ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಗುರುವಂದನೆ: 4 ಸಾವಿರ ಮಹಿಳೆಯರಿಂದ ಬೃಹತ್ ಶೋಭಾಯಾತ್ರೆ!
ತಾವು ಬದುಕಿದ್ದಾಗ ನಡೆದಾಡುವ ದೇವರು, ಜ್ಞಾನಯೋಗಿ ಎಂದು ಕರೆಯಿಸಿಕೊಂಡ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿ ವರ್ಷವಾಗುತ್ತ ಬಂದಿದೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಡಿ.28): ತಾವು ಬದುಕಿದ್ದಾಗ ನಡೆದಾಡುವ ದೇವರು, ಜ್ಞಾನಯೋಗಿ ಎಂದು ಕರೆಯಿಸಿಕೊಂಡ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ನಮ್ಮನ್ನೆಲ್ಲ ಅಗಲಿ ವರ್ಷವಾಗುತ್ತ ಬಂದಿದೆ. ಈ ಹಿನ್ನೆಲೆ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳ ಗುರುವಂದನೆ ಕಾರ್ಯಕ್ರಮ ನಡೆಯುತ್ತಿದೆ. ನಿತ್ಯವು ಗೋಷ್ಠಿ, ಆಧ್ಯಾತ್ಮ ಚಟುವಟಿಕೆಗಳಿಂದ ಜ್ಞಾನಯೋಗಾಶ್ರಮ ನಳನಳಿಸುತ್ತಿದೆ.
4 ಸಾವಿರ ಮಹಿಳಾ ಭಕ್ತರಿಂದ ಶೋಭಾ ಯಾತ್ರೆ: ಸಿದ್ದೇಶ್ವರ ಶ್ರೀಗಳು ಬದುಕಿನುದ್ದಕ್ಕು ಆಚರಿಸಿದ ಮಹಾ ವೃತವೆಂದರೆ ಸರಳತೆ. ತಮ್ಮ ಸರಳತೆ, ಅಗಾಧ ಜ್ಞಾನದ ಮೂಲಕ ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರೆಂದೆ ಕರೆಯಿಸಿಕೊಂಡರು. ಈಗ ಸಿದ್ದೇಶ್ವರ ಪ್ರಕೃತಿಯಲ್ಲಿ ಒಂದಾಗಿದ್ದಾರೆ. ಶ್ರೀಗಳು ಎಲ್ಲರನ್ನು, ಎಲ್ಲವನ್ನು ಅಗಲಿ, ಬಯಲಲ್ಲಿ ಬಯಲಾಗಿ ವರ್ಷವಾಗ್ತಿದೆ. ಈ ಹಿನ್ನೆಲೆ ಕಳೆದ 5 ದಿನಗಳಿಂದ ಆಶ್ರಮದಲ್ಲಿ ಆಧ್ಯಾತ್ಮೀಕ ಚಟುವಟಿಕೆಗಳು ಮೇಳೈಸಿವೆ. ಈ ನಡುವೆ 5ನೇ ದಿನವಾದ ಇಂದು ಅಪಾರ ಸಂಖ್ಯೆಯಲ್ಲಿ ಮಹಿಳಾ ಶೋಭಾಯಾತ್ರೆಯ ಮೂಲಕ ಜ್ಞಾನಯೋಗಾಶ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.
ಸಿಎಂ ಸಿದ್ದರಾಮಯ್ಯರಿಂದ ಮುಸ್ಲಿಂ ತುಷ್ಟೀಕರಣ: ಎಂ.ಪಿ.ರೇಣುಕಾಚಾರ್ಯ ಆರೋಪ
ತಲೆಯ ಮೇಲೆ ಶ್ರೀಗಳ ಕೃತಿಗಳನ್ನಿಟ್ಟು ಮೆರವಣಿಗೆ: ಅಥಣಿಯ ಮುರುಘೇಂದ್ರ ಮಹಾಸ್ವಾಮೀಗಳು ಯೋಗಿಗಳು, ಸಿದ್ದಗಂಗಾ ಮಠದ ಸಿದ್ದಗಂಗಾಶ್ರೀಗಳು ದಾಸೋಹಿಗಳು, ಹಾಗೇಯೆ ವಿಜಯಪುರದ ಸಿದ್ದೇಶ್ವರ ಶ್ರೀಗಳು ಜ್ಞಾನಯೋಗಿಗಳು. ತಮ್ಮ ಬದುಕಿನುದ್ದಕ್ಕು ಸರಳತೆಯ ಜೊತೆಗೆ ಜ್ಞಾನ ಭಂಡಾರವನ್ನೆ ತಮ್ಮ ಮಸ್ತಕದಲ್ಲಿಟ್ಟುಕೊಂಡು ಜನರಿಗೆ ಬೋಧಿಸಿದರು. ಜ್ಞಾನಯೋಗಿ ಸಿದ್ದೇಶ್ವರ ಅನೇಕ ಕೃತಿಗಳನ್ನ ರಚಿಸಿದ್ದು, ಭಕ್ತರು ಪೂಜ್ಯ ಭಾವಗಳಿಂದ ಆ ಕೃತಿಗಳನ್ನ ಓದುವುದು ಸೋಜಿಗವೇ ಸರಿ. ಸಿದ್ದೇಶ್ವರ ಶ್ರೀಗಳು ಬರೆದ ಕೃತಿಗಳನ್ನ ಭಕ್ತರು ತಲೆಯ ಮೇಲಿಟ್ಟುಕೊಂಡು ಶೋಭಾ ಯಾತ್ರೆಯಲ್ಲಿ ಮೆರವಣಿಗೆ ಮಾಡಿದ್ರು. ಕೆಂಪು ವಸ್ತ್ರದಲ್ಲಿ ಕೃತಿಗಳನ್ನ ಕಟ್ಟಿಕೊಂಡು ತಲೆಯ ಮೇಲೆ ಹೊತ್ತು ನಡೆದುಕೊಂಡೆ ಆಶ್ರಮಕ್ಕೆ ಆಗಮಿಸಿದ್ರು.
ವೃದ್ದರು, ಮಕ್ಕಳು ಶೋಭಾಯಾತ್ರೆಯಲ್ಲಿ ಭಾಗಿ: ವಿಜಯಪುರ ನಗರ, ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಮಹಿಳೆಯರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡರು, ಮಕ್ಕಳು-ವೃದ್ದರು-ಮಹಿಳೆಯರು ತಲೆಯ ಮೇಲೆ ಶ್ರೀಗಳ ಕೃತಿಗಳನ್ನ ಹೊತ್ತು ಬರುತ್ತಿದ್ದರೇ ನೋಡುಗರು ಬೆರಗಾಗಿ ನೋಡುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನು ದಾರಿಯುದ್ದಕ್ಕು ಜನರು ರಸ್ತೆಗಳ ಮೇಲೆ ರಂಗೋಲಿ ಬಿಡಿಸಿ, ಹೂಗಳನ್ನ ಹಾಕಿ ಶೋಭಾಯಾತ್ರೆಯಲ್ಲಿ ಬಂದ ಭಕ್ತರನ್ನ ಸ್ವಾಗತಿಸಿದ್ದು ಇನ್ನೂ ವಿಶೇಷವಾಗಿತ್ತು..
ತಾಂಡಾಗಳಿಂದಲೂ ಬಂದ ಭಕ್ತರು, ಸ್ವಯಂ ಸೇವಕರಿಂದ ನೆರವು: ವಿಶೇಷ ಅಂದ್ರೆ ವಿಜಯಪುರ ಸುತ್ತ ಮುತ್ತಲು ಇರುವ ಬಂಜಾರಾ ತಾಂಡಾಗಳಿಂದಲು ಭಕ್ತರು ಸಾಗರೋಪಾದಿಯಲ್ಲಿ ಆಗಮಿಸಿದ್ರು. ವಾಹನಗಳಲ್ಲಿ ಜ್ಞಾನಯೋಗಾಶ್ರಮದ ಗೀತೆಗಳು, ಸಿದ್ದೇಶ್ವರ ಶ್ರೀಗಳ ಭಕ್ತಿಗೀತೆಗಳನ್ನ ಹಾಕಿಕೊಂಡು ಭಕ್ತರು ತಂಡೋಪ ತಂಡವಾಗಿ ಬಂದರು. ದಾರಿಯುದ್ದಕ್ಕು ಸ್ವಯಂ ಸೇವಕರು ಭಕ್ತರಿಗೆ ನೀರು, ಅಗತ್ಯ ಸೇವೆಗಳನ್ನ ನೀಡಿದ್ದು ಸಹ ಗಮನ ಸೆಳೆಯಿತು. ಸ್ಕೌಟ್ ಆಂಡ್ ಗೈಡ್ಸ್, ಎನ್ ಸಿ ಸಿ ಮಕ್ಕಳು ಆಗಮಿಸಿ ಶಿಸ್ತಿನಿಂದ ಶೋಭಾಯಾತ್ರೆ ಆಶ್ರಮ ತಲುಪುವಂತೆ ನೋಡಿಕೊಂಡರು..!
ನಾನು ರೈತರ ವಿರೋಧವಾಗಿ ಯಾವುದೇ ಹೇಳಿಕೆಯನ್ನೂ ನೀಡಿಲ್ಲ: ಶಿವಾನಂದ ಪಾಟೀಲ
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ, ಮಹಿಳಾ ಗೋಷ್ಠಿಯಲ್ಲಿ ಭಾಗಿ: ಇನ್ನೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಶ್ರಮದಲ್ಲಿ ನಡೆದ ೫ನೇ ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಪಾಲ್ಗೊಂಡರು. ಮಹಿಳಾ ಸಬಲೀಕರಣ ವಿಷಯವಾಗಿ ನಡೆದ ಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ರು. ಮಹಿಳಾ ಶಕ್ತಿ, ಸಿದ್ದೇಶ್ವರ ಶ್ರೀಗಳ ಆಧ್ಯಾತ್ಮ ಸಾಧನಾ ಶಕ್ತಿಯ ಬಗ್ಗೆ ವಿಚಾರಗಳನ್ನ ಹಂಚಿಕೊಂಡರು, ಇದೆ ಗೋಷ್ಠಿಯಲ್ಲಿ ವೀಣಾ ಬನ್ನಂಜೆ ಸಹ ಪಾಲ್ಗೊಂಡು ಮಹಿಳೆಯರನ್ನ ಉದ್ದೇಶಿಸಿ ಮಾತನಾಡಿದ್ರು.