Asianet Suvarna News Asianet Suvarna News

ಸಿದ್ದು ಗೆಲುವು ಸುಲಭವಿಲ್ಲ : ಸಿಎಂ ಅಭ್ಯರ್ಥಿ ಎಂದು ಘೋಷಿಸಲಿ - ಸುಧಾಕರ್

ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಅವರ ಗೆಲುವು ಅತ್ಯಂತ ಕಠಿಣವಾಗಿರುತ್ತದೆಯೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

Siddaramaiah  victory is not easy declare  as the CM candidate  Sudhakar snr
Author
First Published Nov 16, 2022, 12:29 PM IST

 ಚಿಕ್ಕಬಳ್ಳಾಪುರ (ನ.16):  ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಅವರ ಗೆಲುವು ಅತ್ಯಂತ ಕಠಿಣವಾಗಿರುತ್ತದೆಯೆಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಹೇಳಿದರು.

ನಗರದಲ್ಲಿ ಮಂಗಳವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ (Siddaramaiah)  ಮಾಜಿ ಮುಖ್ಯಮಂತ್ರಿಗಳು, ಅವರು ಎಲ್ಲಿ ಬೇಕಾದರೂ ಚುನಾವಣೆಗೆ (Election)  ನಿಲ್ಲಬಹುದು. ಆದರೆ ನನಗೆ ಇರುವ ರಾಜಕೀಯ ಅನುಭವನದಲ್ಲಿ ಹೇಳುವುದಾದರೆ ಅವರಿಗೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಒಳ್ಳೆಯದು ಆಗುವುದಿಲ್ಲ. ಅವರಿಗೆ ಗೆಲುವು ಅತ್ಯಂತ ಕಠಿಣವಾಗಿರುತ್ತದೆ ಎಂದರು.

ಸಿದ್ದರಾಮಯ್ಯ ಸ್ಪರ್ಧೆಯಿಂದ ಬಿಜೆಪಿಗೆ ರಾಜಕೀಯವಾಗಿ ಏನಾದರೂ ನಷ್ಟಆಗಬಹುದಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಾಗಿಯೆ ನಿಲ್ಲುವುದರಿಂದ ಕೋಲಾರದಲ್ಲಿ ಏನಾಗುತ್ತದೆಯೆಂದು ನೀವೇ ಕಾದು ನೋಡಿ ಎಂದರು.

ಹೈಕಮಾಂಡ್‌ ಘೋಷಣೆ ಮಾಡಲಿ

ನಾನು ಮುಖ್ಯಮಂತ್ರಿ ಆಗಬೇಕಾದರೆ ಕಾಂಗ್ರೆಸ್‌ಗೆ ಮತ ಹಾಕಬೇಕೆಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ .ಸುಧಾಕರ್‌ ಅವರು, ಸಿದ್ದರಾಮಯ್ಯ ಸಿಎಂ ಅಭ್ಯರ್ಥಿಯೆಂದು ಕಾಂಗ್ರೆಸ್‌ ಹೈಕಮಾಂಡ್‌ ಅಥವಾ ಮಲ್ಲಿಕಾರ್ಜುನ ಖರ್ಗೆ ಘೋಷಣೆ ಮಾಡಲಿ ಎಂದು ಸವಾಲು ಹಾಕಿದರು. ಯಾರೂ ಸ್ವಯಂ ಘೋಷಣೆ ಮಾಡಿಕೊಳ್ಳಕ್ಕೆ ಆಗುವುದಿಲ್ಲ. ಇವತ್ತು ನಮ್ಮ ಪಕ್ಷದಲ್ಲೂ ಅಷ್ಟೇ ಯಾರನ್ನೇ ಆಗಲಿ ನಮ್ಮ ಪಕ್ಷದ ಹೈಕಮಾಂಡ್‌ ಘೋಷಣೆ ಮಾಡಿದರೆ ಮಾತ್ರ ಅವರು ಸಿಎಂ ಅಭ್ಯರ್ಥಿ ಆಗುತ್ತಾರೆಂದರು. ಪಕ್ಷದ ಹೈಕಮಾಂಡ್‌ ಘೋಷಣೆ ಮಾಡುವವರೆಗೂ ಸ್ವಯಂ ಘೋಷಣೆ ಮಾಡಿಕೊಂಡರೆ ಅದಕ್ಕೆ ಮಾನ್ಯತೆ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಹೇಳಿಕೆಗೆ ಸಚಿವ ಸುಧಾಕರ್‌ ಚಿಕ್ಕಬಳ್ಳಾಪುರದಲ್ಲಿ ಟಾಂಗ್‌ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಬಿಎಂಟಿಸಿ ಉಪಾಧ್ಯಕ್ಷ ಕೆ.ವಿ.ನವೀನ್‌ ಕಿರಣ್‌, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳಕುಂಟೆ ಕೃಷ್ಣಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಪಿಕಾರ್ಡ್‌ ಅಧ್ಯಕ್ಷ ಪಿ.ನಾಗೇಶ್‌, ಎಪಿಎಂಸಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ನಗರಸಭೆ ಅಧ್ಯಕ್ಷ ಡಿ.ಎಸ್‌.ಆನಂದರೆಡ್ಡಿ, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್‌, ಒಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಮತ್ತಿತರರು ಇದ್ದರು.

 ಸಿದ್ದರಾಮಯ್ಯ ವರುಣ ಕ್ಷೇತ್ರದಲ್ಲೇ ಕಣಕ್ಕಿಳಿಯುವುದು ಸೂಕ್ತ

 ಮೈಸೂರು :  ಮುಂದಿನ ಚುನಾವಣೆಯೇ ಸಿದ್ದರಾಮಯ್ಯ ಅವರಿಗೆ ಕೊನೆಯಾಗಿರುವ ಕಾರಣ ವರುಣ ಕ್ಷೇತ್ರದಲ್ಲೇ ಕಣಕ್ಕಿಳಿಯುವುದು ಸೂಕ್ತ. ಯಾರೋ 4- 5 ಜನರು ಹೊಗಳಿದಾಕ್ಷಣ ಕೋಲಾರದಲ್ಲಿ ಸ್ಪರ್ಧಿಸಿ ಸೋಲುವುದು ಬೇಡ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸಲಹೆ ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡದೆ ವರುಣ ಕ್ಷೇತ್ರದಲ್ಲಿ ನಿಲ್ಲುವುದು ಉತ್ತಮ. ಯಾರೋ 4- 5 ಸ್ನೇಹಿತರು ಹೊಗಳಿ ನಿಲ್ಲು ಅಂದಾಕ್ಷಣ ಸ್ಪರ್ಧಿಸಿದರೆ ಸೋಲು ಗ್ಯಾರಂಟಿ. ರಾಜಕೀಯದ ಕೊನೆ ಘಟ್ಟದಲ್ಲಿ ಸೋಲಿನಿಂದ ನಿವೃತ್ತಿಯಾಗುವುದು ಬೇಡ ಎಂದು ಎಚ್ಚರಿಸಿದರು.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಳೆದ ಬಾರಿ ಜನರು ಸೋಲಿಸಿದರು. ಬಾದಾಮಿ ಕ್ಷೇತ್ರದಲ್ಲಿ ಹಗಲು- ರಾತ್ರಿ ಎನ್ನದೆ ಓಡಾಡಿ ಕೆಲಸ ಮಾಡಿದ್ದರಿಂದ ಅತ್ಯಲ್ಪ ಮತಗಳ ಅಂತರದಿಂದ ಜಯ ದೊರೆಯಿತು. ಹೀಗಾಗಿ, ಕೋಲಾರದಲ್ಲಿ ಸ್ಪರ್ಧೆ ಮಾಡಬಾರದೆಂದು ಸಲಹೆ ಕೊಡುವೆ ಎಂದರು.

ಜೆಡಿಎಸ್‌ ಪಟ್ಟಿಶೀಘ್ರ ಬಿಡುಗಡೆ:

ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತೇವೆ. ಜೆಡಿಎಸ್‌ ಟಿಕೆಟ್‌ ಸಿಗದಿದ್ದರಿಂದ ಪಕ್ಷ ಬಿಡುತ್ತಿದ್ದಾರೆ. ಒಂದೊಂದು ಕ್ಷೇತ್ರದಲ್ಲಿ 3- 4 ಮಂದಿ ಟಿಕೆಟ್‌ ಆಕಾಂಕ್ಷಿಗಳು ಇದ್ದಾರೆ. ಕೆಲವು ಮುಖಂಡರು ಹೋದಾಕ್ಷಣ ಪಕ್ಷಕ್ಕೆ ಯಾವ ತೊಂದರೆ ಇಲ್ಲ ಎಂದರು.

ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಪಕ್ಷವನ್ನೇ ಬಿಟ್ಟರೆಂದು ಹೇಳಲಾಗಿತ್ತು. ಈಗ ಅವರು ಹೋದರೆ ನೀವೇ ಹೇಳಿ? ಜಿಟಿಡಿ ಮತ್ತು ಅವರ ಪುತ್ರ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.

ಮುಂದಿನ ಚುನಾವಣೆಯಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. 6 ತಿಂಗಳಲ್ಲಿ ಸಿಎಂ ಆಗಿ ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರು ರಾಜ್ಯದಲ್ಲಿ ಪ್ರವಾಸ ಆರಂಭಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್‌ ವೈಖರಿಯಿಂದ ಬೇಸತ್ತಿರುವ ಜನರು ಜೆಡಿಎಸ್‌ ಬೆಂಬಲಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌ ಮುಕ್ತ ಮೈಸೂರು

ಮುಂದಿನ ಚುನಾವಣೆಯಲ್ಲಿ ಮೈಸೂರು ಕಾಂಗ್ರೆಸ್‌ ಮುಕ್ತವಾಗಲಿದೆ. ಕಳೆದ ಬಾರಿ ಗೆದ್ದಿರುವ ಸ್ಥಾನಗಳನ್ನು ಈ ಬಾರಿ ಕಳೆದುಕೊಳ್ಳಲಿದೆ. ಕಾಂಗ್ರೆಸ್‌ ಒಡೆದ ಮನೆಯಾಗಿದ್ದು, ಅದನ್ನು ಸರಿಪಡಿಸಲಾಗದ ಮಟ್ಟಿಗೆ ಬಂದಿದೆ. ಎಚ್‌.ಡಿ. ದೇವೇಗೌಡರಿಗೆ ಕೊಟ್ಟಮಾತಿನಂತೆ ಜೆಡಿಎಸ್‌ ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿದ್ದೇನೆ. ವಿಧಾನಪರಿಷತ್‌, ರಾಜ್ಯಸಭಾ ಸ್ಥಾನದ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಹೇಳಿದರೂ ನಿರಾಕರಿಸಿದ್ದೇನೆ ಎಂದು ಅವರು ತಿಳಿಸಿದರು.

Follow Us:
Download App:
  • android
  • ios