ಯಾದಗಿರಿ(ಜು.06): ಚಾಲಕ ಕಂ. ನಿರ್ವಾಹಕರು ಸೇರಿದಂತೆ 7 ಜನ ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಜಿಲ್ಲೆಯ ಸುರಪುರ ಬಸ್‌ ಡಿಪೋವನ್ನು ಸೀಲ್‌ಡೌನ್‌ ಮಾಡಲಾಗಿದೆ.

ಸೋಂಕು ತಗುಲಿದ್ದ ನಿರ್ವಾಹಕರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಇವರೆಲ್ಲ ಬಂದಿದ್ದರು. ಆರೋಗ್ಯ ಕೇಂದ್ರದಲ್ಲಿ ಶುಶ್ರೂಶಕಿಯಾಗಿರುವ ಪತ್ನಿಯಿಂದಾಗಿ ಸುರಪುರದ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ನಿರ್ವಾಹಕ (ಪಿ-8228) ಅವರಿಗೆ ಸೋಂಕು ತಗುಲಿದೆ.

ಕೊರೋನಾಗೆ ಬಲಿ: ಯಾದಗಿರಿಯಲ್ಲೂ ಅಮಾನವೀಯ ಅಂತ್ಯಸಂಸ್ಕಾರ..! 

ಈಗ ಇವರ ಕುಟುಂಬದ 10 ಜನರು ಹಾಗೂ ಸಾರಿಗೆ ಸಂಸ್ಥೆಯ 7 ಸಿಬ್ಬಂದಿಗಳು ಸೇರಿದಂತೆ 17 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ, ಬಸ್‌ ಡಿಪೋವನ್ನು ಸ್ಯಾನಿಟೈಸ್‌ ಮಾಡಲಾಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ಸೋಮವಾರದಿಂದ ಶಹಾಪುರ ಡಿಪೋ ಮೂಲಕ ಬಸ್‌ಗಳು ಸಂಚರಿಸಲಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಡಿಟಿಓ ರಮೇಶ್‌ ಪಾಟೀಲ್‌ ತಿಳಿಸಿದ್ದಾರೆ.