ಬಸವಕಲ್ಯಾಣ (ಏ.08): ರಾಜ್ಯದಲ್ಲಿ ಮೂರು ಕ್ಷೇತ್ರಗಳಲ್ಲಿ ಉಪ ಚುನಾವಣೆ ರಂಗು ಜೋರಾಗಿದೆ. ಚುನಾವಣೆ ಹಿನ್ನೆಲೆ  ಎಲ್ಲಾ ಪಕ್ಷಗಳಲ್ಲಿಯೂ ಪ್ರಚಾರದ ಅಬ್ಬರ ಜೋರಾಗಿದ್ದು, ತಮ್ಮದೇ ಗೆಲುವಿನ ವಿಶ್ವಾದಲ್ಲಿದ್ದಾರೆ. 

ಬಸವಕಲ್ಯಾಣದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ  ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ಮತ್ತೆ ಸಿದ್ದರಾಮಯ್ಯ ರಾಜ್ಯದಲ್ಲಿ ಸಿಎಂ ಪಟ್ಟಕ್ಕೇರುವ ಭವಿಷ್ಯ ನುಡಿದಿದ್ದಾರೆ. 

ಮುಂದಿನ ಚುನಾವಣೆಯಲ್ಲಿ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸ್ಪಷ್ಟಬಹುಮತದೊಂದಿಗೆ ಬರಲಿದೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಜಮೀರ್‌ ಅಹ್ಮದ್‌ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಗುರು-ಶಿಷ್ಯರ ಕಾಳಗ: ಜಮೀರ್ ಅಹ್ಮದ್ ಖಾನ್‌ಗೆ ಸವಾಲು ಹಾಕಿದ ಕುಮಾರಸ್ವಾಮಿ! .

ಎಚ್‌ಡಿಕೆ ವಿರುದ್ಧ ಗಂಭೀರ ಆರೋಪ :   ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿ ಗೆಲ್ಲೋ ಕ್ಷೇತ್ರನಾ ಇದು. ಬಿಜೆಪಿ ಬಳಿ .10 ಕೋಟಿ ಪಡೆದು ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್‌ ನೀಡಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಜೆಡಿಎಸ್‌ ಗೆಲುವಿಗಾಗಿ ಹೋರಾಡುತ್ತಿಲ್ಲ, ಬದಲಾಗಿ ಬಿಜೆಪಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಧಮ್‌ ಇದ್ರೆ ಈ ವಿಚಾರವಾಗಿ ಅವರು ನನ್ನ ಜೊತೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಸವಾಲೆಸೆದಿದ್ದಾರೆ.

 ಲಿಂಗಾಯತರೇ ಬಹುಸಂಖ್ಯಾತರಿರುವ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರ ಗೆಲುವು ಸಾಧ್ಯವೇ? ಬೆಳಗಾವಿ, ಮಸ್ಕಿಯಲ್ಲಿ ಅಭ್ಯರ್ಥಿ ಹಾಕದವರು ಬಸವಕಲ್ಯಾಣಕ್ಕೆ ಏಕೆ ಹಾಕಿದ್ರು? ನಾನೂ ಇಲ್ಲೇ ಇದ್ದೇನೆ, ಕುಮಾರಸ್ವಾಮಿ ಅವರೂ ಇಲ್ಲೇ ಇದ್ದಾರೆ. ಎಲ್ಲರ ಮುಂದೆ ಬಹಿರಂಗ ಚರ್ಚೆಗೆ ಬರಲಿ ನೋಡೋಣ ಎಂದು ಸವಾಲು ಹಾಕಿದರು.