ಲ್ಯಾಂಡ್ ಆರ್ಮಿ ಅಧಿಕಾರಿಗೆ ಸಿದ್ದರಾಮಯ್ಯ ಆವಾಜ್..!
ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೇ ಅಂತ ಹೇಳಿದ್ದೀನಿ, ನಾನು ಅಂತಲ್ಲ| ಮತ್ತೆ ನಾನು ಸಿಎಂ ಆಗೋ ವಿಚಾರವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತೆ| ಮುಂದೆ ಜನ ಮತ್ತು ಹೈಕಮಾಂಡ್, ಎಂಎಲ್ಎಗಳು ಏನು ತೀರ್ಮಾನ ಮಾಡ್ತಾರೆ ಅಂತ ನೋಡೋಣ: ಸಿದ್ದು|
ಬಾಗಲಕೋಟೆ(ಫೆ.11): ಡಾ. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣದ ಕಾಮಗಾರಿಯನ್ನ ಲ್ಯಾಂಡ್ ಆರ್ಮಿಗೆ ಕೊಟ್ಟಿದ್ದೇನೆ. ನಾಳೆನೇ ಕೆಲಸ ಆರಂಭ ಮಾಡಬೇಕು. ಕೆಲಸ ಮಾಡದೇ ಇದ್ರೆ ಲ್ಯಾಂಡ್ ಆರ್ಮಿಯವರನ್ನ ಸುಮ್ಮನೆ ಬಿಡಲ್ಲ ನಾನು ಗೊತ್ತಾಯಿತೇನಯ್ಯ. ನಿನ್ನ ಚರ್ಮ ಸುಲಿದು ಬಿಡ್ತೇನೆ ಆಮೇಲೆ ಹುಷಾರಾಗಿರಬೇಕು ಎಂದು ಲ್ಯಾಂಡ್ ಆರ್ಮಿಅಧಿಕಾರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆವಾಜ್ ಹಾಕಿದ ಪ್ರಸಂಗ ಬಾದಾಮಿ ತಾಲೂಕಿನ ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಇಂದು(ಗುರುವಾರ) ನಡೆದಿದೆ.
ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಿದ ಬಳಿಕ ಮಾತನಾಡಿದ ಅವರು, ಖಾನಾಪುರ ಎಸ್‌ಕೆ ಗ್ರಾಮದಲ್ಲಿ ಸಿಸಿ ರೋಡ್‌ಗೆ ಒಂದು ಕೋಟಿ ರೂ. ಮಂಜೂರಾಗಿದೆ. ನಾನು ಬಂದ ಮೇಲೆ ಅದನ್ನ ಮಂಜೂರು ಮಾಡಿಸಿದ್ದೇನೆ. ಆ ಮೇಲೆ ಗಿರಾಕಿಗಳು ಬಂದು ಬಿಟ್ಟು ನಾನು ಮಾಡಿಸಿದೆ ಅಂದಾರು, ರಾಜಕೀಯದಲ್ಲಿ ನಾನು ಮಾಡಿಸಿದ್ದು ಅಂತ ಕೆಲವರು ಸುಳ್ಳು ಹೇಳ್ತಾರೆ, ಅದನ್ನೆಲ್ಲ ನಂಬಬೇಡಿ. ನಿಮ್ಮೂರಿಗೆ ಸಿಸಿ ರೋಡ್ ನಾನೇ ಮಂಜೂರು ಮಾಡಿಸಿದ್ದು ಎಂದು ಹೇಳಿದ್ದಾರೆ.
ನನ್ನ ಅನೇಕ ಕೆಲಸ ನಿಲ್ಸಿದ್ದಾರೆ, ನನಗೆ ಹೊಟ್ಟೆ ಉರಿತಿದೆ: ಸರ್ಕಾರದ ವಿರುದ್ಧ ಹರಿಹಾಯ್ದ ಸಿದ್ದು
ಮತ್ತೆ ಸಿಎಂ ಆಗುವ ವಿಚಾರದ ಬಗ್ಗೆ ಇದೇ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮತ್ತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತೇ ಅಂತ ಹೇಳಿದ್ದೀನಿ, ನಾನು ಅಂತಲ್ಲ. ಮತ್ತೆ ನಾನು ಸಿಎಂ ಆಗೋ ವಿಚಾರವನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಮುಂದೆ ಜನ ಮತ್ತು ಹೈಕಮಾಂಡ್, ಎಂಎಲ್ಎಗಳು ಏನು ತೀರ್ಮಾನ ಮಾಡ್ತಾರೆ ಅಂತ ನೋಡೋಣ. ನಾನೇ ಚೀಫ್ ಮಿನಿಸ್ಟರ್ ಅಂತ ತಿರುಗಾಡೋಕೆ ಆಗುತ್ತಾ? ಜನ ತೀರ್ಮಾನ ಮಾಡಿ, ಶಾಸಕರು, ಹೈಕಮಾಂಡ್ ತೀರ್ಮಾಣ ಮಾಡೋ ಪ್ರೋಸಸ್ ಇದೆ, ನೋಡೋಣ ಎಂದ ತಿಳಿಸಿದ್ದಾರೆ.
ಬಾದಾಮಿ ಅಭಿವೃದ್ದಿಗೆ ನಾನೇ ಅನುದಾನ ಕೊಟ್ಟಿದ್ದು ಎನ್ನುವ ಎಚ್ಡಿಕೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರನ್ನ ಸಿಎಂ ಮಾಡಿದ್ದ್ಯಾರು? 80 ಜನ ಎಂಎಲ್ಎ ಇಟ್ಕೊಂಡು 37 ಜನ ಎಂಎಲ್ಎ ಇರೋರ್ನಾ ಸಿಎಂ ಮಾಡಿದ್ದಾರು?, ನಾವು ಸಿಎಂ ಮಾಡದೇ ಇದ್ದಿದ್ರೆ ಅನುದಾನ ಎಲ್ಲಿಂದ ಕೊಡ್ತಿದ್ರು? ನಾನು ಎಂಎಲ್ಎ ಅಲ್ವಾ? ನನಗೆ ಹಕ್ಕಿಲ್ವಾ ಗ್ರ್ಯಾಂಟ್ಸ್ ತಗಳ್ಳಕೆ. ಅವರು ಪುಕ್ಕಟ್ಟೆ, ಭಿಕ್ಷೆ ಕೊಟ್ಟಿದ್ದಾರಾ?, ಫಸ್ಟ್ ಅಫಾಲ್ ಅವರನ್ನ ಸಿಎಂ ಮಾಡಿದವರು ನಾವು. ಸಿಎಂ ಆಗಿದ್ದರಿಂದ ನಾನು ಎಂಎಲ್ಎ ಆಗಿದ್ದೇನೆ. ನನಗೆ ಗ್ರ್ಯಾಂಟ್ಸ್ ಕೊಡಲೇಬೇಕು. ಅದು ಸರಿಯಾಗಿ ಕೊಡಲಿಲ್ಲ. ಅಲ್ವಸ್ವಲ್ಪ ಕೊಟ್ಡಿದ್ರು ಎಂದಿದ್ದಾರೆ.