ಗೋಹತ್ಯೆ ನಿಷೇಧ: ಸಚಿವ ಅಶೋಕ್‌ಗೆ ಸಿದ್ದರಾಮಯ್ಯ ಟಾಂಗ್‌

ಸರ್ಕಾರಕ್ಕೆ ಬುದ್ದಿ ಇದ್ದಿದ್ದರೆ ಗುರುವಾರವೇ ಕರೆದು ಮಾತನಾಡಬೇಕಿತ್ತು| ನಾನು ಸಹ ಹಿಂದೆ ಸಾರಿಗೆ ಮಿನಿಸ್ಟರ್ ಆಗಿದ್ದೆ.  ಆಗ ಈ ಸಮಸ್ಯೆಗಳಿರಲಿಲ್ಲ| ಈ ಬಗ್ಗೆ ನಾನು ಸಿಎಂ ಹಾಗೂ ಲಕ್ಷ್ಮಣ ಸವದಿ ಜೊತೆ ಮಾತನಾಡುತ್ತೇನೆ| ಸಮಸ್ಯೆ ಬಗಹರೆಸುವಂತೆ ಒತ್ತಾಯಿಸುತ್ತೇನೆ ಎಂದು ಸಾರಿಗೆ ಸಿಬ್ಬಂದಿಗೆ ಭರವಸೆ ನೀಡಿದ ಸಿದ್ದರಾಮಯ್ಯ|  

Siddaramaiah Taunt to Minister R Ashok grg

ಬಾಗಲಕೋಟೆ(ಡಿ.12): ಸಾರಿಗೆ ನೌಕರರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿಯೊಂದಿಗೆ ಈ ಕೂಡಲೇ ಈ ಮಾತನಾಡುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದ ಸಾರಿಗೆ ನೌಕರರ ಮುಷ್ಕರದಲ್ಲಿ  ಪಾಲ್ಗೊಂಡು ಮಾತನಾಡಿದ ಅವರು, ಸರ್ಕಾರಕ್ಕೆ ಬುದ್ದಿ ಇದ್ದಿದ್ದರೆ ಗುರುವಾರವೇ ಕರೆದು ಮಾತನಾಡಬೇಕಿತ್ತು. ನಾನು ಸಹ ಹಿಂದೆ ಸಾರಿಗೆ ಮಿನಿಸ್ಟರ್ ಆಗಿದ್ದೆ.  ಆಗ ಈ ಸಮಸ್ಯೆಗಳಿರಲಿಲ್ಲ. ಈಗ ನೀವು ನಮ್ಮನ್ನ ಸರ್ಕಾರಿ ನೌಕರರೆಂದು ಪರಿಗಣಿಸಿ ಎಂದು ಮನವಿ ಮಾಡುತ್ತಿದ್ದೀರಿ. ಆದ್ರೆ ಸರ್ಕಾರ ಒಪ್ಪುತ್ತಿಲ್ಲ. ಈ ಬಗ್ಗೆ ನಾನು ಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಜೊತೆ ಮಾತನಾಡುತ್ತೇನೆ. ಅಸೆಂಬ್ಲಿ ಇಲ್ಲದೇ ಇರೋದ್ರಿಂದ, ಕೂಡಲೇ ಸಚಿವ ಸವದಿ ಜೊತೆ ಮಾತನಾಡುತ್ತೇನೆ. ಕರೆದು ಕೂತು ಮಾತನಾಡುವಂತೆ ಹೇಳುತ್ತೇನೆ ಎಂದು ಹೇಳಿದ್ದಾರೆ. 

ನೀವು ಮುಷ್ಕರ ಮಾಡಿ ಸರ್ಕಾರಕ್ಕೆ ಬಿಸಿಮುಟ್ಟಿಸಿದ್ದೀರಿ. ಈ ಮುಷ್ಕರ ಬಹಳ ದಿನ ಸಾಗದಿರಲಿ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಸರ್ಕಾರಕ್ಕೆ ಬುದ್ದಿ ಇದ್ದಿದ್ರೆ, ಸಭೆ ಕರೆದು ಸಮಸ್ಯೆ ಬಗೆಹರಿಸಬೇಕಿತ್ತು. ಈ ಬಗ್ಗೆ ಕೂಡಲೇ ಸಚಿವ ಸವದಿ ಜೊತೆ ಮಾತನಾಡಿ ಸಮಸ್ಯೆ ಬಗಹರೆಸುವಂತೆ ಒತ್ತಾಯಿಸುತ್ತೇನೆ ಎಂದು ಸಾರಿಗೆ ಸಿಬ್ಬಂದಿಗೆ  ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. 

ಗ್ರಾಪಂ ಚುನಾವಣೆ ಬಹಿಷ್ಕರಿಸಲು ಈ ಗ್ರಾಮಸ್ಥರ ನಿರ್ಧಾರ: ಏನಿವರ ಬೇಡಿಕೆ..?

ವಯಸ್ಸಾದ ಗೋವುಗಳನ್ನ ಸರ್ಕಾರ ಖರೀದಿಸಲಿ

ನಮ್ಮದು ಗೋ ಹತ್ಯೆ ನಿಷೇಧದಕ್ಕೆ ವಿರೋಧವಿಲ್ಲ. ಈ ಬಗ್ಗೆ ತಜ್ಞರ ಜೊತೆ ಚರ್ಚಿಸಿದ್ದಾರಾ? ಭಾವನಾತ್ಮಕವಾಗಿ ಮಾಡಿದ್ರೆ ಫ್ಯಾಶಿಸಂ ಆಗುತ್ತದೆ. ಆದರೆ ವಯಸ್ಸಾದ ಜಾನುವಾರು ರೈತರು ಇಟ್ಟುಕೊಂಡು ಏನು ಮಾಡಬೇಕು? ಕಾನೂನಿಲ್ಲಿ ಗೋಶಾಲೆಯಲ್ಲಿ ಇರಿಸಬೇಕು, ಅದಕ್ಕೆ ರೈತರು ಹಣ ಕೊಡಬೇಕು ಅಂತಾರೆ.ರೈತರು ಯಾಕೆ ದುಡ್ಡು ಕೊಡಬೇಕು. ಸರ್ಕಾರ ಖರೀದಿಸಲಿ. ಮುದಿಯಾದ ರಾಸುಗಳನ್ನ ರೈತರು ಮಾರಾಟ ಮಾಡುತ್ತಾರೆ. ನಾನೇಕೆ ಮುದಿ ಗೋವುಗಳನ್ನ ನಿಮ್ಮ ಮನೆಗೆ ಕಳಿಸಲಿ, ದುಡ್ಡು ಕೊಟ್ಟು ಮನೆಗೆ ತೆಗದುಕೊಳ್ಳಿ. ರೈತರ ಹತ್ತಿರ ಹೋಗಿ ದುಡ್ಡು ಕೊಟ್ಟು ತೆಗೆದುಕೊ ಎಂದು ಹೇಳುವ ಮೂಲಕ ಸಚಿವ ಆರ್. ಅಶೋಕ್‌ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಗೋಹತ್ಯೆ ನಿಷೇಧ ಕಾಯ್ದೆ ಇದು ಮುಖ್ಯಮಂತ್ರಿಯದ್ದು ಅಲ್ಲ. ಆರ್‌ಎಸ್‌ಎಸ್‌ ಪ್ರೋಗ್ರಾಂ ಅಗಿದೆ. ಆರ್‌ಎಸ್‌ಎಸ್‌ನವರು ಮುಖ್ಯಮಂತ್ರಿಗೆ ಒತ್ತಡ ಹಾಕಿ ಗೋ ಹತ್ಯೆ ನಿಷೇಧ ಮಾಡಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. 
ವಿಧಾನಸೌಧದ ಎದುರು ಗೋ ಮಾತೆ ಪೂಜೆ ಮಾಡಿದ ಬಿಜೆಪಿ ನಾಯಕರ ವಿರುದ್ಧ ಲೇವಡಿ ಮಾಡಿದ ಸಿದ್ದರಾಮಯ್ಯ, ಸಗಣಿ ಎತ್ತೋದು, ಗಂಜಲ ಗೂಡಿಸೋದು, ಬೆರಣಿ ತಟ್ಟೋದು, ಮೇವು ,ಹಾಲು ಹಾಕೋದು ರೈತರು. ಇವರದೇನು ಕೆಲ್ಸವೆಂದು ಬಿಜೆಪಿಯವರ ಗೋ ಮಾತೆಗೆ ಪೂಜೆ ಮಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. 

ಮೊದಲು ಗೋಮಾಂಸ ರಫ್ತು ನಿಲ್ಲಿಸಲಿ. ಗೋಮಾಂಸ ರಫ್ತು ಮಾಡುವವರು ಲಾಲ್, ಕಫೂರ್‌ಗಳು ಇವರೆಲ್ಲಾ ಬಿಜೆಪಿ ಸಪೋರ್ಟರ್ಸ್‌ಗಳಾಗಿದ್ದಾರೆ. ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಮೋದಿ ಅವರು ಬಂದ ಮೇಲೆ ಗೋಮಾಂಸ ರಫ್ತು ಹೆಚ್ಚಾಗಿದೆ ಎಂದು ಹೇಳಿದ್ದಾರೆ. ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಗೋ ರಫ್ತು ಹೆಚ್ಚಾಗಿದೆ ಎಂದು ಸ್ವಾಮೀಜಿ ಹೇಳಿದ್ದಾರೆ. ಇದಕ್ಕೇನು ಹೇಳ್ತಾರೆ ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ. 
 

Latest Videos
Follow Us:
Download App:
  • android
  • ios