Asianet Suvarna News Asianet Suvarna News

ಸಿದ್ದು ಮುಖ್ಯಮಂತ್ರಿ ಪ್ರಮಾಣವಚನ ಹಿನ್ನೆಲೆ: ಧಾರವಾಡ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಣೆ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಿದ್ದರಾಮಯ್ಯ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಧಾರವಾಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ವಿತರಣೆ ಮಾಡಲಾಗುತ್ತಿದೆ.

Siddaramaiah as Chief Minister karnataka: this special day Holige oota distribution by fans at Indira Canteen at dharwad rav
Author
First Published May 20, 2023, 11:46 AM IST

ಧಾರವಾಡ (ಮೇ.20) ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇಂದು ಸಿದ್ದರಾಮಯ್ಯ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆ ಧಾರವಾಡದ ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ವಿತರಣೆ ಮಾಡಲಾಗುತ್ತಿದೆ.

ಇಂದು ಇಡೀ ದಿನ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ವಿತರಣೆ ಮಾಡುತ್ತಿರುವ ಮೋಹನ್ ಮೋರೆ  ಫೌಂಡೇಶನ್. ಮೋರೆ ಹಾಗೂ ಸಿದ್ದರಾಮಯ್ಯ ಅಭಿಮಾನಿಗಳ ಬಳಗದಿಂದ ಧಾರವಾಡ ಮಿನಿ ವಿಧಾನಸೌಧ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಊಟ ವಿತರಣೆ.

ಹೆಜ್ಜೆ ಹೆಜ್ಜೆಗೂ ಜ್ಯೋತಿಷಿ ಸಲಹೆ ಕೇಳೋ ಡಿಕೆಶಿ ಶನಿವಾರವೇಕೆ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ?

ಬೆಳಗಿನ ಉಪಾಹಾರದ ಜತೆಗೆ ಹೂಳಿಗೆ ಕೊಡುತ್ತಿರೋ ಇಂದಿರಾ ಕ್ಯಾಂಟೀನ್ ಸಿಬ್ಬಂದಿ. ಬಹಳ ದಿನದ ಬಳಿಕ ಇಂದಿರಾ ಕ್ಯಾಂಟೀನ್‌ನಲ್ಲಿ ಹೋಳಿಗೆ ಸವಿಯುತ್ತಿರುವ ಜನರು ಫುಲ್ ಖುಷಿಯಾಗಿದ್ದಾರೆ. ಧಾರವಾಡ-ಹುಬ್ಬಳ್ಳಿ, ದಕ್ಷಿಣ ಕನ್ನಡ ಬಾಗಲಕೋಟೆ ಸೇರಿ ಮೂರು ಜಿಲ್ಲೆಗಳ 17  ಕ್ಯಾಂಟೀನ್ ಗಳಲ್ಲಿ ಹೋಳಿಗೆ ಊಟ ವಿತರಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಮುಖಂಡ ಮೋಹನ್ ಮೋರೆ ನೇತೃತ್ವದಲ್ಲಿ 17 ಕ್ಯಾಂಟೀನಗಳಲ್ಲಿ ಒಟ್ಟು 9ಸಾವಿರ ಹೋಳಿಗೆ ವಿತರಣೆ ಮಾಡಲಾಗುತ್ತಿದೆ.

ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆ  ಇಂದಿರಾ ಕ್ಯಾಂಟೀನ್‌ಗಳಲ್ಲಿ ಹೋಳಿಗೆ ಊಟ ವಿತರಿಸುತ್ತಿರುವ ಬಗ್ಗೆ ಮೋಹನ್ ಮೋರೆ ಅವರು,  ನಮ್ಮ ಸುವರ್ಣ ನ್ಯೂಸ್ ಪ್ರತಿನಿಧಿ  ಪರಮೇಶ್ ಅಂಗಡಿ ಅವರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ. 

ನಮಗೆ ಇವತ್ತಿನಿಂದ ಶುಕ್ರದೆಶೆ ಆರಂಭ ವಾಗಿದೆ. ತುಂಬಾ ಖುಷಿಯಾಗಿದೆ, ಈ ಖುಷಿಗೆ ನಾವು ಜನರಿಗೆ ಹೋಳಿಗೆ ಊಟ ವಿತರಿಸುತ್ತಿದ್ದೇವೆ. ಸಿದ್ದರಾಮಯ್ಯ ಹಸಿದವರಿಗೆ ಅನ್ನ ಹಾಕುತ್ತಾರೆ ಅದಕ್ಕೆ ರಾಜ್ಯದ ಜನರು ಅವರನ್ನು ಅನ್ನರಾಮಯ್ಯ ಎಂದು ಕರೆಯುತ್ತಾರೆ. ಸಿದ್ದರಾಮಯ್ಯರ ಸರ್ಕಾರದಲ್ಲಿ ನಮಗೆ ಬಾಕಿ ಇರುವ ಬಿಲ್‌ಗಳು ಬರುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಪ್ರಮಾಣ ವಚನ: ಕಂಠೀರವದಲ್ಲಿ ಯಾರಿಗೆಲ್ಲಿ ಪ್ರವೇಶ?

Follow Us:
Download App:
  • android
  • ios