ವಿಜಯಪುರ(ಜ.02):  ಜಿಲ್ಲೆ ಇಂಡಿ ತಾಲೂಕಿನ ಜಿಗಜೀವಣಿ ಗ್ರಾಮದ ಕೌದೇಶ್ವರ ಮಠದ ಪೀಠಾಧಿಪತಿ ಶ್ರೀ ಸತ್ಯಪ್ಪ ಮಹಾರಾಜರು ಇಂದು(ಗುರುವಾರ) ಲಿಂಗೈಕ್ಯರಾಗಿದ್ದಾರೆ. 

82 ವರ್ಷದ ಶ್ರೀ ಸತ್ಯಪ್ಪ ಮಹಾರಾಜರು ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ರೀ ಸತ್ಯಪ್ಪ ಮಹಾರಾಜರು ಹಸರೀಕರಣ ಹಾಗೂ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದರು.  ಇಂದು ಮಧ್ಯಾಹ್ನ 2 ಗಂಟೆಗೆ ಜಿಗಜೀವಣಿ ಗ್ರಾಮದ ಹೊರ ಭಾಗದಲ್ಲಿರುವ ಕೈಲಾಸ ಆಶ್ರಮದಲ್ಲಿ ಶ್ರೀ ಸತ್ಯಪ್ಪ ಮಹಾರಾಜರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಶ್ರೀಗಳ ಅಗಲಿಕೆಗೆ ವಿವಿಧ ಮಠಾಧೀಶರು, ಗಣ್ಯರು, ರಾಜಕಾರಣಿಗಳು ಹಾಗೂ ಭಕ್ತರು ಸಂತಾಪ ವ್ಯಕ್ತಪಡಿಸಿದ್ದಾರೆ.