Asianet Suvarna News Asianet Suvarna News

Shivamogga: ಜ್ಯೂಸ್ ಬಾಟಲ್ ಮುಚ್ಚಳ ನುಂಗಿ ಒಂದೂವರೆ ವರ್ಷದ ಮಗು ಸಾವು!

Shivamogga Baby Death ಶಿವಮೊಗ್ಗದಲ್ಲಿ ಮನೆಯೊಂದರಲ್ಲಿ ಆಟವಾಡುತ್ತಿದ್ದ ಒಂದೂವರೆ ವರ್ಷದ ಮಗುವೊಂದು ಜ್ಯೂಸ್ ಬಾಟಲಿಯ ಮುಚ್ಚಳ ನುಂಗಿ ಉಸಿರುಗಟ್ಟಿ ಸಾವನ್ನಪ್ಪಿದೆ. ಮಗುವಿಗೆ ಉಸಿರುಗಟ್ಟುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣ ಆಸ್ಪತ್ರೆಗೆ ಕರೆದೊಯ್ದものの, ವೈದ್ಯರು ಮಗುವನ್ನು ಮೃತ ಎಂದು ಘೋಷಿಸಿದ್ದಾರೆ.

Shivamogga one and half year old child died after swallowing juice bottle cap san
Author
First Published Sep 5, 2024, 1:50 PM IST | Last Updated Sep 5, 2024, 1:50 PM IST

ಶಿವಮೊಗ್ಗ (ಸೆ.5): ಮನೆಗಳಲ್ಲಿ ಚಿಕ್ಕ ಮಕ್ಕಳಿದ್ದರೆ, ಎಷ್ಟು ಎಚ್ಚರಿಕೆಯಿದ್ದರೂ, ಎಷ್ಟು ಜನರಿದ್ದರೂ ಸಾಲದು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ಅದಕ್ಕೆ ಕಾರಣ, ಚಿಕ್ಕ ಮಕ್ಕಳು ಎಲ್ಲಿ ಹೋಗ್ತಾರೆ ಏನ್‌ ಮಾಡ್ತಾರೆ ಅನ್ನೋದೇ ಗೊತ್ತಾಗೊಲ್ಲ. ಅವರಿಗೆ ಕಂಡಿದೆಲ್ಲವೂ ಕುತೂಹಲ. ಕಂಡಿದೆಲ್ಲವನ್ನೂ ಬಾಯಿಗೆ ಹಾಕಿಕೊಳ್ಳೋ ಅಭ್ಯಾಸ ಇರುತ್ತದೆ. ಶಿವಮೊಗ್ಗದ ಈ ಘಟನೆ ಇಂಥ ಎಚ್ಚರಿಕೆಯನ್ನು ಮತ್ತೊಮ್ಮೆ ನೀಡಿದೆ. ಮನೆಯಲ್ಲಿ ಆಟವಾಡುವ ವೇಳೆ ಜ್ಯೂಸ್ ಬಾಟಲ್ ನುಂಗಿದ್ದ ಮಗು ದಾರುಣ ಸಾವು ಕಂಡಿದೆ. ಜ್ಯೂಸ್ ಬಾಟಲಿಯ ಮುಚ್ಚಳ ನುಂಗಿದ್ದರಿಂದ ಉಸಿರಾಟದ ತೊಂದರೆ ಎದುರಾಗಿತ್ತು. ಇದರಿಂದ ಒಂದೂವರೆ ವರ್ಷದ ಮಗು ಸಾವು ಕಂಡಿದೆ.

Shivamogga: ಶಿವಮೊಗ್ಗಕ್ಕೆ ಬರಲಿದೆ ವಂದೇ ಭಾರತ್‌ ರೈಲು!

ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿಕಾರಿಪುರ ತಾಲೂಕಿನ ಅಮಟೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗುವಳ್ಳಿ ಗ್ರಾಮದಲ್ಲಿ ಬುಧವಾರ ಈ ಘಟನೆ ನಡೆದಿದೆ. ವೇದಮೂರ್ತಿ ಗಂಗಾಧರಯ್ಯ ಶಾಸ್ತ್ರಿ ಎಂಬುವರ ಮಗು ಸಾವು ಕಂಡಿದೆ.  ಬುಧವಾರ ಜ್ಯೂಸ್ ಬಾಟಲಿ ಹಿಡಿದುಕೊಂಡು ಮಗು ಅಟವಾಡುತ್ತಿದ್ದ ಮಗು, ಜ್ಯೂಸ್‌ನ ಬಾಟಲಿಯ ಮುಚ್ಚಳವನ್ನು ನುಂಗಿದೆ. ಇದು ಮನೆಯಲ್ಲಿದ್ದ ಯಾರಿಗೂ ಗೊತ್ತಾಗಿಲ್ಲ. ಮಗುವಿಗೆ ಉಸಿರುಗಟ್ಟಿದ ಅನುಭವವಾಗುತ್ತಿದ್ದಂತೆ ಇದು ಅರಿವಿಗೆ ಬಂದಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಪ್ರಯತ್ನ ಫಲಕೊಟ್ಟಿಲ್ಲ.  ಮಗು ಕಳೆದುಕೊಂಡು ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಎಲ್ಲ ಹಗರಣ ಸಾಬೀತು: ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ಯಡಿಯೂರಪ್ಪ

Latest Videos
Follow Us:
Download App:
  • android
  • ios