ಭದ್ರಾವತಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲಿಸಿದ ಸಂಸದ ಬಿ.ವೈ. ರಾಘವೇಂದ್ರ

ಶಿವಮೊಗ್ಗ ಮತ್ತು ಭದ್ರಾವತಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಇಂದು ಸಂಸದ ಬಿ.ವೈ. ರಾಘವೇಂದ್ರ ಪರಿಶೀಲನೆ ನಡೆಸಿದರು. 

Shivamogga MP B Y Ragavendra inspected Bhadravati railway flyover work akb

ವರದಿ : ರಾಜೇಶ್ ಕಾಮತ್, ಶಿವಮೊಗ್ಗ
ಶಿವಮೊಗ್ಗ ಮತ್ತು ಭದ್ರಾವತಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಇಂದು ಸಂಸದ ಬಿ.ವೈ. ರಾಘವೇಂದ್ರ ಪರಿಶೀಲನೆ ನಡೆಸಿದರು. ಸಂಸದ ಬಿ.ವೈ. ರಾಘವೇಂದ್ರ  ಭದ್ರಾವತಿಯ ಕಡದಕಟ್ಟೆ, ವಿದ್ಯಾನಗರ, ಉಷಾ ನರ್ಸಿಂಗ್ ಹೋಮ್, ಕಾಶಿಪುರ ಬಳಿ ನಿರ್ಮಿಸಲಾಗುತ್ತಿರುವ ರೈಲ್ವೇ ಓವರ್ ಬ್ರಿಡ್ಜ್ ಕಾಮಗಾರಿಯನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದರು. ನಂತರ ಮಾಧ್ಯಮದ ಜೊತೆಗೆ ಮಾತನಾಡಿದ ಸಂಸದರು ಶಿವಮೊಗ್ಗದ ಕಾಶಿಪುರ, ಸವಳಂಗ ರಸ್ತೆ, ವಿದ್ಯಾನಗರ ಹಾಗೂ ಭದ್ರಾವತಿಯ ಕಡದಕಟ್ಟೆಯಲ್ಲಿ  ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ ಈ ಕಾಮಗಾರಿಯಲ್ಲಿ ಶಿವಮೊಗ್ಗದ 2, ಭದ್ರಾವತಿಯ ಒಂದು ಮೇಲ್ಸೇತುವೆ ನಿರ್ಮಾಣಕ್ಕೆ 142 ಕೋಟಿ ವೆಚ್ಚ ತಗುಲಲಿದೆ. ಶಿವಮೊಗ್ಗದ ವಿದ್ಯಾನಗರದ ಬಳಿ ರೈಲ್ವೆ ಅಂಡರ್ ಪಾಸ್ ಜೊತೆಗೆ ಮೇಲ್ಸೇತುವೆ ನಿರ್ಮಾಣವನ್ನು  ಸುಮಾರು 45 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗಿದೆ ಎಂದರು.

ಸುಮಾರು ಒಂದು ಸಾವಿರ ಕೋಟಿ ವೆಚ್ಚದ ಶಿವಮೊಗ್ಗ - ರಾಣಿ ಬೆನ್ನೂರು ರೈಲ್ವೆ ಮಾರ್ಗಕ್ಕೆ ಮುಂದಿನ ಡಿಸೆಂಬರ್‌ನಲ್ಲಿ ಶಂಕುಸ್ಥಾಪನೆ ನಡೆಯಲಿದೆ. ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದಿಂದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯವರೆಗೆ ರೈಲ್ವೆ ಮಾರ್ಗ ನಿರ್ಮಾಣವಾಗಲಿದೆ
ಇಂದು ರೈಲ್ವೆ ಕಾಮಗಾರಿ ಪರಿಶೀಲನೆ ನಂತರ ಹುಬ್ಬಳ್ಳಿಯಲ್ಲಿ ಹಿರಿಯ ರೈಲ್ವೆ ಅಧಿಕಾರಿಗಳ ಜೊತೆಗೆ ಸಭೆ ನಡೆಯಲಿದೆ ಎಂದರು.  ಶಿವಮೊಗ್ಗ ಜಿಲ್ಲೆಯ ರೈಲ್ವೆ ಯೋಜನೆಗಳ ಕುರಿತು ರೈಲ್ವೆ ಇಲಾಖೆಯ ಅಧಿಕಾರಿಗಳ ಜೊತೆಗೆ ಸಂಸದರು ನಡೆಸಿದ ಸಭೆಯಲ್ಲಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಚರ್ಚಿಸಲಾಯಿತು. 

World's tallest railway bridge: ಮಣಿಪುರದಲ್ಲಿ ಸಿದ್ಧವಾಗುತ್ತಿದೆ!


ರೈಲ್ವೆ ರಸ್ತೆ ಮೇಲ್ಸೇತುವೆಗಳು: (3 ಸೇತುವೆಗಳು ರೈಲ್ವೆ ಇಲಾಖೆಯಿಂದ)
ಭದ್ರಾವತಿಯ ಕಡದಕಟ್ಟೆ ಬಳಿಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 34 ಹಾಗೂ ಶಿವಮೊಗ್ಗ ಸವಳಂಗ ರಸ್ತೆಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 49 ಹಾಗೂ ಕಾಶೀಪುರದ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 54 ಬಳಿ ರೈಲ್ವೆ ಇಲಾಖೆಯ ವತಿಯಿಂದ ನಿರ್ಮಿಸಲಾಗುತ್ತಿರುವ ರಸ್ತೆ ಮೇಲ್ಸೇತುವೆಗಳು ಹಾಗೂ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಶಿವಮೊಗ್ಗ ವಿದ್ಯಾನಗರದ ಬಳಿ ಎಲ್.ಸಿ. 46ಕ್ಕೆ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳ ಸ್ಥಳ ಪರಿಶೀಲನೆಯನ್ನು ನಡೆಸಿ ನಂತರ ಸಂಬಂಧಿಸಿದ ರೈಲ್ವೆ ಹಾಗೂ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ  ಈ ಯೋಜನೆಗಳ ಕ್ಷೀಪ್ರ ಅನುಷ್ಠಾನಕ್ಕಾಗಿ ಅಗತ್ಯವಿರುವ ಕ್ರಮ ಕುರಿತಂತೆ ಚರ್ಚಿಸಲಾಯಿತು.

ರೈಲ್ವೆ ಇಲಾಖೆಯ 3 ರಸ್ತೆ ಮೇಲ್ಸೇತುವೆಗಳ ಅಂದಾಜು ವೆಚ್ಚ ರೂ 116 ಕೋಟಿಗಳಾಗಿದ್ದು, ಇದರಲ್ಲಿ ಕಾಮಗಾರಿ ವೆಚ್ಚದ ಶೇಕಡ 50 ರಷ್ಟನ್ನು ಹಾಗೂ ಭೂಸ್ವಾಧೀನದ ಸಂಪೂರ್ಣವೆಚ್ಚವನ್ನು ರಾಜ್ಯ ಸರ್ಕಾರ  ಭರಿಸುತ್ತದೆ. ಕಾಮಗಾರಿ ವೆಚ್ಚದ ಶೇಕಡ 50 ರಷ್ಟನ್ನು ರೈಲ್ವೆ ಇಲಾಖೆ ಭರಿಸುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರದ ಪಾಲು ರೂ. 70 ಕೋಟಿ. ರೈಲ್ವೆ ಇಲಾಖೆಗೆ ರಾಜ್ಯ ಸರ್ಕಾರದಿಂದ ಈಗಾಗಲೇ ರೂ. 8.61 ಕೋಟಿಗಳನ್ನು ಹಾಗೂ ಭೂಸ್ವಾಧೀನಕ್ಕಾಗಿ ರೂ 20.60 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. S.R.C. ಕಂಪನಿಯವರು ಈ 3 ಯೋಜನೆಗಳ ಗುತ್ತಿಗೆ ಪಡೆದಿದ್ದಾರೆ. ಈಗಾಗಲೇ ಕಾಮಗಾರಿಯು ಶೇಕಡ 30-40% ರಷ್ಟು ಆಗಿದ್ದು, ಕಾಮಗಾರಿ ಭರದಿಂದ ಸಾಗುತ್ತಿದೆ. ಮುಂದಿನ ಡಿಸೆಂಬರ್/ ಜನವರಿ ತಿಂಗಳುಗಳಲ್ಲಿ  ಈ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು.

 ಶಿವಮೊಗ್ಗದಲ್ಲಿ ವರುಣನ ಆರ್ಭಟ: ರೈಸ್ ಮಿಲ್ ಗೋಡೆ ಕುಸಿತ, ತಪ್ಪಿದ ಭಾರೀ ದುರಂತ

ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಶಿವಮೊಗ್ಗ ನಗರದ ವಿದ್ಯಾನಗರದ ಬಳಿ ಎಲ್.ಸಿ. ಗೇಟ್ ನಂ. 46 ರಲ್ಲಿ ವೃತ್ತಕಾರದ ರೈಲ್ವೆ ಮೇಲ್ಸೇತುವೆ ಅಂದಾಜು ವೆಚ್ಚ 43.90 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳ್ಳಲಿದೆ. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗ ಯೋಜನೆಯನ್ನು 2 ಹಂತಗಳಲ್ಲಿ ಅನುಷ್ಠನಗೊಳಿಸಲು ನಿರ್ಧರಿಸಲಾಗಿದೆ. ಮೊದಲನೆ ಹಂತದಲ್ಲಿ ಶಿವಮೊಗ್ಗ-ಶಿಕಾರಿಪುರ ನಡುವಿನ ಕಾಮಗಾರಿಗೆ ಸಂಬಂಧಿಸಿದೆ. ಹಾಗೂ ಎರಡನೇ ಹಂತವು ಶಿಕಾರಿಪುರ-ರಾಣೆಬೆನ್ನೂರು ನಡುವಿನ ಕಾಮಗಾರಿಗೆ ಸಂಬಂಧಿಸಿದೆ. ಶಿವಮೊಗ್ಗ –ಶಿಕಾರಿಪುರ ನಡುವಿನ 54 ಕಿ.ಮೀ.ಗಳ ರೈಲು ಮಾರ್ಗದ ನಿರ್ಮಾಣಕ್ಕಾಗಿ ಒಟ್ಟಾರೆ 388 ಎಕರೆ  ಖಾಸಗಿ ಜಮೀನು, ಹಾಗೂ 118 ಎಕರೆ ಅರಣ್ಯ ಭೂಮಿ ಹಾಗೂ 45 ಎಕರೆ ಸರ್ಕಾರಿ ಜಮೀನು ಸ್ವಾಧೀನಕ್ಕೆ ಸೂಚಿಸಲಾಗಿದೆ.

KIADB ಸಂಸ್ಥೆ ಈಗಾಗಲೇ ಎಲ್ಲ ಖಾಸಗಿ ಜಮೀನಿನ ಸ್ವಾಧೀನಕ್ಕಾಗಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿದ್ದು ಇದರಲ್ಲಿ ಸುಮಾರು 220-225  ಎಕರೆ ಭೂಮಿಯ ಮಾಲೀಕರಿಗೆ ಭೂ ಪರಿಹಾರವನ್ನು ವಿತರಣೆ ಮಾಡಿದ್ದು, ಉಳಿದವರಿಗೆ ಅವಾರ್ಡ್ ನೋಟೀಸ್ ಜಾರಿಯಾಗಿದೆ. ರೈಲ್ವೆ ಇಲಾಖೆಗೆ ಜಮೀನು ಹಸ್ತಾಂತರಿಸಲಾಗಿದೆ. ರೈಲ್ವೆ ಇಲಾಖೆಯಿಂದದ ಟೆಂಡರ್‌ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ.

ಕೋಟೆಗಂಗೂರು ಕೋಚಿಂಗ್‌ ಡಿಪೋ:
ಕೋಟೆಗಂಗೂರಿನಲ್ಲಿ ಒಟ್ಟು 111.75 ಕೋಟಿ ವೆಚ್ಚದಲ್ಲಿ ಕೋಚಿಂಗ್ ಯಾರ್ಡ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಲ್ಲಿ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್ ಸ್ಟೇಷನ್ ಸಹ ನಿರ್ಮಾಣ ಮಾಡಲಾಗುತ್ತದೆ.

Latest Videos
Follow Us:
Download App:
  • android
  • ios