Asianet Suvarna News Asianet Suvarna News

Shivamogga Smart City: ಫುಟ್‌​ಪಾ​ತ್‌​ಗ​ಳಲ್ಲಿ ತಪ್ಪ​ದ ಕಿರಿ​ಕಿರಿ ಸಂಚಾ​ರ

  •  ’ಸ್ಮಾಟ್‌ಸಿಟಿ’ ಫುಟ್‌​ಪಾ​ತ್‌​ಗ​ಳಲ್ಲಿ ತಪ್ಪ​ದ ಕಿರಿ​ಕಿರಿ ಸಂಚಾ​ರ
  •  ಮುಖ್ಯ ರಸ್ತೆ​ಗಳಲ್ಲಿ ವ್ಯಾಪಾ​ರಿ​ಗ​ಳಿಂದ ಪಾದ​ಚಾರಿ ಮಾರ್ಗ ಒತ್ತು​ವ​ರಿ
  • ಬಸ್‌ ನಿಲ್ದಾಣ ಬಳಿ ರಸ್ತೆ ದಾಟಲು ಪ್ರಾಣ​ಭೀತಿ!
Shivamogga Smart city isssue traffic problems on footpaht rav
Author
Bengaluru, First Published Aug 1, 2022, 11:04 AM IST

ವರದಿ: ಗಣೇಶ್‌ ತಮ್ಮಡಿಹಳ್ಳಿ 

 ಶಿವಮೊಗ್ಗ (ಅ.1) : ನಗರದ ಬಿ.ಎಚ್‌. ರಸ್ತೆ, ಬಜಾರ್‌ ರಸ್ತೆ, ನೆಹರು ರಸ್ತೆ, ಆಲ್ಕೊಳ ರಸ್ತೆ, ಗೋಪಾಳ ಬಡಾವಣೆ ರಸ್ತೆ ಇಂತಹ ಮುಖ್ಯ ರಸ್ತೆಗಳಲ್ಲಿ ಎಲ್ಲಿಯೂ ಪಾದಚಾರಿಗಳಿಗೆ ಅಡೆತಡೆಗಳಿಲ್ಲದೇ ನಡೆದಾಡುವ ಅವ​ಕಾಶ ಇಲ್ಲ. ಇನ್ನು ಒಳಭಾಗದ ರಸ್ತೆಗಳ ಪಾಡಂತೂ ಹೇಳತೀರದಷ್ಟುಕೆಟ್ಟದಾಗಿವೆ. ಈ ಮಧ್ಯೆ ಪಾದಚಾರಿ ಮಾರ್ಗಕ್ಕೂ, ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ ಸಂಚಾರ ಠಾಣೆ ಪೊಲೀಸರು!

ಹೌದು. ಇದು ‘ಸ್ಮಾರ್ಚ್‌​ಸಿ​ಟಿ’(Smart City) ಯೋಜ​ನೆ​ಯಡಿ ಅಂದ​ಗಾ​ಣು​ತ್ತಿ​ರುವ ಶಿವ​ಮೊಗ್ಗ(Shivamogga) ನಗ​ರದ ಕಾಮ​ಗಾ​ರಿ​ಗ​ಳ​ಲ್ಲಿ​ರುವ ದೋಷ​ಗಳು. ಈ ಎಲ್ಲ ಅವ್ಯ​ವ​ಸ್ಥೆ​ಗ​ಳನ್ನು ಕಂಡಿ​ರುವ, ಅನಿ​ವಾ​ರ್ಯ​ವಾಗಿ ಅನು​ಭ​ವಿ​ಸು​ತ್ತಿ​ರುವ ಪ್ರಜ್ಞಾವಂತ ನಾಗರಿಕರ ಅಳಲು ಮತ್ತು ಆರೋ​ಪ​ವಾ​ಗಿದೆ.

BIG 3 Impact: ಶಿವಮೊಗ್ಗದ ಬೀದಿ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ, ಮಳಿಗೆ ಉದ್ಘಾಟನೆ

ಅಶೋಕ ವೃತ್ತದಲ್ಲಿ ಮೈ ಮರೆತರೆ ಬಲಿ!: ನಗ​ರದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ(KSRTC Bus Station), ಖಾಸಗಿ ಬಸ್‌ ನಿಲ್ದಾಣ ಸುತ್ತ ಫುಟ್ಪಾತ್‌(Footpath) ಎಲ್ಲಿದೆ ಎಂದು ಹುಡುಕಾಡಬೇಕಾದ ಸ್ಥಿತಿ ಇದೆ. ಸದಾ ಸಂಚಾರ ದಟ್ಟಣೆಯಿಂದ ಕೂಡಿರುವ ಈ ವೃತ್ತ​ ಪ್ರದೇ​ಶದಲ್ಲಿ ಪಾದಚಾರಿಗಳು ಸ್ವಲ್ಪ ಮೈ ಮರೆತರೂ ಅಪಘಾತ()Accident(ಕ್ಕೆ ಒಳಗಾಗುವ ಅಪಾ​ಯ​ಕಾರಿ ಪರಿಸ್ಥಿತಿ ನಿರ್ಮಾ​ಣ​ವಾ​ಗಿದೆ. ಖಾಸಗಿ ಬಸ್‌ ನಿಲ್ದಾಣ ಮುಂಭಾಗ ಜನರು ಅತ್ತಿಂದಿತ್ತ ಸುಲ​ಭ​ವಾಗಿ ದಾಟಲು ವೇಗದಿಂದ ಬರುವ ವಾಹನಗಳ ಮಧ್ಯೆ ರಸ್ತೆಯಲ್ಲಿಯೇ ಹೆಜ್ಜೆ ಹಾಕಬೇಕಿದೆ.

ಎಲ್ಲೆಂದರಲ್ಲಿ ಪಾರ್ಕಿಂಗ್‌: ನಗರದ ಬಹುತೇಕ ಚರಂಡಿ ಮಾರ್ಗಗಳನ್ನು ಇಂದಿಗೂ ಮುಚ್ಚದೇ ಹಾಗೇ ಬಿಟ್ಟಿರುವುದು ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದೆ. ದ್ವಿಮುಖ ಸಂಚಾರ ವ್ಯವಸ್ಥೆ ಇರುವ ರಸ್ತೆಗಳಲ್ಲಂತೂ ಎರಡೂ ಕಡೆಗಳಿಂದ ವಾಹನಗಳು ಬಂದು ದಟ್ಟಣೆಯಾದರೆ ಪಾದಚಾರಿಗಳು ಪರದಾಡುವಂತಾಗುತ್ತದೆ. ಅನೇಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಜನರು ಪ್ರಾಣ ಭಯದಿಂದ ನಡೆದಾಡುವಂತಾಗಿದೆ.

ವರ್ತಕರಿಂದ ಒತ್ತುವರಿ: ನಗರದ ಬಹುಪಾಲು ವಾಣಿಜ್ಯ ಚಟುವಟಿಕೆಯುಳ್ಳ ರಸ್ತೆಗಳ ಪಾದಚಾರಿ ಮಾರ್ಗಗಳು ವರ್ತಕರು, ತಳ್ಳುಗಾಡಿಯವರಿಂದ ಒತ್ತುವರಿಯಾಗಿವೆ. ಕೆಲವೆಡೆಯಂತೂ ಏಕಮುಖ ಸಂಚಾರ ವ್ಯವಸ್ಥೆ ಸಮರ್ಪಕ ರೀತಿಯಲ್ಲಿ ಜಾರಿಗೆ ಬಂದಿಲ್ಲ. ಇದರಿಂದಾಗಿ ಪಾದಚಾರಿ ಮಾರ್ಗದ ಸಮಸ್ಯೆ ದಿನೇ​ದಿನೇ ಉಲ್ಬಣಗೊಳ್ಳುತ್ತಿದೆ.

ಸ್ಮಾರ್ಟ್‌ಸಿಟಿ : ಶಿವಪ್ಪ ನಾಯಕ ಕೋಟೆಗೆ ಧಕ್ಕೆ?

ರಸ್ತೆ ಮಧ್ಯೆಯೇ ವಿದ್ಯುತ್‌ ಕಂಬಗಳು: ಶಿವಮೊಗ್ಗ ನಗರವನ್ನು ಮತ್ತಷ್ಟುಸ್ಮಾರ್ಚ್‌ ಆಗಿ ರೂಪಗೊಳ್ಳಲು ಸ್ಮಾರ್ಚ್‌ಸಿಟಿ ಯೋಜನೆ ಕಾಮಗಾರಿಗಳು ವೇಗದಿಂದ ನಡೆಯುತ್ತಿವೆ. ಆದರೆ, ಈ ಅಭಿವೃದ್ಧಿ ಕಾರ್ಯದಲ್ಲಿ ಹಲವಡೆ ಅಧ್ವಾನಗಳೇ ತುಂಬಿ ತುಳುಕುತ್ತಿದೆ. ಆಲ್ಕೊಳದಿಂದ ಗೋಪಾಳಕ್ಕೆ ತೆರ​ಳುವ ಮಾರ್ಗದ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ರಸ್ತೆ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗವನ್ನು ನಿರ್ಮಿಸಲಾಗಿದೆ. ಆದರೆ, ವಿದ್ಯುತ್‌ ಕಂಬಗಳನ್ನು ತೆರವುಗೊಳಿಸದೇ ಹೇಗಿದೆ ಹಾಗೆಯೇ ಕಾಮಗಾರಿಗಳ​ನ್ನು ನಡೆಸಲಾಗಿದೆ. ಈ ಮಾರ್ಗದಲ್ಲಿ ಪಾದಚಾರಿಗಳು ನುಸುಳಿಕೊಂಡು ಹೋಗಬೇಕಾಗಿದೆ. ದಾರಿ ಮಧ್ಯೆ ಕಂಬವಿರುವ ಕಾರಣ ಪಾದಚಾರಿಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಮಳೆಗಾಲದಲ್ಲಿ ಅಪಾಯ ಉಂಟುಮಾಡುವ ಸಾಧ್ಯತೆಯೇ ಅಧಿಕವಾಗಿದೆ.

ನಗರದಲ್ಲಿ ಫುಟ್‌ಪಾತ್‌ ಸಮಸ್ಯೆ ಗಮನಕ್ಕೆ ಬಂದಿದೆ. ಎಲ್ಲೆಲ್ಲಿ ಪುಟ್‌ಪಾತ್‌ ಸಮಸ್ಯೆಗಳಿವೆ ಎಂಬುದನ್ನು ಪರಿಶೀಲನೆ ನಡೆಸಿ, ಕೂಡಲೇ ಸಮಸ್ಯೆ ಸರಿಪಡಿಸಿ ಪುಟ್‌ಪಾತ್‌ಗಳಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಈಗಾಗಲೇ ಚಿಂತಿಸಲಾಗಿದೆ. ಇದಕ್ಕೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್‌ ಅಧಿಕಾರಗಳ ನೆರವನ್ನು ಕೋರಲಾಗಿದೆ. ಅದೇ ರೀತಿ ಎಲ್ಲೆಲ್ಲಿ ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವ ಅಂಗಡಿಗಳನ್ನೂ ಶೀಘ್ರದಲ್ಲಿಯೇ ತೆರವುಗೊಳಿಸುವ ಮೂಲಕ ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು

- ಸುನೀತಾ ಅಣ್ಣಪ್ಪ, ಮೇಯರ್‌, ಮಹಾನಗರ ಪಾಲಿಕೆ

Follow Us:
Download App:
  • android
  • ios