ರಾಮ ಮಂದಿರ ನಿರ್ಮಾಣ ಮಾಡಲೇಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ಕರ್ನಾಟಕದಲ್ಲೂ  ಸಮಾವೇಶಗಳು ನಡೆಯುತ್ತಿವೆ. ಅದರಂತೆ ಇಂದು [ಭಾನುವಾರ] ಗದಗನಲ್ಲೂ ಸಹ ಜನಾಗ್ರಹ ಸಭೆ ನಡೆಯಿತು.

ಗದಗ, [ನ.25]: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಲೇಬೇಕು ಎಂದು ಕೇಂದ್ರದ ಮೇಲೆ ಒತ್ತಡ ಹೇರಲು ದೇಶಾದ್ಯಂತ ಹಲವು ಕಡೆಗಳಲ್ಲಿ ಜನಾಗ್ರಹ ಸಭೆಗಳು ನಡೆಯುತ್ತಿವೆ. 

ಕರ್ನಾಟಕದಲ್ಲೂ ಉಡುಪಿ, ಹುಬ್ಬಳ್ಳಿ, ಗದಗದಲ್ಲಿ ಬೃಹತ್​ ಸಮಾವೇಶಗಳು ನಡೆಯುತ್ತಿವೆ. ಅದರಂತೆ ಇಂದು [ಭಾನುವಾರ] ಗದಗನಲ್ಲೂ ಸಹ ಜನಾಗ್ರಹ ಸಭೆ ನಡೆಯಿತು.

ಸಭೆಯಲ್ಲಿ ಮುಖ್ಯ ವಕ್ತಾರ ರಘುನಂದನ ಮಾತನಾಡಿ, ನವರಾತ್ರಿ ಮಾಡುವ ಪ್ರಧಾನಿ ಬೇಕೋ... ವ್ಯಾಟಿಕನ್ ಸಿಟಿ ಆದೇಶಕ್ಕೆ ಕಾಯುವ ಪ್ರಧಾನಿ ಬೇಕೋ ನಿರ್ಧರಿಸಿ ಎಂದರು.

ಹಿಂದುಗಳು ಸಾಮಾನ್ಯವಾಗಿ ಎದ್ದೇಳಲ್ಲ... ಒಮ್ಮೆ ಎದ್ರೆ ಯಾವುದೇ ಯಾವ ಕೆಟ್ಟ ಶಕ್ತಿಗಳು ಉಳಿಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಟಿಪ್ಪು ಜಯಂತಿ ಯಾಕೆ ಬೇಕು. ಅದೇ ನಮ್ಮ ದೇಶದ ಹೆಮ್ಮೆಯ ಪುತ್ರರಾದ ಡಾ. ಅಬ್ದುಲ್ ಕಲಾಂ, ಸಂತ ಶಿಶುನಾಳ ಪರೀಫ ಜಯಂತಿ ಆಚರಿಸಿ ನಾವು ಬರುತ್ತೇವೆ.

ಎಲ್ಲಿ ಹಾಳಾಗಿತ್ತೋ... ಅಲ್ಲೇ ಮಂದಿರ ನಿರ್ಮಾಣ ಮಾಡೋಣ... ಯಾವುದನ್ನ ಹೇಗೇ ಮಾಡಬೇಕು ಅನ್ನೋದು ನಮಗೆ ಗೊತ್ತಿದೆ. ರಾಮಮಂದಿರ ನಿರ್ಮಾಣಕ್ಕೆ ಬೇಕಾಗುವ ಎಲ್ಲಾ ದಾಖಲೆಗಳನ್ನು ನೀಡಲಾಗಿದೆ.

ಶಬರೀಮಲೆ ವಿಷಯದಲ್ಲಿ ಅಲ್ಲಿನ ಮಹಿಳೆಯರು ಮುಂದೆ ಬಂದಿರಿರುವುದು ಸ್ವಾಗತಾರ್ಹ. ದೇಶದಲ್ಲಿ ಕಾನೂನು ಉಲ್ಲಂಘನೆ ಮಾಡುವುದು ಹಿಂದು ಧರ್ಮವರಲ್ಲ. ಕೇವಲ ಅನ್ಯ ಧರ್ಮೀಯರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಹಲವು ಮಠಾದೀಶರು, ಹಿಂದು ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದು, ತಮ್ಮದೇ ವಾದ, ಅಭಿಪ್ರಾಯಗಳನ್ನು ಮಂಡಿಸಿದರು.