Asianet Suvarna News Asianet Suvarna News

ವಿಶ್ವನಾಥ್ ಪೆದ್ದನೋ, ಜಾಣನೋ ಗೊತ್ತಿಲ್ಲ: ಸಿದ್ದು

ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಬಿಜೆಪಿ ಟಿಕೆಟ್‌ ತಪ್ಪಿಸಿದೆ ಎಂದು ಹೇಳುತ್ತಿರುವ ವಿಶ್ವನಾಥ್‌ ಪೆದ್ದನೋ, ಬುದ್ದಿವಂತನೋ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್‌ಗೂ ನನಗೂ ಸಂಬಂಧವಿಲ್ಲ. ನಾನೂ ಕಾಂಗ್ರೆಸ್ಸಿನಲ್ಲಿ ಇದ್ದೇನೆ ಎಂದರು.

Siddaramaiah slams vishwanath for blaming him for loosing mlc ticket
Author
Bangalore, First Published Jun 20, 2020, 12:59 PM IST

ಮೈಸೂರು(ಜೂ.20): ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಬಿಜೆಪಿ ಟಿಕೆಟ್‌ ತಪ್ಪಿಸಿದೆ ಎಂದು ಹೇಳುತ್ತಿರುವ ವಿಶ್ವನಾಥ್‌ ಪೆದ್ದನೋ, ಬುದ್ದಿವಂತನೋ ಗೊತ್ತಿಲ್ಲ. ಬಿಜೆಪಿ ಹೈಕಮಾಂಡ್‌ಗೂ ನನಗೂ ಸಂಬಂಧವಿಲ್ಲ. ನಾನೂ ಕಾಂಗ್ರೆಸ್ಸಿನಲ್ಲಿ ಇದ್ದೇನೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಎದುರು ಮಾತನಾಡಲು ಮುಖ್ಯಮಂತ್ರಿ ಯಡಿಯೂರಪ್ಪಗೆ ಧಮ್‌ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹೇಳುವುದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ತಲೆಯಾಡಿಸುತ್ತಿದ್ದಾರೆ. ಪ್ರಧಾನಿ ಎದುರು ಮಾತನಾಡಲು ಇವರಿಗೆ ಧಮ್‌ ಇಲ್ಲ. ಹದಿನೈದನೇ ಹಣಕಾಸು ಆಯೋಗ ಶಿಫಾರಸು ಮಾಡಿದ .5,049 ಕೋಟಿ ಬಿಡುಗಡೆ ಮಾಡದೆ ಇದ್ದರೂ ಈವರೆಗೂ ಕೇಳಿಲ್ಲ ಎಂದರು.

ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸಿ:

ಕುವೆಂಪು ನಗರದಲ್ಲಿನ ಬಂಕ್‌ನಲ್ಲಿ 25 ರೂ.ಗೆ ಪೆಟ್ರೋಲ್‌ ಮಾರಾಟ ಮಾಡುವ ಮೂಲಕ ಸಿದ್ದರಾಮಯ್ಯ ಅವರು ವಿನೂತನವಾಗಿ ಇಂದನ ದರ ಏರಿಕೆ ಖಂಡಿಸಿ ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಅಬಕಾರಿ ಸುಂಕ ಕೈ ಬಿಡುವ ಮೂಲಕ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಇಳಿಸಬೇಕು. ಕಚ್ಚಾತೈಲ ಪ್ರತಿ ಲೀಟರ್‌ಗೆ 18.60 ರೂ. ಇದೆ.

'ಧಮ್' ಪದ ಬಳಕೆ: ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಈಶ್ವರಪ್ಪ

ಸಂಸ್ಕರಿತ ತೈಲವನ್ನು ಕೇವಲ 30 ರಿಂದ 35 ರೂ.ಗೆ ಮಾರಾಟ ಮಾಡಬಹುದು. ಆದರೆ, ಕೇಂದ್ರ ಸುಂಕ, ರಾಜ್ಯ ಸರ್ಕಾರ ವಿಧಿಸುವ ಮಾರಾಟದ ತೆರಿಗೆಯಿಂದ 79 ರೂ. ಆಗಿದೆ. ಕೇಂದ್ರ ಸರ್ಕಾರ ಅಬಕಾರಿ ಸುಂಕ ಕೈಬಿಡುವ ಮೂಲಕ ತೈಲ ಬೆಲೆ ಇಳಿಸಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಬಂಕ್‌ನಲ್ಲಿ .25 ಪೆಟ್ರೋಲ್‌ ಹಾಕುವ ಮೂಲಕ ವಿನೂತನವಾಗಿ ಪ್ರತಿಭದರು.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

Follow Us:
Download App:
  • android
  • ios