಕಾರದಿಂದ ರೈತರ ನಿರ್ಲಕ್ಷ್ಯ| ರಾಜ್ಯದ ಮಠ ಮಂದಿರಗಳಿಗೆ ಬಜೆಟ್ ಮಂಡನೆ ಬಳಿಕವೂ ಅನುದಾನ ನೀಡಿದ ಸಿಎಂ| ಜಿರ್ಣೋದ್ದಾರ ಮತ್ತು ಮೂಲ ಸವಲತ್ತು ಕಲ್ಪಿಸುವ ಹೆಸರಿನಲ್ಲಿ ಜಾತಿವಾರು ಮತ ಸೆಳೆಯಲು ಧಾರ್ಮಿಕ ಸಂಸ್ಥೆಗಳಿಗೆ ಕೋಟಿಗಟ್ಟಲೇ ಅನುದಾನ|
ಚಿತ್ತಾಪುರ(ಮಾ.26): ರೈತರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನವರು ರೈತ ಸಮುದಾಯವನ್ನು ಮರೆತು ರೈತರ ಬಾಳಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಎಪಿಎಂಸಿ ಅಧ್ಯಕ್ಷ ಸಿದ್ದುಗೌಡ ಅಫಜಲ್‌ಪುರಕರ್ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಹಾಳಾದ ರೈತರ ಬೆæಳೆಗೆ ಕನಿಷ್ಟ ಎಕರೆಗೆ 25 ಸಾವಿರ ಕೊಡಬೇಕೆಂದು ಒತ್ತಾಯಿಸಿದರೂ ಕೇವಲ 2500 ಪರಿಹಾರ ಘೋಷಣೆ ಮಾಡಿದ್ದಾರೆ ಅದೂ ಕೊರೋನಾ ಹೆಸರಲ್ಲಿ ಇಲ್ಲಿಯವರೆಗೂ ರೈತರ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಹೇಳಿದ್ದಾರೆ.
'ಮಾನ ಮರ್ಯಾದೆ ಇದೆಯಾ, ಭಾಷೆ ಕೇಳಿದ್ರೆ ವಾಕರಿಗೆ ಬರ್ತಿದೆ'
ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಅನುಕೂಲವಾಗುವ ಯೋಜನೆ ರೂಪಿಸುವರು ಎನ್ನುವ ಭರವಸೆಯಿತ್ತು, ಆದರೆ ಮುಖ್ಯಮಂತ್ರಿಗಳು ರಾಜ್ಯದ ಮಠ ಮಂದಿರಗಳಿಗೆ ಬಜೆಟ್ ಮಂಡನೆ ಬಳಿಕವು ಅನುದಾನ ನೀಡಿದ್ದಾರೆ. ಜಿರ್ಣೋದ್ದಾರ ಮತ್ತು ಮೂಲ ಸವಲತ್ತು ಕಲ್ಪಿಸುವ ಹೆಸರಿನಲ್ಲಿ ಜಾತಿವಾರು ಮತ ಸೆಳೆಯಲು ಧಾರ್ಮಿಕ ಸಂಸ್ಥೆಗಳಿಗೆ ಕೋಟಿಗಟ್ಟಲೆ ಅನುದಾನ ನೀಡಿದ್ದಾರೆ. ಆದರೆ ಎಲ್ಲಾ ಜಾತಿಯ ಸಮುದಾಯವಿರುವು ರೈತ ಸಮುದಾಯದಲ್ಲಿ ಅದೇ ರೈತ ಸಮುದಾಯವನ್ನು ಮರೆತು ಅವರ ಬಾಳಿನೊಂದಿಗೆ ಚಲ್ಲಾಟವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಮುಂದಾದರೂ ಸರ್ಕಾರ ಎಚ್ಚೆತ್ತುಕೊಂಡು ಮಾರ್ಚ್ ತಿಂಗಳ ಒಳಗಾಗಿ ರೈತರ ಖಾತೆಗೆ ಪರಿಹಾರದ ದುಡ್ಡು ಜಮಾ ಮಾಡಬೇಕೆಂದು ಒತ್ತಾಯಿಸಿದ್ದಾರೆ.