Asianet Suvarna News Asianet Suvarna News

ವಿಜಯಪುರ: ಕಲಾವಿದರುಗಳ ಕುಂಚದಲ್ಲಿ ಅನಾವರಣಗೊಂಡ ಸಿದ್ದೇಶ್ವರ ಸ್ವಾಮೀಜಿ

ಈ ಶತಮಾನದ ಸಂತ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮಿಗಳಿಗೆ ಎರಡು ದಿನಗಳ ಕಾಲ ಕುಂಚ ಬಣ್ಣಗಳ ಮೂಲಕ ತಮ್ಮ ಚಿತ್ರಕಲಾಕೃತಿಗಳಲ್ಲಿ ಶ್ರೀಗಳ ಹಲವಾರು ಭಾವನೆಗಳನ್ನು ಚಿತ್ರಿಸುವ ಮೂಲಕ ಚಿತ್ರ ನಮನ ಸಲ್ಲಿಸಿದ ಚಿತ್ರಕಲಾವಿದರು.

Siddeshwara Swamiji in the Artist's Brushes in Vijayapura grg
Author
First Published Jan 18, 2023, 9:00 PM IST

ವಿಜಯಪುರ(ಜ.18):  ವಿಜಯಪುರದ ಜ್ಞಾನಯೋಗಾಶ್ರಮದ ನಡೆದಾಡುವ ದೇವರು ಈ ಶತಮಾನದ ಸಂತ ಪರಮ ಪೂಜ್ಯ ಸಿದ್ದೇಶ್ವರ ಸ್ವಾಮಿಗಳಿಗೆ ಚಿತ್ರಕಲಾವಿದರು ಎರಡು ದಿನಗಳ ಕಾಲ ಕುಂಚ ಬಣ್ಣಗಳ ಮೂಲಕ ತಮ್ಮ ಚಿತ್ರಕಲಾಕೃತಿಗಳಲ್ಲಿ ಶ್ರೀಗಳ ಹಲವಾರು ಭಾವನೆಗಳನ್ನು ಚಿತ್ರಿಸುವ ಮೂಲಕ ಚಿತ್ರ ನಮನ ಸಲ್ಲಿಸಿದರು.

ನಂತರ ಶಿಬಿರದಲ್ಲಿ ರಚಿಸಿದ ಕಲಾಕೃತಿಗಳ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ವೀಕ್ಷಿಸಿ ಇಡಿ ಮನಕುಲಕ್ಕೆ ಮಾದರಿಯಾದ ಪರಮಪೂಜ್ಯರ ಭಾವನೆಗಳು ಅವರ ಹಲವಾರು ಭಂಗಿಗಳು ಶ್ರೀಗಳು ನೀಡುತಿದ್ದ ಪ್ರವಚನಗಳ ವಿಷಯಗಳ ಕುರಿತು ಕಲಾವಿದರು ತಮ್ಮ ಚಿತ್ರಕಲೆಯ ಮಾಧ್ಯಮದ ಮೂಲಕ ಪೂಜ್ಯರಿಗೆ ನಿಜವಾದ ನಮನ ಸಲಿಸಿದ್ದಾರೆ. ಶ್ರೀಗಳು ಇದೇ ಪರಿಸರದಲ್ಲಿದ್ದು, ಇವೆಲ್ಲವು ಗಮನಿಸುತಿದ್ದಾರೆ. ಶ್ರೀಗಳಿಗೆ ಕಲಾವಿದರ ಮೇಲೆ ವಿಶೇಷ ಆಸಕ್ತಿ ಕಲಾವಿದರ ಮತ್ತು ಸಾಮಾನ್ಯ ಜನರ ನಡುವಿರುವ ಭಾವನೆಗಳ ಕುರಿತು ಬಹಳ ವಿಶೇಷವಾದ ರಸಅನುಭವಗಳನ್ನು ಎಲ್ಲರಿಗೂ ಅರ್ಥವಾಗುವ ಹಾಗೆ ತಮ್ಮ ಪ್ರವಚನಗಳ ಮೂಲಕ ತಿಳಿಸುತ್ತಿದ್ದರೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಗಮ್ಮಾಯಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆದಿದ್ದ ಸಿದ್ದೇಶ್ವರ ಶ್ರೀಗಳು

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಸಿದ್ದೇಶ್ವರ ಶ್ರೀಗಳ ಕಲಾಕೃತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜ್ಞಾನಯೋಗಾಶ್ರಮದ ಪೂಜ್ಯ ಪ್ರಜ್ಞಾನಂದ ಶ್ರೀಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ, ಕಲಾವಿದರಾದ ಪಿ.ಎಸ್‌.ಕಡೇಮನಿ, ವಿದ್ಯಾಧರ ಸಾಲಿ, ರಮೇಶ ಚವ್ಹಾಣ, ಮಂಜುನಾಥ ಮಾನೆ ಮುಂತಾದವರು ಮಾತನಾಡಿದರು.

ಮಂಗಳವಾರ ಬೆಳಗ್ಗೆ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ ಉಡುಪಿಯ ಪೇಜಾವರ ಶ್ರೀಗಳು ಪ್ರಣವ ಮಂಟಪಕ್ಕೆ ಭೇಟಿ ನೀಡಿ ನಂತರ ಕಲಾಪ್ರದರ್ಶನ ವೀಕ್ಷಿಸಿ, ಕಲಾವಿದರು ಪೂಜ್ಯ ಶ್ರೀಗಳಿಗೆ ಕಲಾಕೃತಿಗಳ ಮೂಲಕ ಯೋಗ್ಯ ರೀತಿಯಲ್ಲಿ ಗೌರವ ಪೂರ್ವಕ ನಮನಗಳನ್ನು ಸಲ್ಲಿಸಿದ್ದಾರೆ ಎಂದು ತಮ್ಮ ಅಭಿಮಾನದ ಮಾತುಗಳನ್ನಾಡಿದರು. ಆಶ್ರಮದ ಅಧ್ಯಕ್ಷ ಗುರುಗಳಾದ ಬಸವಲಿಂಗ ಸ್ವಾಮಿಗಳು ಉಪಸ್ಥಿತರಿದ್ದರು.

ಕಲಾಪ್ರದರ್ಶನದಲ್ಲಿ ಪಿ.ಎಸ್‌.ಕಡೇಮನಿ, ರಮೇಶ ಚವ್ಹಾಣ, ವಿದ್ಯಾಧರ ಸಾಲಿ, ವಿ.ವಿ.ಹಿರೇಮಠ, ಬಸವರಾಜ ಕಮಾಜಿ, ಮಂಜುನಾಥ ಮಾನೆ, ಡಾ. ಶಶಿಕಲಾ ಹೂಗಾರ, ಲಿಂಗರಾಜ ಕಾಚಾಪುರ, ಸುಜಾತಾ ಮೊಗಲಿ, ಶಿವಾನಂದ ಅಥಣಿ, ಮಹಾದೇವಿ ಕೊಪ್ಪದ, ಆನಂದ ಝಂಡೆ, ಶ್ರೀಕಾಂತ ರಜಪೂತ, ಶಿವಣ್ಣ ಗೊಳಸಂಗಿ, ಜಿ. ಸಿ. ಸಬರದ, ಶ್ರೀಶೈಲ ಹೂಗಾರ, ರಾಜಕುಮಾರ ಮ್ಯಾಗೇರಿ, ಮೀನಾಕ್ಷಿ. ಕುಂಬಾರ, ವಿಶ್ವನಾಥ ಹಂಡಿ, ಕೃಷ್ಣಾ ಝಿಂಗಾಡೆ, ರಾಘವೇಂದ್ರ ಪಾಟೀಲ, ಶಬ್ಬಿರ ನದಾಫ್‌, ದಾಕ್ಷಾಯಣಿ ಇಮನಾದ, ಧನಲಕ್ಷ್ಮಿ ದೊಡ್ಡಮನಿ, ತುಕಾರಾಮ ಬೇನೂರ, ಉದೇಶ ಗುಜರಿ, ವಿನಾಯಕ ಚಿಕ್ಕೋಡಿ, ಪ್ರಕಾಶ ಹೋಳಿನ, ವಿಶ್ವನಾಥ ಅಗಸರ, ಹಾಜಮಾ ಹುದ್ದಾರ, ಅಕ್ಷಯಕುಮಾರ ಪಾವನ, ಖಾಜಪ್ಪ ಸಿಂಗ, ಸಚಿನ್‌ ಚವ್ಹಾಣ, ಗೋಪಾಲ ಪವಾರ, ಸಚಿನ ಮನಗೂಳಿ, ಜಯ ಸಲ್ಯಾನ್‌, ಗಿ.ಬಿ. ಅಗ್ನಿ, ಬಿ.ಎನ್‌. ಪಾಟೀಲ್‌, ಗಂಗಾಧರ ಮಾಯಾಚಾರಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದರು.

Follow Us:
Download App:
  • android
  • ios