ಹುಣಸೂರು (ಫೆ.20): ಸಿದ್ದರಾಮಯ್ಯ ಅವರೇ ನಮ್ಮ ಮುಂದಿನ ಮುಖ್ಯಮಂತ್ರಿ ಎಂದು ಶಾಸಕ ಜಮೀರ್‌ ಅಹ್ಮದ್‌ ಹೇಳಿದರು. 

ಶುಕ್ರವಾರ ಪಟ್ಟಣದಲ್ಲಿ ನಡೆದ ಕಾಂಗ್ರೆಸ್‌ ಜನಾಧಿಕಾರ ಸಮಾವೇಶದಲ್ಲಿ ಜಮೀರ್‌ ಅವರು, ಭಾವಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳುವ ಮೂಲಕ ಭಾಷಣ ಆರಂಭಿಸಿದರು. 2018ರಲ್ಲಿ ತಪ್ಪು ಮಾಡಿದ್ದೀವಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

ಸಿದ್ದರಾಮಯ್ಯ ಪ್ರಸ್ತಾಪಕ್ಕೆ ಓಕೆ ಎಂದ ರಾಹುಲ್: ಇನ್ಮುಂದೆ ಟಗರು ಆಟ ಶುರು ...

ರಾಜ್ಯದ ಜನರಿಗೆ ಒಳ್ಳೆಯದು ಆಗಬೇಕಾದರೆ ಸಿದ್ದರಾಮಯ್ಯ ಅವರು ಸಿಎಂ ಆಗ್ಬೇಕು. ಸಿದ್ದರಾಮಯ್ಯ ಅವರನ್ನ ಮಾಜಿ ಮುಖ್ಯಮಂತ್ರಿ ಎಂದು ಹೇಳೋಕೆ ಮನಸಾಗ್ತಿಲ್ಲ. ಹೀಗಾಗಿ, ಅವರನ್ನ ಭಾವಿ ಮುಖ್ಯಮಂತ್ರಿ ಎನ್ನುತ್ತೇನೆ ಎಂದು ಹೇಳಿದರು.