ಫ್ರೀ ಕಾಶ್ಮೀರ: ನಳಿನಿ ಪರ ಬ್ಯಾಟಿಂಗ್‌, ಸಿದ್ದುಗೆ ಸಂಕಷ್ಟ

ಫ್ರೀ ಕಾಶ್ಮೀರ್ ಪ್ಲಕಾರ್ಡ್ ಪ್ರದರ್ಶಿಸಿದ ನಳಿನಿ ಬಾಲಕುಮಾರ್‌ನನ್ನು ಬೆಂಬಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಸಂಕಷ್ಟ ಎದುರಾಗಿದೆ. ಆರೋಪಿ‌ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದು ನಳಿನಿ ಪರ ವಾದಿಸುವಂತೆ ಮೈಸೂರಿನ ಹಿರಿಯ ನ್ಯಾಯವಾದಿ ಪಿ. ಜೆ. ರಾಘವೇಂದ್ರ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.

siddaramaiah faces trouble as he supports Free kashmir nalini balakumar

ಮೈಸೂರು(ಜ.24): ಫ್ರೀ ಕಾಶ್ಮೀರ್ ಪ್ಲಕಾರ್ಡ್ ಪ್ರದರ್ಶಿಸಿದ ನಳಿನಿ ಬಾಲಕುಮಾರ್‌ನನ್ನು ಬೆಂಬಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಸಂಕಷ್ಟ ಎದುರಾಗಿದೆ. ಆರೋಪಿ‌ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದು ನಳಿನಿ ಪರ ವಾದಿಸುವಂತೆ ಮೈಸೂರಿನ ಹಿರಿಯ ನ್ಯಾಯವಾದಿ ಪಿ. ಜಿ ರಾಘವೇಂದ್ರ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.

ಫ್ರೀ ಕಾಶ್ಮೀರ ಪ್ಲಕಾರ್ಡ್‌ ಪ್ರದರ್ಶನ ವಿಚಾರವಾಗಿ ಆರೋಪಿ‌ ನಳಿನಿ ಪರ ಬ್ಯಾಟಿಂಗ್ ಮಾಡಿದ್ದ ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆಯಲಾಗಿದೆ. ಸಿದ್ದರಾಮಯ್ಯನವರ ಗಮನಕ್ಕೆ ಎಂದು‌ ಆರಂಭಿಸಲಾದ ಪತ್ರವನ್ನು, ಮೈಸೂರಿನ ಹಿರಿಯ ನ್ಯಾಯವಾದಿ ಪಿ. ಜಿ ರಾಘವೇಂದ್ರ ಬರೆದಿದ್ದಾರೆ.

'ಫ್ರೀ ಕಾಶ್ಮೀರ' ಪ್ಲಕಾರ್ಡ್‌ ಪ್ರದರ್ಶನ ದೇಶ ದ್ರೋಹವಲ್ಲ: ಸಿದ್ದು

ಫ್ರೀ ಕಾಶ್ಮೀರ ಫಲಕ ಹಿಡಿದರೆ ದೇಶದ್ರೋಹವಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಸಿದ್ದರಾಮಯ್ಯ ಕಾನೂನು ಪದವೀಧರರು, ವಕೀಲರಾಗಿದ್ದವರು, ಈಗಲೂ ವಕೀಲರಾಗಿ ಕಾರ್ಯ ನಿರ್ವಹಿಸಬಲ್ಲರು. ಅವರ ಹೇಳಿಕೆಯನ್ನು ಮಾಧ್ಯಮದ ಮುಂದೆ ಹೇಳುವ ಬದಲು ಅವರೇ ಕರಿಕೋಟು ಧರಿಸಿ ಆಪಾದಿತೆ ನಳಿನ ಪರ ವಕಾಲತ್ತು ವಹಿಸಲಿ ಎಂದು ಅವರು ಸವಾಲೆಸೆದಿದ್ದಾರೆ.

ಆಕೆಯ ವಿರುದ್ದ ಪ್ರಕರಣ ರದ್ದುಗೊಳಿಸುವಂತೆ ವಾದ ಮಂಡಿಸಲಿ. ಪ್ರಕರಣ ದಾಖಲಿಸಿದ ಪೊಲೀಸರು ರಾಜ್ಯ ಸರ್ಕಾರಕ್ಕೆ ದಂಡ ವಿಧಿಸಿ ಆ ದಂಡದ ಮೊತ್ತವನ್ನು ಪರಿಹಾರ ರೂಪದಲ್ಲಿ ಆಪಾದತೆ ನಳಿನಿಗೆ ನೀಡಿ
ಸಂವಿಧಾನಬದ್ದವಾಗಿ ಹೋರಾಟ ನಡೆಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯಗೆ ಮೈಸೂರಿನ ಹಿರಿಯ ನ್ಯಾಯವಾದಿ ಪಿ ಜೆ ರಾಘವೇಂದ್ರ ಬಹಿರಂಗ ಆಹ್ವಾನ ನೀಡಿದ್ದಾರೆ.

ಕಾಶ್ಮೀರ ಉಳಿಸಿ ಎನ್ನುವುದು ತಪ್ಪಲ್ಲ ಎಂದ ವಕೀಲ

ಫ್ರೀ ಕಾಶ್ಮೀರ ಪ್ಲ ಕಾರ್ಡ್ ಪ್ರದರ್ಶನ ಪ್ರಕರಣಕ್ಕೆ ಸಂಬಂಧಿಸಿ ನಳಿನಿ ಪರ ವಕೀಲರ ಆಗಮನ ಹಿನ್ನಲೆ ಮೈಸೂರು ನ್ಯಾಯಾಲಯದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ನಳಿನಿ ಪರ ವಕಾಲತ್ತು ವಹಿಸಲು ವಕೀಲರು ನ್ಯಾಯಾಲಯಕ್ಕೆ ಆಗಮಿಸಿದ್ದು, ಇಂದು ನಳಿನಿ, ಮರೀದೇವಯ್ಯ ಪರ ವಾದ ಮಂಡಿಸಲಿದ್ದಾರೆ.

ದೇಶ ದ್ರೋಹದ ಪ್ರಕರಣವೆಂಬ ಕಾರಣ ಮೈಸೂರು ವಕೀಲರ ಸಂಘ ನಳಿನಿ ಪರ ವಕಾಲತ್ತು ವಹಿಸದಂತೆ ತೀರ್ಮಾನ ತೆಗೆದುಕೊಂಡಿದ್ದಾರೆ. ಸಂಘದಲ್ಲಿ ಪರ ವಿರೋಧದ ಚರ್ಚೆ ಇದ್ದು, ಇದೇ ವಿಚಾರಕ್ಕೆ ಮಂಜುಳ ಮಾನಸರನ್ನ ವಕೀಲರ ಸಂಘ ಅಮಾನತು ಮಾಡಿದೆ.

Latest Videos
Follow Us:
Download App:
  • android
  • ios