Asianet Suvarna News Asianet Suvarna News

ಮಹಿಳೆ ಅಮಾನಿಸಿದ ಸಿದ್ದರಾಮಯ್ಯ ಬಹಿರಂಗ ಕ್ಷಮೆ ಕೇಳಲಿ: ಶೆಟ್ಟರ್‌

ಸತೀಶ ಜಾರಕಿಹೊಳಿ ಅವರಿಗೆ ಏನು ಅನುಭವ ಇದೆ| ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತದವರು ಲೋಕಸಭೆಯಲ್ಲಿಸ ಪ್ರಶ್ನೆ ಮಾಡಬಲ್ಲರಾ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದ ಸಚಿವ ಜಗದೀಶ್‌ ಶೆಟ್ಟರ್‌| 
 

Siddaramaiah Should be Apologize for Insulted Women Says Jagadish Shettar grg
Author
Bengaluru, First Published Apr 12, 2021, 12:04 PM IST

ಬೆಳಗಾವಿ(ಏ.12): ಅನನುಭವಿ ಮಹಿಳೆ ಲೋಕಸಭೆಗೆ ಹೋಗಿ ಏನು ಮಾಡುತ್ತಾರೆ ಎನ್ನುವ ಮೂಲಕ ಪ್ರತಿಪಕ್ಷ ಮುಖಂಡ ಸಿದ್ದರಾಮಯ್ಯ ರಾಣಿ ಚನ್ನಮ್ಮನ ನಾಡಿನಲ್ಲಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿರುವ ಸಚಿವ ಜಗದೀಶ ಶೆಟ್ಟರ್‌, ಅವರು ಬಹಿರಂಗವಾಗಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿದ್ದಾರೆ. 

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷದ ನಾಯಕ ಮಾತನಾಡುವ ಭರದಲ್ಲಿ ಮಹಿಳೆಯರಿಗೆ ಅಪಮಾನ ಮಾಡುವ ರೀತಿ ಮಾತನಾಡಿದ್ದಾರೆ. ಅನನುಭವಿ ಮಹಿಳೆ ಲೋಕಸಭೆಗೆ ಹೋಗಿ ಏನು ಮಾಡುತ್ತಾರೆ ಎಂದು ರಾಣಿ ಚನ್ನಮ್ಮನ ನಾಡಿನಲ್ಲಿ ಮಾತನಾಡಿದ್ದು, ಮಹಿಳೆಯರಿಗೆ ಅವಮಾನ ಮಾಡಿದ್ದಾರೆ ಎಂದರು. ಇದೇ ವಿಚಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು ಕಿಡಿಕಾರಿದ್ದಾರೆ.

'ಬೈ ಎಲೆಕ್ಷನ್‌ ಬಳಿಕ ನಾಲಾಯಕ್‌ ಬಿಜೆಪಿ ಸರ್ಕಾರ ಪತನ'

ಇದೇ ವೇಳೆ ಸತೀಶ ಜಾರಕಿಹೊಳಿ ಅವರಿಗೆ ಏನು ಅನುಭವ ಇದೆ ಎಂದು ಪ್ರಶ್ನಿಸಿದ ಶೆಟ್ಟರ್‌, ವಿಧಾನಸಭಾ ಅಧಿವೇಶನದಲ್ಲಿ ಧ್ವನಿ ಎತ್ತದವರು ಲೋಕಸಭೆಯಲ್ಲಿ ಪ್ರಶ್ನೆ ಮಾಡಬಲ್ಲರಾ ಎಂದು ಸಿದ್ದರಾಮಯ್ಯಗೆ ಸವಾಲು ಹಾಕಿದರು.
 

Follow Us:
Download App:
  • android
  • ios