ಮೈಸೂರು (ಫೆ.17): ರಾಮಮಂದಿರ ನಿರ್ಮಾಣಕ್ಕೆ ನಾನು ಹಣ ಕೊಡೋಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವ ನಡುವೆ ಇತ್ತ ಸಿದ್ದರಾಮಯ್ಯ ಅವರ ತಮ್ಮ ಸಿದ್ದೇಗೌಡ ಅವರು ರಾಮ ಮಂದಿರ ನಿರ್ಮಾಣಕ್ಕೆ 10 ರು. ದೇಣಿಗೆ ನೀಡಿದ್ದಾರೆ.

ಮೈಸೂರು ತಾಲೂಕಿನ ಸಿದ್ದರಾಮನಹುಂಡಿಯಲ್ಲಿ ರಾಮಮಂದಿರಕ್ಕೆ ನಿಧಿ ಸಂಗ್ರಹಿಸಿದ ಬಿಜೆಪಿ ಕಾರ್ಯಕರ್ತರು ಸಿದ್ದೇಗೌಡರ ನಿವಾಸಕ್ಕೆ ತೆರಳಿ, ಕನಿಷ್ಠ 10 ರು.ಗಳಿಂದ ಎಷ್ಟಾದರೂ ದೇಣಿಗೆ ನೀಡಿ ಎಂದ ಮನವಿ ಮಾಡಿದರು. 

ರಾಮ ಮಂದಿರ ದೇಣಿಗೆ; ವಿವಾದಾತ್ಮಕ ಹೇಳಿಕೆ ನೀಡಿ ಕೈಸುಟ್ಟುಕೊಂಡ ಹೆಚ್‌ಡಿಕೆ, ಸಿದ್ದು! ...

ಹೀಗಾಗಿ, ಅವರು 10 ರು. ದೇಣಿಗೆ ನೀಡಿದ್ದಾರೆ. 10 ರು. ದೇಣಿಗೆಯ ರಶೀದಿಯನ್ನು ಬಿಜೆಪಿ ಕಾರ್ಯಕರ್ತರು ಅವರಿಗೆ ನೀಡಿದ್ದಾರೆ.