Asianet Suvarna News Asianet Suvarna News

ಗುರುಮಠಕಲ್: ಸಂಭ್ರಮದ ಶ್ರೀ ಸಿದ್ಧಾರೂಢರ ರಥೋತ್ಸವ, ಸಾವಿರಾರು ಭಕ್ತರು ಭಾಗಿ

ಸಂಭ್ರಮದ ಶ್ರೀ ಸಿದ್ಧಾರೂಢರ ರಥೋತ್ಸವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಒತ್ತಡ ಕಡಿಮೆ: ಸಿದ್ಧಲಿಂಗ ಸ್ವಾಮೀಜಿ|  ಶರಣರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಂಡರೆ ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ|

Shri Siddharoodha Fair Held at Gurmatkal in Yadgir District
Author
Bengaluru, First Published Jan 25, 2020, 11:25 AM IST
  • Facebook
  • Twitter
  • Whatsapp

ಗುರುಮಠಕಲ್(ಜ.25): ತಾಲೂಕಿನ ಅರಕೇರಾ (ಕೆ) ಗ್ರಾಮದ ಶ್ರೀ ಸಿದ್ಧಾರೂಢ ಸ್ವಾಮಿ ಬ್ರಹ್ಮವಿದ್ಯಾಶ್ರಮದ ಶ್ರೀ ಸಿದ್ಧಾರೂಢರ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಸದ್ಗುರು ಸಿದ್ಧಾರೂಢರ ರಥೋತ್ಸವ ಸಂಜೆ 6 ಕ್ಕೆ ಸಕಲ ವಾದ್ಯ ವೈಭವಗಳೊಂದಿಗೆ ನೆರೆದಿದ್ದ ಸಾವಿರಾರು ಭಕ್ತಾದಿಗಳ ಮಧ್ಯೆ ವೈಭವದಿಂದ ನಡೆಯಿತು. 

ಸಂಜೆ 3 ರಿಂದ ಅರಕೇರಾ ಗ್ರಾಮದ ಆಂಜನೇಯ ದೇವಸದ್ಥಾನದಿಂದ ಆಶ್ರಮದವರೆಗೆ ಸಿದ್ಧಾರೂಢರ ಭವ್ಯ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಆಶ್ರಮದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕಿದೆ. ಇದರಿಂದ ಒತ್ತಡವನ್ನು ಸುಲಭವಾಗಿ ನಿವಾರಣೆ ಮಾಡಲು ಸಾಧ್ಯ. ಭೌತಿಕ, ಲೌಕಿಕ ಜೀವನಕ್ಕಿಂತ ಆತ್ಮಾನಂದ ಹಾಗೂ ಸಂತೃಪ್ತಿಗಳು ನಿಜವಾದ ಸುಖವನ್ನು ನೀಡಲಿದ್ದು, ಅದಕ್ಕಾಗಿ ಆಧ್ಯಾತ್ಮದ ಅವಶ್ಯಕತೆಯಿದೆ. ನಮ್ಮ ಸ್ವಾರ್ಥವನ್ನು ತೊರೆದು ದಾರ್ಶನಿಕರ ಜೀವನ ಸಿದ್ಧಾಮತದಂತೆ ಸರ್ವಜನ ಶಾಂತಿಗಾಗಿ ಬದುಕನ್ನು ನಡೆಸಿದಾಗ ದೈವಾನುಗೃಹವು ತಾನಾಗಿಯ ಸಿಗಲಿದೆ ಎಂದು ಹೇಳಿದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಾನ್ನಿಧ್ಯ ವಹಿಸಿದ್ದ ಗುರುಮಠಕಲ್ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮನೋಭಾವನೆ ಬೆಳೆಸಿಕೊಳ್ಳುವುದು ಅವಶ್ಯವಿದೆ. ಶರಣರ ತತ್ವಾದರ್ಶಗಳನ್ನು ಎಲ್ಲರೂ ಜೀವನದಲ್ಲಿ ಮೈಗೂಡಿಸಿಕೊಂಡರೆ ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು. 

ಶ್ರೀ ಪಂಚಮ ಸಿದ್ದಲಿಂಗ ಮಹಾಸ್ವಾಮಿಗಳು, ಶ್ರೀ ದಯಾನಂದ ಮಹಾಸ್ವಾಮಿಗಳು, ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು, ಶ್ರೀ ಚಿದಾನಂದ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. 

ಉದ್ಯಮಿಗಳಾದ ನರಸರೆಡ್ಡಿ  ಪಾಟೀಲ್, ವೀರಣ್ಣ ಬೇಲಿ, ವಿಕ್ರಂ ರಾಮಚಾರಿ, ಸಿದ್ದಲಿಂ ಗರೆಡ್ಡಿ ಕಂದಕೂರ, ಸಾಯಬಣ್ಣ ಪೂಜಾರಿ, ಸೂಗಣ್ಣಗೌಡ ಮಾಲಿ ಪಾಟೀಲ್, ದೇವರಾಜ, ರಾಘವೇಂದ್ರ, ಬನ್ನಪ್ಪ, ಮಲ್ಲಪ್ಪ, ಸಾಹೇಬರೆಡ್ಡಿ, ಭೀಮಶಂಕರ್, ಶಂಕರಣ್ಣ, ನಾಗರಾಜಗೌಡ, ಜಗನಾಥರೆಡ್ಡಿ ಇದ್ದರು. ಶಿವಪುತ್ರ ಬಾಚ್ವರ್ ಸ್ವಾಗತಿಸಿದರು. ಬಾಡದೋರ್ ಅಂಕೊರಾ ನಿರೂಪಿಸಿದರು. ದೇವಮಲ್ಲಮ್ಮ ಪ್ರಾರ್ಥಿಸಿದರು.
 

Follow Us:
Download App:
  • android
  • ios