ಮೈಸೂರು:(ಡಿ.22): ಸಿದ್ದರಾಮಯ್ಯನವ್ರೇ ನಿಮಗೆ ಈಗ ಸೋಲಿನ ಕಹಿ ಅರ್ಥ ಆಯ್ತ? ನಾನು ನಂಜನಗೂಡು ಉಪ ಚುನಾವಣೆಯಲ್ಲಿ ಸೋತ ಮರುದಿನವೇ ಹೇಳಿದ್ದೆ ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲ್ತಾರೆ ಅಂತ. ಸಿದ್ದರಾಮಯ್ಯ ಹತಾಶನಾಗಿ ಸತ್ತ ಕೋಳಿಯಂತಾಗಿದ್ದಾನೆ. ಸತ್ತಕೋಳಿ ಬೆಂಕಿಗೆ ಹೆದರುವಂತಾಗಿದೆ’ ಎಂದು ಸಂಸದ ಶ್ರೀನಿವಾಸ ಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

‘ಒಳ ಒಪ್ಪಂದದಿಂದ ನನ್ನನ್ನು ಸೋಲಿಸಿದ್ರು’ ಎಂಬ ಸಿದ್ದರಾಮಯ್ಯ ಹೇಳಿಕೆ ಸಂಬಂಧ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೆಕ್ಕು ಕಣ್ಮುಚ್ಚಿಕೊಂಡು ಹಾಲು ಕುಡಿದ್ರೆ ಜಗತ್ತಿಗೆ ಕಾಣಲ್ಲ ಅನ್ಕೊಂಡಿದ್ದೀರಾ? ಅಧಿಕಾರದಲ್ಲಿದ್ದಾಗ ಸಿದ್ದರಾಮಯ್ಯ, ಮಹದೇವಪ್ಪನ ದರ್ಪ ದುರಹಂಕಾರ ಈ ಪರಿಸ್ಥಿತಿಗೆ ಕೊಂಡೊಯ್ದಿದೆ ಎಂದು ಹೇಳಿದ್ದಾರೆ. 

ಅಂದು ಭಿಕ್ಷಾಟನೆ, ಇಂದು ಅಭ್ಯರ್ಥಿಯಾಗಿ ಮತಯಾಚನೆ; ಅಚ್ಚರಿಗೆ ಸಾಕ್ಷಿಯಾಯ್ತು ಗ್ರಾಪಂ ಚುನಾವಣೆ

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ವಿರೋಧಿಸುವವರಿದ್ದಾರೆ. ಈಗಾಗಲೇ ಉಪ ಚುನಾವಣೆಗಳಲ್ಲಿನ ಕಾಂಗ್ರೆಸ್‌ ಪತನದ ಹಾದಿ ಹಿಡಿದಿದೆ’ ಎಂದರು.