ಬೆಳಗಾವಿ (ಅ.20): ಬಾದಾಮಿ ಕ್ಷೇತ್ರದ ಜನರ ಅಹವಾಲು ಸ್ವೀಕರಿಸಲು ಆಗಮಿಸಿದ ಸಿದ್ದರಾಮಯ್ಯ ಇನ್ಸುಲಿನ್‌ ಮರೆತು ಬಂದಿದ್ದ ಹಿನ್ನೆಲೆಯಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಒಂದೂವರೆ ಗಂಟೆ ಕಾಯ್ದು ಕುಳಿತ ಪ್ರಸಂಗ ನಡೆಯಿತು.

ಕಂದಾಯ ಸಚಿವ ಆರ್‌.ಅಶೋಕ ಜೊತೆ ಒಂದೇ ವಿಮಾನದಲ್ಲಿ ಬಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಇನ್ಸುಲಿನ್‌ ಮರೆತು ಬಂದಿದ್ದರಿಂದ ಅದನ್ನು ತರುವವರೆಗೂ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಯಿತು. 

ನಂತರ ಮಾಜಿ ಶಾಸಕ ಅಶೋಕ ಪಟ್ಟಣ ಕಾರು ಚಾಲಕ ಇನ್ಸುಲಿನ್‌ ತಂದುಕೊಟ್ಟನಂತರ ಸಿದ್ದರಾಮಯ್ಯ ಅಲ್ಲಿಂದ ಹೊರಟರು.

'ಯಡಿಯೂರಪ್ಪನವರನ್ನು ಕೆಳಗಿಳಿಸೋ ಬಗ್ಗೆ ಚಚೆ೯ ನಡೀತಾ ಇರೋದು ನಿಜ' .

ಈ ವೇಳೆ ‘ಹೌ ಆರ್‌ ಯು ಯಂಗ್‌, ಎವರಿಬಡಿ, ನಾನು ಆರಾಮವಾಗಿಯೇ ಇದ್ದೇನೆ. ನಾನು ಡಯಾಬಿಟಿಸ್‌ಗೆ ಇನ್ಸುಲಿನ್‌ ತೆಗೆದುಕೊಳ್ಳಬೇಕಿತ್ತು. ಅದನ್ನು ಮನೆಯಲ್ಲಿ ತೆಗೆದುಕೊಳ್ಳಲಿಲ್ಲ. ಅದಕ್ಕೆ ಇಲ್ಲಿ ತರಸೋಕೆ ಕಳಿಸಿದ್ದೆ. ಅವರು ತಂದುಕೊಟ್ಟರು. ಪೆನ್ಸಿಲ್ಲೇ ಕೊಟ್ಟಿಲ್ಲ’ ಎಂದು ಚಟಾಕಿ ಹಾರಿಸಿದರು.